ವಿಶ್ವದ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆ; ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ - Mahanayaka
9:15 PM Wednesday 5 - February 2025

ವಿಶ್ವದ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆ; ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ

ramanjacharya
05/02/2022

ಹೈದರಾಬಾದ್: ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರ ಪ್ರತಿಮೆಯನ್ನು ತೆಲಂಗಾಣದ ಹೈದರಾಬಾದ್‍ ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ.

216 ಅಡಿ ಎತ್ತರದ ಸಮಾನತೆಯನ್ನು ಸಾರುವ ರಾಮಾನುಜಾಚಾರ್ಯರ ಪ್ರತಿಮೆಯನ್ನು ಪ್ರಧಾನಿ ಮೋದಿ ಶನಿವಾರ ಸಂಜೆ 5 ಗಂಟೆಗೆ ಅನಾವರಣಗೊಳಿಸಲಿದ್ದಾರೆ. ಈ ಬಗ್ಗೆ ಪ್ರಧಾನಿ ಸ್ವತಃ ಟ್ವೀಟ್ ಮಾಡಿದ್ದಾರೆ.

ಸಂಜೆ 5 ಗಂಟೆಗೆ ನಾನು ಸಮಾನತೆಯ ಪ್ರತಿಮೆ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಸೇರುತ್ತೇನೆ. ಇದು ಶ್ರೀ ರಾಮಾನುಜಾಚಾರ್ಯರಿಗೆ ಸೂಕ್ತವಾದ ಗೌರವವಾಗಿದೆ. ಅವರ ಪವಿತ್ರ ಆಲೋಚನೆಗಳು ಹಾಗೂ ಬೋಧನೆಗಳು ನಮಗೆ ಸ್ಫೂರ್ತಿ ನೀಡುತ್ತವೆ ಎಂದು ತಿಳಿಸಿದ್ದಾರೆ.

ಈ ಪ್ರತಿಮೆಯು ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರನ್ನು ಸ್ಮರಿಸುತ್ತದೆ. ಅವರು ನಂಬಿಕೆ, ಜಾತಿ ಮತ್ತು ಪಂಥ ಸೇರಿದಂತೆ ಜೀವನದ ಎಲ್ಲಾ ಅಂಶಗಳಲ್ಲಿ ಸಮಾನತೆಯ ಕಲ್ಪನೆಯನ್ನು ಸಾರುತ್ತದೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

11ನೇ ಶತಮಾನದ ಸಂತ ಶ್ರೀರಾಮಾನುಜಾಚಾರ್ಯರ ಎಲ್ಲಾ ವಿಧದ ಸಮಾನತೆಯನ್ನು ಪ್ರೋತ್ಸಾಹಿಸಿದ್ದರು. ಸಮಾನತೆಯನ್ನು ಬೋಧನೆ ಮಾಡಿದ್ದರು. ಹೈದರಾಬಾದ್‍ನ ಮುಂಚಿತ್ತಾಲ್‍ನಲ್ಲಿ ಇದೀಗ ಪಂಚಲೋಹದ ರಾಮಾನುಜಾಚಾರ್ಯರ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಚಿನ್ನ, ಬೆಳ್ಳಿ, ಕಂಚು, ತಾಮ್ರ ಹಾಗೂ ಜಿಂಕ್‍ ನಿಂದ ಈ ಪ್ರತಿಮೆ ನಿರ್ಮಿಸಲಾಗಿದೆ. ಈ ಮೂರ್ತಿಯು ಕುಳಿತ ಭಂಗಿಯಲ್ಲಿ ಇರುವ ವಿಶ್ವದ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿರಲಿದೆ.

ಶ್ರೀರಾಮಾನುಜಾಚಾರ್ಯ ಸಹಸ್ರಾಬ್ದಿ ಸಮಾರೋಪ ಕಾರ್ಯಕ್ರಮವು ಒಟ್ಟು 12 ದಿನಗಳ ಕಾಲ ನಡೆಯಲಿದೆ. ಇದರ ಅಂಗವಾಗಿ ಇಂದು ಸಮಾನತೆಯ ಪ್ರತಿಮೆ ಅನಾವರಣಗೊಳ್ಳಲಿದೆ. ಈ ವೇಳೆ, ಪ್ರಧಾನಿ ಮೋದಿ ಹೈದರಾಬಾದ್‍ನಲ್ಲಿ ಇತರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಡ್ರಿಂಕ್ಸ್‌ ಮಾಡಲು ಪತಿಯನ್ನು ಕರೆದುಕೊಂಡು ಹೋಗುತ್ತಿದ್ದ ಬಾವನ ಕೊಲೆ

ಡಿವೋರ್ಸ್ ಹೆಚ್ಚಾಗಲು ಟ್ರಾಫಿಕ್ ಸಮಸ್ಯೆ ಕಾರಣ: ಅಮೃತಾ ಫಡ್ನವೀಸ್

ಮತ್ತೊಂದು ವಿಮಾನ ದುರಂತ : ಪೈಲಟ್‌ ಸೇರಿ ಏಳು ಮಂದಿಯ ಸಾವು

ಕೇರಳದ ಡಾನ್ ಕೊಲೆ ಪ್ರಕರಣ: ಹಿಂಡಲಗಾ ಜೈಲಿನಲ್ಲಿ ಆರೋಪಿ ​ ಅನುಮಾನಾಸ್ಪದ ಸಾವು

ಜೈಲಿನಲ್ಲಿ ಅಗ್ನಿ ಅವಘಡ: 20 ಕೈದಿಗಳು ಆಸ್ಪತ್ರೆಗೆ ದಾಖಲು

 

ಇತ್ತೀಚಿನ ಸುದ್ದಿ