ವೀರ ಸಾವರ್ಕರ್ ಜನ್ಮ ದಿನಾಚರಣೆ | ಪ್ರಧಾನಿ, ಉಪ ರಾಷ್ಟ್ರಪತಿಯಿಂದ ಗೌರವ ಸಲ್ಲಿಕೆ

veer savarkar
28/05/2021

ನವದೆಹಲಿ: ವೀರ್ ಸಾವರ್ಕರ್ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಗಣ್ಯರು  ಗೌರವ ಸಲ್ಲಿಸಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

 ‘ಸ್ವಾತಂತ್ರ್ಯ ಹೋರಾಟದ ಮಹಾನ್‌ ಸೇನಾನಿ ಮತ್ತು ಪ್ರಖರ ರಾಷ್ಟ್ರಭಕ್ತ ವೀರ ಸಾವರ್ಕರ್ ಅವರ ಜನ್ಮ ವಾರ್ಷಿಕೋತ್ಸವದಂದು ಗೌರವ ಸಲ್ಲಿಸುತ್ತೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

 ‘ಸ್ವಾತಂತ್ರ್ಯ ಹೋರಾಟದ ಮಹಾನ್‌ ಸೇನಾನಿ ಮತ್ತು ಸಮಾಜ ಸುಧಾರಕ ವೀರ ಸಾವರ್ಕರ್ ಅವರ ಜಯಂತಿ ಪ್ರಯುಕ್ತ ಗೌರವ ಸಲ್ಲಿಸುತ್ತೇನೆ. ಭಾರತದ ಸ್ವಾತಂತ್ರ್ಯಕ್ಕಾಗಿ ಅವರು ಮಾಡಿದ ತ್ಯಾಗ ಮತ್ತು ಜಾತಿವಾದ ನಿರ್ಮೂಲನೆ ಮಾಡುವ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ಐಕ್ಯತೆ ಬಲಪಡಿಸುವ ಪ್ರಯತ್ನಗಳು ಹಿಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿವೆ’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version