ಕರ್ನಾಟಕದ ಬಲಿಷ್ಠ ಆನೆ ಅಭಿಮಾನ್ಯು ಕುರಿತು ಅಚ್ಚರಿಯ ವಿಚಾರಗಳನ್ನು ಬಿಚ್ಚಿಟ್ಟ ಮಾವುತ ವಸಂತ್!

ಮೂಡಿಗೆರೆ ತಾಲೂಕಿನ ಸುತ್ತಮುತ್ತ ಕಾಡಾನೆ ಹಾವಳಿ ಮಿತಿಮೀರಿದ್ದು ಅವುಗಳನ್ನು ಹಿಡಿದು ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಬಲಿಷ್ಠ ಆನೆ ಹಾಗೂ ಮೈಸೂರು ದಸರಾದ ಅಂಬಾರಿ ಹೊರುವ ಅಭಿಮನ್ಯು ಕುರಿತು ಹಲವು ವಿಚಾರಗಳನ್ನು ತಿಳಿದುಕೊಳ್ಳಲು ಅಭಿಮನ್ಯುವಿನ ಅಚ್ಚುಮೆಚ್ಚಿನ ಮಾವುತ ವಸಂತ್ ಅವರನ್ನು ಭೇಟಿ ಮಾಡಲಾಯಿತು.
ಮಾವುತ ವಸಂತ ಅವರು ಅಭಿಮಾನ್ಯವಿನ ಜೊತೆಗಿನ ಒಡನಾಟವನ್ನು ಹಂಚಿಕೊಂಡರು. ವಸಂತ ಅಂದ್ರೆ, ಅಭಿಮಾನ್ಯು ಅಭಿಮಾನ್ಯು ಅಂದ್ರೆ ವಸಂತ ಅನ್ನೋ ಮಾತು ಇದೆ. ಅಭಿಮಾನ್ಯುಗೆ ಮಾವುತ ವಸಂತ್ ಅಂದ್ರೆ ಪ್ರಾಣ, ವಸಂತ್ ಹೇಳಿದಂತೆ ಅಭಿಮಾನ್ಯು ಕೇಳ್ತಾನಂತೆ!
ವಸಂತ್ ಅವರ ತಂದೆ ಇದೇ ಅಭಿಮಾನ್ಯು ಜೊತೆಗೆ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರಿಗೆ ಅಸಿಸ್ಟೆಂಟ್ ಆಗಿ ವಸಂತ್ ಕೆಲಸ ಮಾಡುತ್ತಿದ್ದರು. ತಂದೆಗೆ ನಿವೃತ್ತಿ ಆದ ಬಳಿಕ ವಸಂತ್ ಅವರು ಮುಖ್ಯ ಮಾವುತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮದ ಬಂದಾಗ ಬೇರೆ ಆನೆಗಳನ್ನು ಕಟ್ಟಿ ಹಾಕುತ್ತಾರೆ. ಆದರೆ, ಅಭಿಮಾನ್ಯುವನ್ನು ಮಾತ್ರ ಕಟ್ಟಿ ಹಾಕುವುದಿಲ್ಲ. ಅಭಿಮಾನ್ಯು ಮದ ಬಂದರೂ ಶಾಂತವಾಗಿರುತ್ತದೆ. ಮದ ಬಂದ ಸಂದರ್ಭದಲ್ಲಿ ಕೂಡ ಆನೆ ಹಿಡಿಯುವ ಕಾರ್ಯಾಚರಣೆಗಳಲ್ಲಿ ಅಭಿಮಾನ್ಯು ಭಾಗಿಯಾಗಿದ್ದ ಎಂದು ವಸಂತ್ ಹೇಳುತ್ತಾರೆ.
ಮೂಡಿಗೆರೆ ತಾಲೂಕಿನ ಸುತ್ತಮುತ್ತ ಕಾಡಾನೆ ಹಿಡಿಯುವ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ. ಎರಡು ಆನೆಗಳನ್ನು ಕಾರ್ಯಾಚರಣೆ ಮೂಲಕ ಸೆರೆ ಹಿಡಿಯಲಾಗಿದೆ. ಮೂರನೇ ಆನೆಯನ್ನು ಹಿಡಿಯಲು ಕಾರ್ಯಾಚರಣೆ ಮುಂದುವರಿದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka