ವಾಣಿಜ್ಯ ಸಂಕಿರ್ಣದಲ್ಲಿ ಭಾರೀ ಸ್ಫೋಟ: 7 ಮಂದಿ ದಾರುಣ ಸಾವು, ಹಲವರಿಗೆ ಗಾಯ - Mahanayaka
2:22 AM Wednesday 11 - December 2024

ವಾಣಿಜ್ಯ ಸಂಕಿರ್ಣದಲ್ಲಿ ಭಾರೀ ಸ್ಫೋಟ: 7 ಮಂದಿ ದಾರುಣ ಸಾವು, ಹಲವರಿಗೆ ಗಾಯ

dhaka
28/06/2021

 ಢಾಕಾ: ಇಲ್ಲಿನ ವಾಣಿಜ್ಯ ಸಂಕಿರ್ಣವೊಂದರಲ್ಲಿ ಭಾನುವಾರ ಸಂಜೆ ಸಂಭವಿಸಿದ ಭಾರಿ ಸ್ಪೋಟಕ್ಕೆ 7 ಜನ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೋಘಾಬಜಾರ್ ನಲ್ಲಿ ಘಟನೆ ಸಂಭವಿಸಿದ್ದು, ಸ್ಪೋಟಕ್ಕೆ ನಿಖರ ಕಾರಣಗಳು ತಿಳಿದು ಬಂದಿಲ್ಲ ಎಂದು ಢಾಕಾ ಪೊಲೀಸ್ ಕಮಿಷನರ್ ಶಫಿಕವುಲ್ಲಾ ಇಸ್ಲಾಂ ತಿಳಿಸಿದ್ದಾರೆ.

ಸ್ಪೋಟದ ತೀವ್ರತೆಗೆ ಏಳು ಕಟ್ಟಡಗಳು ಜಖಂಗೊಂಡಿದ್ದು, ಹತ್ತಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ನಡೆದ ಸ್ಥಳವನ್ನು ಬಾಂಬ್ ನಿಷ್ಕ್ರಿಯ ದಳ ಹಾಗೂ ಭಯೋತ್ಪಾದನೆ ನಿಗ್ರಹ ಪಡೆ ವಶಕ್ಕೆ ಪಡೆದಿದ್ದು ಘಟನೆಗೆ ಏನು ಕಾರಣ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದುರ್ಘಟನೆ ಸಂಭವಿಸಿದ ಸ್ಥಳದ ಹೊಟೇಲ್ ಒಂದರಲ್ಲಿ ಗ್ಯಾಸ್ ಲೈನ್ ಇತ್ತು. ಬಹುಶಃ ಅದು ಸ್ಪೋಟಗೊಂಡಿದೆ ಎಂದು ಕೆಲ ವರದಿಗಳು ತಿಳಿಸಿವೆ.

ಇತ್ತೀಚಿನ ಸುದ್ದಿ