ವಯಸ್ಸಾದ ಮೇಲೆ ಸಾಯಲೇ ಬೇಕಲ್ಲವೇ? | ಕೊರೊನಾ ಸಾವಿನ ಬಗ್ಗೆ ಬಿಜೆಪಿ ಸಚಿವನ ಹೇಳಿಕೆ
ಭೋಪಾಲ್: ಕೊರೊನಾ ಸೋಂಕಿನಿಂದ ಸಂಭವಿಸುತ್ತಿರುವ ಸಾವನ್ನು ಯಾರಿದಂದಲೂ ತಡೆಯಲು ಸಾಧ್ಯವಿಲ್ಲ. ವಯಸ್ಸಾಗುತ್ತಿರುವ ಜನರು ಸಾಯುತ್ತಿದ್ದಾರೆ. ವಯಸ್ಸಾದ ಮೇಲೆ ಸಾಯಲೇಬೇಕಲ್ಲವೇ? ಹೀಗಂತ ಹೇಳಿಕೆ ನೀಡಿದ್ದು ಮಧ್ಯಪ್ರದೇಶ ಬಿಜೆಪಿ ಸಚಿವ ಪ್ರೇಮ್ ಸಿಂಗ್ ಪಟೇಲ್.
ಕೊರೊನಾ ಸೋಂಕಿನಿಂದಾಗಿ ಈ ಸಾವುಗಳು ಸಂಭವಿಸುತ್ತಿವೆ ಎಂಬುದನ್ನು ಒಪ್ಪುತ್ತೇನೆ. ಆದರೆ ಯಾರೂ ಈ ಸಾವನ್ನು ತಡೆಯಲು ಸಾಧ್ಯವಿಲ್ಲ. ನಾನೊಬ್ಬನೇ ಈ ಮಾತನ್ನು ಹೇಳುತ್ತಿಲ್ಲ. ಆದರೆ ಈ ಸೋಂಕಿನ ವಿರುದ್ಧ ಎಲ್ಲರೂ ಹೋರಾಡಲು ಸಹಕರಿಸಬೇಕಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಕೊರೊನಾ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಚರ್ಚಿಸಿದ್ದೇವೆ. ಜನರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವೈದ್ಯರನ್ನು ಭೇಟಿಯಾಗಬೇಕು. ನಾವು ವೈದ್ಯರನ್ನೂ ನಿಯೋಜಿಸಿದ್ದೇವಲ್ಲವೇ? ದಿನನಿತ್ಯ ಸೋಂಕಿನಿಂದ ಹಲವರು ಸಾಯುತ್ತಿದ್ದಾರೆ ಎಂದು ನೀವು ಹೇಳುತ್ತಿದ್ದೀರಿ. ಈ ಸಾವಿನ ಬಗ್ಗೆ ಹೇಳುವುದಾದರೆ, ಕೆಲವರಿಗೆ ವಯಸ್ಸಾಗುತ್ತಿದೆ. ಈ ಕಾರಣಕ್ಕೇ ಸಾಯುತ್ತಿದ್ದಾರೆ. ವಯಸ್ಸಾದವರು ಸಾಯಲೇಬೇಕಲ್ಲವೇ ಎಂದು ನಿರ್ಲಕ್ಷ್ಯದಿಂದ ಅವರು ಹೇಳಿಕೆ ನೀಡಿದ್ದಾರೆ.
ಇನ್ನೂ ಕೊರೊನಾ ರೋಗಿಗಳ ಸಾವಿನ ಬಗ್ಗೆ ಕಾರ್ಮಿಕರು ನೀಡಿದ ಹೇಳಿಕೆ ನೀಡಿದ ಆತಂಕವನ್ನುಂಟು ಮಾಡಿದೆ. ಕೆಲವು ದಿನಗಳಿಂದ ಸಾವನ್ನಪ್ಪುವವರ ಸಂಖ್ಯೆ ಏರಿಕೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ಸುಮಾರು 200 ಮಂದಿಯನ್ನು ಹೂತಿದ್ದೇವೆ. ಜಾಗವೇ ಇಲ್ಲದಂತಾಗಿದೆ. ಇದೀಗ ಎರಡು ಕೆರೆ ಜಾಗವನ್ನು ನೀಡಲಾಗಿದೆ ಎಂದು ಭೋಪಾಲ್ ನಲ್ಲಿನ ಭದ್ಬದಾ ವಿಶ್ರಾಮ್ ಘಾಟ್‌ನಲ್ಲಿನ ಕೆಲಸಗಾರರು ಹೇಳುತ್ತಿದ್ದಾರೆ.