ಜನರ ನಡುವೆ ವೈಮನಸ್ಸು ಹುಟ್ಟಿಸುವುದೇ ಬಿಜೆಪಿಯ ನಿತ್ಯ ಕಾಯಕ: ಯು.ಟಿ.ಖಾದರ್ ವಾಗ್ದಾಳಿ

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಬಳಿಕ ಜನಸಾಮಾನ್ಯರ ಕಷ್ಟ ಮತ್ತು ನೋವುಗಳು ಹೆಚ್ಚಾಗಿದ್ದು, ಜನರ ನಡುವೆ ವೈಮನಸ್ಸು ಹುಟ್ಟಿಸುವುದೇ ಬಿಜೆಪಿಯ ನಿತ್ಯ ಕಾಯಕವಾಗಿದೆ ಎಂದು ರಾಜ್ಯ ವಿಪಕ್ಷ ಉಪನಾಯಕ, ಶಾಸಕ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸದೆ ಅವರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳದೆ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವುದು ದುರಂತವಾಗಿದೆ ಎಂದರು.
ಅತಿವೃಷ್ಠಿಯಿಂದಾಗಿ ನಷ್ಟ ಸಂಭವಿಸಿದವರಿಗೆ ಸರ್ಕಾರ ಸಮರ್ಪಕ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ರಸ್ತೆಗಳು ಹದೆಗೆಟ್ಟಿದ್ದು, ಕಡಲ್ಕೊರೆತಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆಯಿಂದಾಗಿ ಕೃಷಿಗಳಿಗೆ ಹಾನಿಯಾಗಿದ್ದರೂ ಈ ತನಕ ಶಾಸಕರುಗಳು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರಕ್ಕೆ ಪ್ರಯತ್ನಿಸಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಒಂದು ಜೊತೆ ಮಾತ್ರ ಸಮವಸ್ತ್ರ ನೀಡಲಾಗಿದೆ. ಅಕ್ಷರ ದಾಸೋಹದಲ್ಲಿ ಕೆಲಸ ಮಾಡುವವರಿಗೆ ವೇತನ ನೀಡಲಾಗುತ್ತಿಲ್ಲ. ಕಾಲೇಜ್ ಗಳಲ್ಲಿನ ಉಪನ್ಯಾಸಕರ ಸಾಮೂಹಿಕ ವರ್ಗಾವಣೆಗಳಿಂದಾಗಿ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗುತ್ತಿದೆ. ವಿದ್ಯಾವಂತರಿಗೆ ಸಮರ್ಪಕ ಉದ್ಯೋಗ ವಂಚನೆಯಾಗುತ್ತಿದೆ ಅಂದ್ರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka