ವರದಕ್ಷಿಣೆ ನೀಡಲು ಕೂಡಿಟ್ಟಿದ್ದ 75 ಲಕ್ಷ ರೂ. ಹಣವನ್ನು ಹಾಸ್ಟೆಲ್ ನಿರ್ಮಾಣಕ್ಕೆ ದಾನ ಮಾಡಿದ ಯುವತಿ!
ರಾಜಸ್ಥಾನ: ವರದಕ್ಷಿಣೆ ನೀಡಲು ಕೂಡಿಟ್ಟ 75 ಲಕ್ಷ ರೂಪಾಯಿಯನ್ನು ಯುವತಿಯೋರ್ವರು ಮಹಿಳೆಯರ ಹಾಸ್ಟೆಲ್ ನಿರ್ಮಾಣಕ್ಕೆ ದಾನವಾಗಿ ನೀಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ತನ್ನ ತಂದೆಯ ಸಹಕಾರದೊಂದಿಗೆ ಮಹಿಳೆಯರಿಗೆ ಉಚಿತ ಹಾಸ್ಟೆಲ್ ನಿರ್ಮಾಣಕ್ಕೆ ಯುವತಿ ಮುಂದಾಗಿದ್ದಾರೆ.
ಇಲ್ಲಿನ ಬಾರ್ಮರ್ ನಗರದ ಕಿಶೋರ್ ಸಿಂಗ್ ಕಾನೋಡ್ ಅವರ ಮಗಳಾಗಿರುವ ಅಂಜಲಿ ಕನ್ವರ್ ಅವರು, ತನ್ನ ಮದುವೆಗೆ ವರದಕ್ಷಿಣೆ ನೀಡಲು 75 ಲಕ್ಷ ರೂಪಾಯಿ ಕೂಡಿಟ್ಟಿದ್ದರು. ಆದರೆ ಸಾಮಾಜಿಕ ಹೋರಾಟದ ಮನೋಭಾವ ಹೊಂದಿದ್ದ ಅವರು, ಈ ಹಣವನ್ನು ವರದಕ್ಷಿಣೆಗೆ ನೀಡುವ ಬದಲು ಸಮಾಜಕ್ಕೆ ಉಪಯೋಗವಾಗುವಂತಹ ಕಾರ್ಯಕ್ಕೆ ವಿನಿಯೋಗಿಸಬೇಕು ಎಂದು ಆಸೆ ಪಟ್ಟಿದ್ದರಂತೆ.
ಅಂಜಲಿ ಅವರಿಗೆ ಇದೀಗ ಮದುವೆ ಫಿಕ್ಸ್ ಆಗಿದ್ದು, ಈ ವೇಳೆ ಅವರ ಭಾವಿ ಪತಿ ಪ್ರವೀಣ್ ಸಿಂಗ್ ಅವರು, ತನ್ನ ಭಾವಿ ಪತ್ನಿಯ ಮನಸ್ಸಿನ ಆಸೆ ಏನು ಎನ್ನುವುದನ್ನು ತಿಳಿದುಕೊಂಡಿದ್ದು, ಈ ವೇಳೆ ಹಾಸ್ಟೆಲ್ ನಿರ್ಮಾಣದ ಕನಸು ಅಂಜಲಿಗಿದೆ ಎನ್ನುವುದು ತಿಳಿಯುತ್ತಿದ್ದಂತೆಯೇ ತನಗೆ ವರದಕ್ಷಿಣೆ ಬೇಡ, ಆ ಹಣವನ್ನು ಹಾಸ್ಟೆಲ್ ನಿರ್ಮಾಣಕ್ಕೆ ದಾನ ಮಾಡುವಂತೆ ಅಂಜಲಿಯ ಪರವಾಗಿ ನಿಂತಿದ್ದಾರೆ.
ಇನ್ನೂ ಅಂಜಲಿ ಅವರಿಗೆ ಹಾಸ್ಟೆಲ್ ನಿರ್ಮಾಣದ ಕನಸು ಹಿಂದಿನಿಂದಲೇ ಇತ್ತು ಹೀಗಾಗಿ ಅವರ ತಂದೆ ಕೂಡ ಅದಕ್ಕಾಗಿ ಪರಿಶ್ರಮಪಟ್ಟಿದ್ದರು. 1 ಕೋಟಿ ರೂಪಾಯಿ ಹಣದಲ್ಲಿ ಈಗಾಗಲೇ ಕಟ್ಟಡ ನಿರ್ಮಿಸಿದ್ದರು. ಆದರೆ ಉಳಿದ 50ರಿಂದ 75 ಲಕ್ಷ ರೂಪಾಯಿ ಕಾಮಕಾರಿಗೆ ಅಗತ್ಯವಿತ್ತು. ಈ ಹಣವನ್ನು ಇದೀಗ ಮಗಳೇ ನೀಡಿದ್ದಾರೆ. ಹೀಗಾಗಿ ಹಾಸ್ಟೆಲ್ ನಿರ್ಮಾಣ ಸಂಪೂರ್ಣಗೊಳ್ಳಲಿದೆ.
ತಂದೆ ಹಾಗೂ ಮಗಳ ಈ ಸಾಮಾಜಿಕ ಸೇವೆಯ ತುಡಿತ ಕಂಡು ಸಾರ್ವಜನಿಕರು ಅಭಿಮಾನದಿಂದ ಮೂಕರಾಗಿದ್ದಾರೆ. ಇವರಿಬ್ಬರ ಪರಿಶ್ರಮದಿಂದಾಗಿ ಮುಂದೆ, ಬಹಳಷ್ಟು ಬಡ ಮಹಿಳಾ ವಿದ್ಯಾರ್ಥಿಗಳು ಈ ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸ ನಡೆಸಲಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಹಿಳಾ ಸಿಬ್ಬಂದಿಗಳೊಂದಿಗೆ ಆರೋಗ್ಯಾಧಿಕಾರಿ ಚೆಲ್ಲಾಟ: ವಿಡಿಯೋ ವೈರಲ್
ತೀವ್ರ ಎದೆ ನೋವಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಅಣ್ಣಾ ಹಜಾರೆ
ಪರೀಕ್ಷೆ ಬರೆಯಲು ತೆರಳಿದ್ದ ಯುವತಿಯ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ!
ಇಬ್ಬರ ಪ್ರಾಣ ಬಲಿ ಪಡೆದ ದುಬಾರಿ ಟೊಮೆಟೋ!
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಬೆದರಿಕೆ: ಹಿಂದೂ ಜಾಗರಣ ವೇದಿಕೆಯ ಮುಖಂಡನ ವಿರುದ್ಧ ಪ್ರಕರಣ ದಾಖಲು