ವರ ನೀರು ತರಲು ಹೋಗಿ ವಾಪಸ್ ಬರುವಷ್ಟರಲ್ಲಿ ನವವಧು ಎಸ್ಕೇಪ್!
ಉತ್ತರಪ್ರದೇಶ: ನವವಿವಾಹಿತೆಯೋರ್ವಳು ಅತ್ತೆಯ ಒಡವೆ, ನಗದು ಕದ್ದು ಎಸ್ಕೇಪ್ ಆದ ಘಟನೆ ಉತ್ತರ ಪ್ರದೇಶದ ಮೈನ್ ಪುರಿ ಎಂಬಲ್ಲಿ ನಡೆದಿದೆ. ತನ್ನ ಪತಿಯ ಜೊತೆಗೆ ತವರು ಮನೆಗೆ ತೆರಳುತ್ತಿದ್ದ ವೇಳೆ ಪತಿಯನ್ನು ಯಾಮಾರಿಸಿ ಸ್ಥಳದಿಂದ ಪರಾರಿಯಾಗಿದ್ದಾಳೆ.
ರಾಜು ಎಂಬಾತ ಮಧ್ಯವರ್ತಿಯ ಸಹಾಯದೊಂದಿಗೆ ವಧುವಿನ ಜೊತೆಗೆ ವಿವಾಹ ನಿಶ್ಚಯಿಸಿದ್ದ. ರಾಜು ತಂದೆ ವಧುದಕ್ಷಿಣೆ ರೂಪದಲ್ಲಿ ವಧುವಿಗೆ 80 ಸಾವಿರ ರೂಪಾಯಿ ನೀಡಿದ್ದರು. ಆಗಸ್ಟ್ 17ರಂದು ಇಬ್ಬರ ವಿವಾಹವೂ ನಡೆಯಿತು. ವಧುವಿಗೆ ಒಡವೆ, ವಸ್ತ್ರ ಎಲ್ಲವನ್ನೂ ವರನ ಕಡೆಯವರೇ ಮಾಡಿಸಿದ್ದರು.
ವಿವಾಹವಾದ ಬಳಿಕ ಪತಿಯನ್ನು ತನ್ನ ತವರಿಗೆ ಕರೆದುಕೊಂಡು ಹೊರಟ ವಧು, ಬಸ್ ನಿಲ್ದಾಣದಲ್ಲಿ, ತನಗೆ ಬಾಯಾರಿಕೆಯಾಗುತ್ತಿದೆ. ನೀರು ತನ್ನಿ ಎಂದು ಹೇಳಿದ್ದಾಳೆ. ರಾಜು ನೀರು ತರಲು ಹೋದ ವೇಳೆ ಸ್ಥಳದಿಂದ ಪರಾರಿಯಾಗಿದ್ದಾಳೆ. ನೀರಿನ ಬಾಟಲಿ ತೆಗೆದುಕೊಂಡು ಬಂದಾಗಿ ಪತ್ನಿ ಪರಾರಿಯಾಗಿರುವುದು ತಿಳಿದು ಬಂದಿದೆ. ಇದೀಗ ನೊಂದ ರಾಜು ಪೊಲೀಸರ ಮೊರೆ ಹೋಗಿದ್ದಾರೆ.
ಇನ್ನಷ್ಟು ಸುದ್ದಿಗಳು…
ಮಸೀದಿ, ಚರ್ಚ್, ದೇವಸ್ಥಾನ ಅಂತ ಇಲ್ಲ, ಯಾವುದೇ ಇದ್ದರೂ ತೆರವು ಮಾಡುತ್ತೇವೆ | ರಾಮನಗರ ಡಿಸಿ
ನೀವು ಲಿಂಬೆ ಸೋಡಾವನ್ನು ಅತೀಯಾಗಿ ಕುಡಿಯುತ್ತೀರಾ? | ಹಾಗಿದ್ದರೆ, ಈ ವಿಚಾರ ನೀವು ತಿಳಿಯಲೇ ಬೇಕು
ಹಾಸ್ಯ ನಟ ರಾಜು ತಾಳಿಕೋಟೆ ಮೇಲೆಯೂ ಹಲ್ಲೆ: ಆಸ್ಪತ್ರೆಗೆ ದಾಖಲಾಗಿರುವ ನಟ
ಸೋದರಳಿಯನ ಪತ್ನಿಗೆ ಹಲ್ಲೆ, ವಿಷ ಕುಡಿಸಲು ಯತ್ನ: ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಗಂಭೀರ ಆರೋಪ
ಹಾಸ್ಯ ನಟ ರಾಜು ತಾಳಿಕೋಟೆ ಮೇಲೆಯೂ ಹಲ್ಲೆ: ಆಸ್ಪತ್ರೆಗೆ ದಾಖಲಾಗಿರುವ ನಟ
ದೇವಸ್ಥಾನ ತೆರವಿನಿಂದ ಕೋಟ್ಯಂತರ ಜನರ ಮನಸ್ಸಿಗೆ ನೋವಾಗಿದೆ: ಸಿ.ಟಿ.ರವಿ