ವರನಿಗೆ ಕೊರೊನಾ, ಪಿಪಿಇ ಕಿಟ್ ಧರಿಸಿ ತಾಳಿಕಟ್ಟಿಸಿಕೊಂಡ ವಧು! - Mahanayaka
10:24 AM Sunday 22 - September 2024

ವರನಿಗೆ ಕೊರೊನಾ, ಪಿಪಿಇ ಕಿಟ್ ಧರಿಸಿ ತಾಳಿಕಟ್ಟಿಸಿಕೊಂಡ ವಧು!

sharath abhirami
25/04/2021

ತಿರುವನಂತಪುರಂ: ಮದುವೆಗೆ ದಿನ ನಿಗದಿಯಾಗಿತ್ತು. ವಧು-ವರ ಮದುವೆಗೆ ಸಿದ್ಧವಾಗಿದ್ದರು, ಈ ನಡುವೆ ಕೊರೊನಾ ಈ ಮದುವೆಗೆ ವಿಲನ್ ನಂತೆ ಅಡ್ಡಿಯಾಗಿದೆ. ಆದರೆ ಕೊರೊನಾವನ್ನು ಲೆಕ್ಕಿಸದೇ ಜೋಡಿ ಆಸ್ಪತ್ರೆಯಲ್ಲಿಯೇ ಮದುವೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಅಲಫ್ಪುಳದಲ್ಲಿ ಈ ಘಟನೆ ನಡೆದಿದ್ದು, ಮದುವೆಗೆ ಸಿದ್ಧನಾಗಿದ್ದ ವರನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆದರೆ ಮದುವೆಯನ್ನು ನಿಲ್ಲಿಸಲು ಇಷ್ಟವಿಲ್ಲದ ಕಾರಣ,  ಜಿಲ್ಲಾಧಿಕಾರಿಗಳ ಅನುಮತಿ ಪಡೆದ ವಧು-ವರ ಆಸ್ಪತ್ರೆಯಲ್ಲಿಯೇ ಮದುವೆಯಾಗಿದ್ದಾರೆ.

ಪಿಪಿಇ ಕಿಟ್ ಧರಿಸಿ ವಧುವು ಆಸ್ಪತ್ರೆಗೆ ಬಂದಿದ್ದು, ವರ ಮಾಸ್ಕ್ ಧರಿಸಿಕೊಂಡು ಬಂದಿದ್ದಾರೆ. ವರ-ವಧುವಿಗೆ ತಾಳಿ ಕಟ್ಟಿ ಪರಸ್ಪರ ಹಾರ ಬದಲಿಸಿಕೊಂಡಿದ್ದಾರೆ.  ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Provided by

ಇತ್ತೀಚಿನ ಸುದ್ದಿ