ವಿದ್ಯುತ್ ಸ್ಪರ್ಶದಿಂದ ಜೂ.ರವಿಚಂದ್ರನ್ ಸಾವು
ಬೆಂಗಳೂರು: ರವಿಚಂದ್ರನ್ ಅವರನ್ನು ಹೋಲುತ್ತಿದ್ದ ತುಮಕೂರಿನ ಆರ್ಕೆಸ್ಟ್ರಾ ಕಲಾವಿದ ಲಕ್ಷ್ಮಿ ನಾರಾಯಣ ಅಲಿಯಾಸ್ ರವಿಚಂದ್ರನ್ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ.
ಮಂಗಳವಾರದಂದು ಸಂಪ್ ಗೆ ನೀರು ತುಂಬಿಸಲು ಮೋಟಾರ್ ಚಾಲು ಮಾಡಿದಾಗ ವಿದ್ಯುತ್ ಪ್ರವಹಿಸಿ ಲಕ್ಷ್ಮಿ ನಾರಾಯಣ್ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
ಜೂನಿಯರ್ ರವಿಚಂದ್ರನ್ ಎಂದೇ ಖ್ಯಾತರಾಗಿದ್ದ ಲಕ್ಷ್ಮಿ ನಾರಾಯಣ್ ಅವರು ಕುಣಿಗಲ್ ತಾಲ್ಲೂಕಿನ ಹೆರೂರು ಗ್ರಾಮದವರಾಗಿದ್ದರು. ಅವರಿಗೆ 35 ವರ್ಷ ವಯಸ್ಸಾಗಿತ್ತು.
ರವಿಚಂದ್ರನ್ ಅವರ ಅಪ್ಪಟ ಅಭಿಮಾನಿ ಆಗಿದ್ದ ಲಕ್ಷ್ಮಿನಾರಾಯಣ್, ಹಲವು ವೇದಿಕೆಗಳಲ್ಲಿ ರವಿಚಂದ್ರನ್ ಅವರ ಹಲವು ಸಿನಿಮಾಗಳ ವಿವಿಧ ಗೆಟಪ್ ಗಳನ್ನು ಧರಿಸಿ ಅವರಂತೆ ಪೋಸು ನೀಡಿ ಫೋಟೊಗಳನ್ನು ತೆಗೆಸಿಕೊಂಡಿದ್ದರು. ಸದಾ ಅವರಂತೆ ಮಾತನಾಡುತ್ತಿದ್ದರು. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು