ವೇದಿಕೆಯಲ್ಲಿಯೇ ಅಶ್ವಥ್ ನಾರಾಯಣ, ಡಿ.ಕೆ.ಸುರೇಶ್ ನಡುವೆ ಜಟಾಪಟಿ - Mahanayaka
3:25 AM Wednesday 11 - December 2024

ವೇದಿಕೆಯಲ್ಲಿಯೇ ಅಶ್ವಥ್ ನಾರಾಯಣ, ಡಿ.ಕೆ.ಸುರೇಶ್ ನಡುವೆ ಜಟಾಪಟಿ

ashwath narayan
03/01/2022

ರಾಮನಗರ:  ಸರ್ಕಾರಿ ಕಾರ್ಯಕ್ರಮದ ವೇದಿಕೆ ರಾಜಕೀಯ ಹೈಡ್ರಾಮಾಕ್ಕೆ ಕಾರಣವಾದ ಘಟನೆ ರಾಮನಗರದಲ್ಲಿ ನಡೆದಿದ್ದು, ಸಚಿವ ಅಶ್ವಥ್ ನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ನಡುವೆ ವೇದಿಕೆಯಲ್ಲಿಯೇ  ಘರ್ಷಣೆ ನಡೆದಿದೆ.

ಅಶ್ವಥ್ ನಾರಾಯಣ್ ಅವರ ಭಾಷಣದ ವೇಳೆ ಬಿಜೆಪಿಗೆ ಧಿಕ್ಕಾರ ಎಂದು ಸಭೆಯಿಂದ ಕೂಗಿದ್ದು, ಈ ವೇಳೆ ಆಕ್ರೋಶಿತರಾದ ಅಶ್ವಥ್ ನಾರಾಯಣ, ಯಾವನೋ ಅವನು ಗಂಡ್ಸು… ಎದ್ದು ನಿಂತು ಕೂಗು ಎಂದು ಅವಾಜ್ ಹಾಕಿದ್ದಾರೆ. ಆ ಬಳಿಕ ಅಶ್ವಥ್ ನಾರಾಯಣ ಅವರ ರಾಜಕೀಯ ವಿಚಾರವನ್ನು ಕೆದಕಿ ಭಾಷಣ ಮಾಡಿದ್ದು, ಈ ವೇಳೆ ಸಂಸದ ಡಿ.ಕೆ.ಸುರೇಶ್ ಆಕ್ರೋಶಗೊಂಡಿದ್ದಾರೆ.

ಅಶ್ವಥ್ ನಾರಾಯಣ ಭಾಷಣದಿಂದ ಆಕ್ರೋಶಗೊಂಡ ಡಿ.ಕೆ.ಸುರೇಶ್  ಅಶ್ವಥ್ ನಾರಾಯಣ್ ಭಾಷಣದ ನಡುವೆಯೇ ಅಶ್ವಥ್ ನಾರಾಯಣ್ ಬಳಿಗೆ ಹೋಗಿ ಏನು ಮಾತನಾಡುತ್ತಿದ್ದೀರಿ ನೀವು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಈ ನಡುವೆ MLC ರವಿ ಅಶ್ವಥ್ ನಾರಾಯಣ್ ಬಳಿ ಇದ್ದ ಮೈಕ್ ಎಳೆದು ಘೋಷಣೆ ಕೂಗಲು ಯತ್ನಿಸಿದ್ದು, ಆದರೆ, ಅಶ್ವಥ್ ನಾರಾಯಣ್ ಮೈಕ್ ನ್ನು ಎಳೆದುಕೊಂಡರು. ಇದರಿಂದಾಗಿ ಕೆಲ ಕಾಲ ವೇದಿಕೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಆ ಬಳಿಕ ಡಿ.ಕೆ. ಸುರೇಶ್ ವೇದಿಕೆಯಲ್ಲಿಯೇ ಧರಣಿ ನಡೆಸಿದರು.

ಇಷ್ಟೆಲ್ಲ ಘಟನೆಗಳು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮುಂದೆಯೇ ನಡೆದಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯವನ್ನು ತಂದು ರಾಜಕಾರಣಿಗಳ ಕಿತ್ತಾಟವನ್ನು ಸಾರ್ವಜನಿಕರು ಬಿಟ್ಟಿ ಮನರಂಜನೆ ಎಂಬಂತೆ ನೋಡುತ್ತಿರುವುದು ಕಂಡು ಬಂತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಲಾಕ್ ಡೌನ್ ಜಾರಿಯಾದರೂ ಮೇಕೆದಾಟು ಪಾದಯಾತ್ರೆ ತಡೆಯಲು ಸಾಧ್ಯವಿಲ್ಲ | ಡಿ.ಕೆ.ಶಿವಕುಮಾರ್

ಹಡಗಿನಲ್ಲೇ 2,000 ಪ್ರಯಾಣಿಕರಿಗೆ ಕ್ವಾರಂಟೈನ್!

ನೀರಿನ ರಭಸಕ್ಕೆ ಸಿಕ್ಕಿ ಓರ್ವ ಯುವತಿ ಸಹಿತ ಐವರು ಯುವಕರು ನೀರು ಪಾಲು

ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು!

ಉಡುಪಿ: ಸಾವಿತ್ರಿಭಾಯಿ ಫುಲೆ ಜಯಂತಿ, ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಣೆ

ಇತ್ತೀಚಿನ ಸುದ್ದಿ