ವಂಚನೆ: ಮಾಜಿ ಒಲಿಂಪಿಯನ್ ಪಿಟಿ ಉಷಾ ವಿರುದ್ಧ ದೂರು ದಾಖಲು
ತಿರುವನಂತಪುರಂ: ಮಾಜಿ ಒಲಿಂಪಿಯನ್ ಪಿಟಿ ಉಷಾ ವಿರುದ್ಧ ವಂಚನೆ ದೂರು ದಾಖಲಾಗಿದೆ.
ಮಾಜಿ ಅಥ್ಲೀಟ್ ಜೆಮ್ಮಾ ಜೋಸೆಪ್ ಅವರು ದೂರು ನೀಡಿದ್ದು, ಪಿ.ಟಿ. ಉಷಾ ವಿರುದ್ಧ ಭಾರತೀಯ ದಂಡ ಸಂಹಿತೆ 420ರ ಅಡಿಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ಪಿಟಿ ಉಷಾ ಬಿಲ್ಡರ್ ಜೊತೆ ಸೇರಿ ತನಗೆ ವಂಚಿಸಿದ್ದಾರೆ ಎಂದು ಜೆಮ್ಮಾ ಜೋಸೆಫ್ ದೂರಿನಲ್ಲಿ ಆರೋಪಿಸಿದ್ದಾರೆ.
ಜೆಮ್ಮಾ ಜೋಸೆಫ್ ಕೋಯಿಕ್ಕೋಡ್ ನಲ್ಲಿ ಪಿಟಿ ಉಷಾ ಅವರ ಗ್ಯಾರೆಂಟಿ ಮೇರೆಗೆ 1,012 ಚದರ ಅಡಿ ನಿವೇಶನವನ್ನು ಖರೀದಿಸಿದರು. ಹಂತ ಹಂತವಾಗಿ ಸುಮಾರು 46 ಲಕ್ಷ ರೂಪಾಯಿಯನ್ನು ಪಾವತಿ ಮಾಡಿದ್ದರು. ಆದರೆ, ಬಿಲ್ಡರ್ ಈಗ ನಿವೇಶನ ನೋಂದಣಿ ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ಜೆಮ್ಮಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೋಯಿಕ್ಕೋಡ್ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ವಿ. ಜಾರ್ಜ್ ಅವರು ಜೆಮ್ಮಾ ಜೋಸೆಫ್ ಅವರ ದೂರನ್ನು ವೆಲ್ಲಾಯಿಲ್ ಪ್ರದೇಶದ ಪೊಲೀಸರಿಗೆ ಹಸ್ತಾಂತರ ಮಾಡಿದ್ದು, ವಿಸ್ತೃತ ತನಿಖೆಗೆ ಸೂಚನೆ ನೀಡಿದ್ದಾರೆ. ಪಿಟಿ ಉಷಾ ಮತ್ತು ಇತರ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕನ್ನಡಪರ ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಪ್ರತಾಪ ತೋರಿಸುವುದು ಬೇಡ: ಕುಮಾರಸ್ವಾಮಿ
ಗುರುದ್ವಾರದಲ್ಲಿ ಧಾರ್ಮಿಕ ಧ್ವಜ ತೆಗೆಯಲು ಯತ್ನಿಸಿದ ಆರೋಪ: ವ್ಯಕ್ತಿಗೆ ಥಳಿತ
ಶ್ರೀಲಂಕಾಕ್ಕೆ ಸೇರಿದ ಗಡಿಯಲ್ಲಿ ಮೀನುಗಾರಿಕೆ: 43 ಭಾರತೀಯ ಮೀನುಗಾರರ ಬಂಧನ
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸಿ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು
ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಕೂಟದ ಫಲಿತಾಂಶ
ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದು ‘ಕನ್ನಡಿಗರ ವಿಕೃತ ಮನಸ್ಥಿತಿ’: ಉದ್ದವ್ ಠಾಕ್ರೆ
‘ವೀರ ಸಾವರ್ಕರ್’ ಪುಸ್ತಕ ಬಿಡುಗಡೆ: ಅಂಬೇಡ್ಕರ್ ಹಾಗೂ ಸಾವರ್ಕರ್ ನಡುವೆ ಉತ್ತಮ ಸಂಬಂಧವಿತ್ತು | ಬಿ.ಎಲ್.ಸಂತೋಷ್