ವೈದ್ಯೆ ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣ: ಬಿಜೆಪಿ ನಾಯಕ ಜಿತೇಂದ್ರ ಗೋಥ್ವಾಲ್ ಪೊಲೀಸ್ ವಶಕ್ಕೆ
ಜೈಪುರ: ದೌಸಾದಲ್ಲಿ ವೈದ್ಯೆ ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣದ ಸಂಬಂಧ ಪೊಲೀಸರು ಜೈಪುರದಲ್ಲಿ ಬಿಜೆಪಿ ನಾಯಕ ಜಿತೇಂದ್ರ ಗೋಥ್ವಾಲ್ ಅವರನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಬಿಜೆಪಿ ನಾಯಕ ಜಿತೇಂದ್ರ ಗೋಥ್ವಾಲ್ ಅವರ ನಿವಾಸದಲ್ಲಿ ವಶಕ್ಕೆ ತೆಗೆದುಕೊಂಡ ಬಳಿಕ ವಿಚಾರಣೆಗಾಗಿ ದೌಸಾ ಲಾಲ್ಸೋಟ್‌ಗೆ ಕರೆದೊಯ್ದಿದ್ದಾರೆ. ಪ್ರಕರಣದ ತನಿಖೆ ಹೆಸರಿನಲ್ಲಿ ಗೋಥ್ವಾಲ್ ಅವರನ್ನು ವಶಕ್ಕೆ ಪಡೆಯುವ ಸಲುವಾಗಿ ಬುಧವಾರ ರಾತ್ರಿ 1:45 ರ ಸುಮಾರಿಗೆ ಪೊಲೀಸರು ಸಾಮಾನ್ಯ ಉಡುಪಿನಲ್ಲಿ ಜೈಪುರದ ಬಿಜೆಪಿ ನಾಯಕನ ನಿವಾಸಕ್ಕೆ ಆಗಮಿಸಿದ್ದರು.
ಈ ವೇಳೆ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು ಜಮಾಯಿಸಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಡಾ.ಅರುಣ್ ಚತುರ್ವೇದಿ ಕೂಡ ಅಲ್ಲಿಗೆ ಆಗಮಿಸಿ ಪೊಲೀಸರ ಕಾರ್ಯಶೈಲಿಯ ಬಗ್ಗೆ ಕಿಡಿಕಾರಿದ್ದಾರೆ.
ಇತ್ತೀಚೆಗಷ್ಟೇ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಜಿತೇಂದ್ರ ಗೋಥ್ವಾಲ್ ಅವರು ವೈದ್ಯೆ ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬದೊಂದಿಗೆ ಲಾಲ್ಸೋಟ್‌ನಲ್ಲಿ ಧರಣಿ ನಡೆಸುವ ಮೂಲಕ ಆರ್ಥಿಕ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮತ್ತೆ ಪೆಟ್ರೋಲ್, ಡೀಸೆಲ್ ಲೀಟರ್‌ಗೆ 80 ಪೈಸೆ ಏರಿಕೆ
ಲಾರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಚಾಲಕ
ಹಲಾಲ್ ಮಾಂಸ ವಿವಾದ: ಪ್ರಚೋದನಾಕಾರಿ ಪೋಸ್ಟ್ ಹಾಕುವವರ ವಿರುದ್ಧ ಕ್ರಮ | ಅರಗ ಜ್ಞಾನೇಂದ್ರ
ದೇವರ ವಿಗ್ರಹ ಕೆತ್ತುವ ಮುಸ್ಲಿಮರಿಗೂ ಬಹಿಷ್ಕಾರ ಹಾಕುತ್ತೀರಾ? | ಕುಮಾರಸ್ವಾಮಿ ಪ್ರಶ್ನೆ