ವೀರ ಸಾವರ್ಕರ್‌ ಚಿತ್ರ ಕಿತ್ತು ಹಾಕಿದವರಿಗೆ ಉಗ್ರ ಶಿಕ್ಷೆ ಆಗಬೇಕು: ಶೋಭಾ ಕರಂದ್ಲಾಜೆ - Mahanayaka

ವೀರ ಸಾವರ್ಕರ್‌ ಚಿತ್ರ ಕಿತ್ತು ಹಾಕಿದವರಿಗೆ ಉಗ್ರ ಶಿಕ್ಷೆ ಆಗಬೇಕು: ಶೋಭಾ ಕರಂದ್ಲಾಜೆ

shobha karandlaje
14/08/2022

ಶಿಕಾರಿಪುರ: ವೀರ ಸಾವರ್ಕರ್‌ ಚಿತ್ರ ಕಿತ್ತು ಹಾಕಿದವರಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.


Provided by

ಈಸೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಸಾವರ್ಕರ್‌ ಅವರ ಇಡೀ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನವಾಗಿತ್ತು. ಶಿವಮೊಗ್ಗದಲ್ಲಿ ಆದ ಘಟನೆ ಅತ್ಯಂತ ದುರದೃಷ್ಟಕರ ಹಾಗೂ ದೇಶದ್ರೋಹಿ ಚಟುವಟಿಕೆಯಾಗಿದೆ ಎಂದರು.

ವೀರ ಸಾವರ್ಕರ್‌ ಬಗ್ಗೆ ಗೊತ್ತಿಲ್ಲದೆ ಹಾಗೂ ದೇಶಕ್ಕಾಗಿ ಹೋರಾಡಿದವರ ಚರಿತ್ರೆ ಓದದಂತಹ ವ್ಯಕ್ತಿಗಳಿಂದ ಈ ರೀತಿ ಅವಮಾನ ನಿರಂತರವಾಗಿ ಆಗುತ್ತಿದೆ. ಶಿವಮೊಗ್ಗದಲ್ಲಿ ಶನಿವಾರ ಸಾವರ್ಕರ್‌ ಫೋಟೊ ಕಿತ್ತು ಹಾಕುವ ಮೂಲಕ ಜನಪ್ರತಿನಿಧಿಗಳನ್ನು ಅವಮಾನ ಮಾಡಿದ್ದಾರೆ. ಆದ್ದರಿಂದ ಈ ಜನಪ್ರತಿನಿಧಿ  ರಾಜೀನಾಮೆ ನೀಡಬೇಕು ಎಂದರು.

ಸ್ವಾತಂತ್ರ್ಯಕ್ಕೆ ಹೋರಾಡಿದ ಸೇನಾನಿಗಳಿಗೆ ಅವಮಾನ ಮಾಡುವಂತಹ ಧೈರ್ಯ ಯಾರಿಗೂ ಬರಬಾರದು. ಹೋರಾಟಗಾರರಿಗೆ ಅವಮಾನ, ಅನ್ಯಾಯವಾದರೇ ಭಾರತದ ಜನ ಸಹಿಸಿಕೊಳ್ಳಬಾರದು ಎಂದು ಕರೆ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ