ಸುಬ್ರಮಣಿಯನ್ ಸ್ವಾಮಿ, ವರುಣ್ ಗಾಂಧಿಗೆ ಕಾರ್ಯಕಾರಿಣಿಯಿಂದ ಗೇಟ್ ಪಾಸ್ ನೀಡಿದ ಬಿಜೆಪಿ!
ನವದೆಹಲಿ: ಬಿಜೆಪಿ ಪಕ್ಷವನ್ನು ವಿಮರ್ಶಿಸಿ, ಬುದ್ಧಿ ಹೇಳುತ್ತಿದ್ದ ಡಾ.ಸುಬ್ರಮಣಿಯನ್ ಸ್ವಾಮಿ ಹಾಗೂ ಬಿಜೆಪಿ ಸಂಸದ ವರುಣ್ ಗಾಂಧಿ, ಸಂಸದೆ ಮೇನಕಾ ಗಾಂಧಿ, ಬೀರೇಂದ್ರ ಸಿಂಗ್ ಅವರನ್ನು ಬಿಜೆಪಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿಯಿಂದ ಹೊರಗಿಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಪುನಾರಚನೆ ಮಾಡಲಾಗಿದ್ದು, ಲಖಿಂಪುರ್ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರ ಪರವಾಗಿ ಹೇಳಿಕೆ ನೀಡಿದ ಮತ್ತು ಸರ್ಕಾರದ ನಿಲುವನ್ನು ಟೀಕಿಸಿದ್ದ ಬಿಜೆಪಿ ಸಂಸದ ವರುಣ್ ಗಾಂಧಿ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಕೇಂದ್ರದ ಮಾಜಿ ಸಚಿವೆ ಮತ್ತು ಸುಲ್ತಾನಪುರ ಕ್ಷೇತ್ರದ ಸಂಸದೆ ಮೇನಕಾ ಗಾಂಧಿ ಅವರನ್ನು ಕೂಡ ಬಿಜೆಪಿ ಕಾರ್ಯಕಾರಣಿಯಿಂದ ಹೊರಗಿಡಲಾಗಿದೆ. ಕೇಂದ್ರದ ಮಾಜಿ ಸಚಿವ ಬೀರೇಂದ್ರ ಸಿಂಗ್ ಮತ್ತು ಸರ್ಕಾರವನ್ನು ಪದೇಪದೇ ಟೀಕಿಸುವ ಮೂಲಕ ಬಿಜೆಪಿಗೆ ಬಿಸಿತುಪ್ಪವಾಗಿರುವ ಡಾ. ಸುಬ್ರಮಣಿಯನ್ ಸ್ವಾಮಿ ಅವರನ್ನು ಕೂಡ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಪಟ್ಟಿಯಿಂದ ಹೊರಗಿಡಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಬಿಜೆಪಿ ನಾಯಕರು ಕಾರಿನಲ್ಲಿ ಬರುವ ವೇಳೆ ಎಚ್ಚರವಾಗಿರಿ | ಸಾರ್ವಜನಿಕರಿಗೆ ಡಿ.ಕೆ.ಶಿವಕುಮಾರ್ ಸಲಹೆ
ತನ್ನನ್ನು ಸಾಕಿದ ವ್ಯಕ್ತಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟ ಗೊರಿಲ್ಲ: ನೆಟ್ಟಿಗರ ಹೃದಯ ಕರಗಿಸಿದ ಫೋಟೋ
ಯೋಗ ಶಿಕ್ಷಕನಿಂದ ಯುವತಿಯ ಅತ್ಯಾಚಾರ: ಯೋಗದ ಹೆಸರಿನಲ್ಲಿ ಶಿಕ್ಷಕನ ಕಾಮಲೀಲೆ ಬಯಲು
ಹಾವಿನ ಜೊತೆ ಡಾನ್ಸ್: ಸಣ್ಣ ಯಡವಟ್ಟಿನಿಂದ ಪ್ರಾಣ ಕಳೆದುಕೊಂಡ ವೃದ್ಧ
ದೇವಿ ವೇಷ ಧರಿಸಿ ತ್ರಿಶೂಲ ಹಿಡಿದು ನಿಂತ ಸಂಜನಾ ಗಲ್ರಾನಿ: ಏನ್ ವಿಶೇಷ?
ಪ್ರಚೋದನಾತ್ಮಕ ಅವಹೇಳನಾಕಾರಿ ಭಾಷಣ: ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲು