ಹೊಸ ವರ್ಷದಲ್ಲಿ ಮತದಾರರಿಗೆ ವಾಟಾಳ್‌ ನಾಗರಾಜ್ ವಿಶೇಷ ಮನವಿ - Mahanayaka
7:34 AM Thursday 12 - December 2024

ಹೊಸ ವರ್ಷದಲ್ಲಿ ಮತದಾರರಿಗೆ ವಾಟಾಳ್‌ ನಾಗರಾಜ್ ವಿಶೇಷ ಮನವಿ

vatal nagaraj
02/01/2023

ಚಾಮರಾಜನಗರ: ಈ ಹೊಸ ವರ್ಷದಲ್ಲಿ  ನಾಡಿನ, ದೇಶದ ಜನತೆ, ಮತದಾರರು ಬದಲಾವಣೆ ಆಗಬೇಕು. ಪ್ರಾಮಾಣಿಕರನ್ನು ನಂಬಬೇಕು. ಪ್ರಾಮಾಣಿಕತೆಗೆ ಬೆಲೆ ಕೋಡಬೇಕು.  ಪ್ರಾಮಾಣಿಕರನ್ನು ಶಾಸನಸಭೆ  ಸಂಸತ್‌ ಗೆ ಆಯ್ಕೆ ಮಾಡಿ ಕಳುಹಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‌ನಾಗರಾಜ್ ಮನವಿ ಮಾಡಿದರು.

ತಾಲೂಕಿನ ಕಸ್ತೂರು ದೊಡ್ಡಮ್ಮತಾಯಿ ದೇವಸ್ಥಾನಕ್ಕೆ ಭೇಟಿ ದೇವರ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಹೊಸ ವರ್ಷ ಎಂದರೆ ಪ್ರಾಮಾಣಿಕತೆ, ಸತ್ಯ, ಧರ್ಮ ಇದನ್ನು ಹೊಸ ವರ್ಷದಲ್ಲಿ ಪಾಲನೆ ಮಾಡಬೇಕಾದ ಕರ್ತವ್ಯ.  ಬಹಳ ಮುಖ್ಯವಾಗಿ ಚುನಾವಣೆಗಳೇ ಪ್ರಾಮುಖ್ಯತೆ, ಅಧಿಕಾರ ಪ್ರಾಮುಖ್ಯತೆ, ಪ್ರಾಮಾಣಿಕತೆ, ನಂಬಿಕೆ, ಜಾತ್ಯಾತೀತ ಇದು ನಮ್ಮ ಸಂದೇಶ ಆಗಬೇಕು.  ಮಾಹಾತ್ಮ ಗಾಂಧೀಜಿಯರು ಈ ದೇಶದ, ವಿಶ್ವದ ಮಹಾನ್ ವ್ಯಕ್ತಿ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದೆ ಬಡವರು ಬಡವರಾಗಿಯೇ ಇದ್ದಾರೆ, ಯುಳ್ಳವರು ಯುಳ್ಳರಾಗಿಯೇ ಇದ್ದಾರೆ ಎಂದರು.

ರಾಜ್ಯ, ದೇಶದ  ಪಕ್ಷಗಳು ವ್ಯಾಪಾರೀಯ ಕೇಂದ್ರ :   ದೇಶ, ರಾಜ್ಯದಲ್ಲಿ ಭ್ರಷ್ಠಾಚಾರ, ಲಂಚ, ಜಾತಿ ತಾಂಡವ ಆಡುತ್ತಿದೆ. ಶಾಸನಸಭೆ, ಸಂಸತ್‌ನಲ್ಲಿ ಪ್ರಾಮಾಣಿಕರ ಕೊರತೆ ಹೆಚ್ಚು ಇದೆ. ನಮ್ಮ ರಾಜ್ಯ, ದೇಶದ ಪಕ್ಷಗಳು ವ್ಯಾಪಾರೀಯ ಕೇಂದ್ರವಾಗಿದೆ. ರಾಜಕೀಯ ಪಕ್ಷಗಳು ಹಾಳಾಗಿವೆ. ರಾಜಕೀಯ ಪಕ್ಷಗಳನ್ನು ಹತೋಟಿಗೆ ತರದೇ ಹೋದರೆ ದೇಶದಲ್ಲಿ ಚುನಾವಣೆ ವ್ಯವಸ್ಥೆ ಹಾಳಾಗುತ್ತದೆ ಎಂದರು.

ಸರ್ಕಾರ ಶ್ವೇತ್ರಪತ್ರ ಹೊರಡಿಸಲಿ :

ಚುನಾವಣೆ ವ್ಯವಸ್ಥೆ ಸಂಪೂರ್ಣವಾಗಿ ಬದಲಾವಣೆ ಆಗಬೇಕು. ಚುನಾವಣೆಯಲ್ಲಿ ಪ್ರಾಮಾಣಿಕರು ಗೆಲ್ಲಬೇಕು. ಈ ಹೊಸ ವರ್ಷದಲ್ಲಿ ನಾಡಿನ ಜನರು, ದೇಶದ ಜನರು ಪ್ರಾಮಾಣಿಕತೆ ಒತ್ತು ನೀಡಬೇಕು. ಚಾಮರಾಜನಗರ ಜಿಲ್ಲೆ ಇದೊಂದು ಆದರ್ಶ ಜಿಲ್ಲೆ. ಇದು ಅತ್ಯಂತ ಹೋರಾಟ ಮಾಡುವ ಮೂಲಕ ಜಿಲ್ಲೆ ಮಾಡಿದ್ದೇನೆ. ಗಡಿನಾಡು ಬೆಳೆಯಬೇಕು. ಅದಕ್ಕೆ ನಿರಂತರ ಹೋರಾಟ ಮಾಡುತ್ತೇನೆ. ರಾಜ್ಯ ಸರ್ಕಾರ ಈ ಗಡಿನಾಡನ್ನು ಕಡೆಗಣಸಿದ್ದಾರೆ. ಇವರಿಗೆ ಚಾಮರಾಜನಗರ ಬೇಕಾಗಿಲ್ಲ. ಇವರಿಗೆ ಬೇಕಾದ ತಾಲೂಕು, ಜಿಲ್ಲೆಗಳಿಗೆ ಸರ್ಕಾರ ಅನುದಾನ  ಕೊಡುತ್ತಿದೆ. ತಂದೆ, ತಾಯಿ ಇಲ್ಲದೆ ತಬ್ಬಲಿಯಾಗಿರುವ ಚಾಮರಾಜನಗರಕ್ಕೆ ಶಕ್ತಿ ತುಂಬಬೇಕಿದೆ. ಕರ್ನಾಟಕ ಸರ್ಕಾರ ಯಾವ ಯಾವು ಜಿಲ್ಲೆಗೆ ಎಷ್ಟೆಷ್ಟು ಅನುದಾನ ಬಿಡುಗಡೆ  ಮಾಡಿದೆ ಶ್ವೇತಪತ್ರ ಹೊರಡಿಸಲಿ ಚಾಮರಾಜನಗರ ಏಕೆ ಕಡೆಗಣಿಸಿದ್ದೀರಿ ಎಂದು ಖಾರವಾಗಿ ವಾಟಾಳ್‌ನಾಗರಾಜ್  ತರಾಟೆ ತಗೆದುಕೊಂಡರು.  ಇದಕ್ಕಾಗಿ ಸರ್ಕಾರದ ವಿರುದ್ದ ನಿರಂತರ ಹೋರಾಟ ಮಾಡುತ್ತೇನೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ