ಭೀಮಾ ಕೋರೇಗಾಂವ್ ಪ್ರಕರಣದಲ್ಲಿ ಬಂಧಿತರಾಗಿದ್ದ ವರವರ ರಾವ್ ಗೆ ಜಾಮೀನು ಮಂಜೂರು - Mahanayaka
6:50 PM Friday 20 - September 2024

ಭೀಮಾ ಕೋರೇಗಾಂವ್ ಪ್ರಕರಣದಲ್ಲಿ ಬಂಧಿತರಾಗಿದ್ದ ವರವರ ರಾವ್ ಗೆ ಜಾಮೀನು ಮಂಜೂರು

22/02/2021

ಮುಂಬೈ:  ಭೀಮಾ ಕೋರೆಗಾಂವ್  ಪ್ರಕರಣದಲ್ಲಿ ಬಂಧಿತರಾಗಿದ್ದ ಕವಿ, ಸಾಮಾಜಿಕ ಹೋರಾಟಗಾರ  ವರವರ ರಾವ್ ಅವರಿಗೆ ಸೋಮವಾರ ಬಾಂಬೆ ಹೈಕೋರ್ಟ್ ಆರು ತಿಂಗಳ ಅವಧಿಯ ಮಧ್ಯಂತರ ಜಾಮೀನು ನೀಡಿದೆ.

82 ವರ್ಷ ವಯಸ್ಸಿನ ವರವರ ರಾವ್ ಅವರಿಗೆ  ವೈದ್ಯಕೀಯ ಕಾರಣಗಳಿಗಾಗಿ ಕಾರಣಗಳಿಗಾಗಿ ಜಾಮೀನು ನೀಡಲಾಗಿದೆ. ಎಲ್ಗಾರ್ ಪರಿಷದ್ ಪ್ರಕರಣ ಹಾಗೂ ಮಾವೋವಾದಿ ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪದಲ್ಲಿ 2018ರ ಆಗಸ್ಟ್ 28ರಂದು ಅವರನ್ನು ಬಂಧಿಸಲಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ವರವರ ರಾವ್ ಅವರಿಗೆ ಮಹಾರಾಷ್ಟ್ರ ಹೈಕೋರ್ಟ್ ಸೂಚನೆಯಂತೆ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.  ಆ ಬಳಿಕ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಶ್ ಪಿಟಾಲೆ ಅವರ ನ್ಯಾಯ ಪೀಠ, ರಾವ್ ಅವರ ಆರೋಗ್ಯ ಸ್ಥಿತಿ ಗಮನಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಎಂದು ಆದೇಶಿಸಿತ್ತು. ಆದರೆ, ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಜಾಮೀನು ನೀಡಿದೆ.


Provided by

ರಾವ್ ಅವರಿಗೆ ವೈದ್ಯಕೀಯ ಕಾರಣಗಳಿಗೆ ಜಾಮೀನು ನೀಡದೇ ಇದ್ದರೆ, ಮಾನವ ಹಕ್ಕುಗಳ ತತ್ವಗಳನ್ನು ರಕ್ಷಿಸುವ ತನ್ನ ಕರ್ತವ್ಯದಿಂದ ದೂರ ಉಳಿದಂತಾಗುತ್ತದೆ ಎಂದು ಹೈಕೋರ್ಟ್  ಹೇಳಿದ್ದು, 50 ಸಾವಿರ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಜಾಮೀನುದಾರರು ಅಷ್ಟೇ ಮೊತ್ತದ ಬಾಂಡ್ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

ಇತ್ತೀಚಿನ ಸುದ್ದಿ