ವೀರ ಸಾವರ್ಕರ್ ಭಾವ ಚಿತ್ರದ ವಿವಾದ: ಎರಡು ಗುಂಪುಗಳ ನಡುವೆ ಜಟಾಪಟಿ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ವೀರ ಸಾವರ್ಕರ್ ಭಾವ ಚಿತ್ರದ ವಿವಾದ ಹೆಚ್ಚಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಎರಡು ಕೋಮಿನ ಯುವಕರ ನಡುವೆ ಜಟಾಪಟಿ ನಡೆದಿದೆ.
ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಇರುವ ಸಾವರ್ಕರ್ ಫೋಟೊ ತೆಗೆದು ಟಿಪ್ಪು ಫೋಟೋ ಇಡಲು ಯುವಕರು ಮುಂದಾಗಿದ್ದರು. ವಿಚಾರ ತಿಳಿದ ಪೊಲೀಸರು ಸಾವರ್ಕರ್ ಫೋಟೋ ತೆರವು ಮಾಡಿದ್ದರು. ಜೊತೆಗೆ ಟಿಪ್ಪು ಫೋಟೊ ಇಡಲು ನಿರಾಕರಿಸಿದ್ದರು.
ಸಾವರ್ಕರ್ ಫೋಟೋ ತೆರವು ಮಾಡಿರುವುದಕ್ಕೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಮತ್ತೊಂದು ಕೋಮಿನ ತಂಡ ಕೂಡ ಪ್ರತಿಭಟನೆ ನಡೆಸಿ, ಸಾವರ್ಕರ್ ಫೋಟೋ ಕಿತ್ತೆಸೆಯಲು ಮುಂದಾಗಿದ್ದು, ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು, ತಕ್ಷಣವೇ ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ.
ಸದ್ಯ ಅಮೀರ್ ಅಹಮದ್ ವೃತ್ತದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka