ಹೈಟೇಕ್ ವೇಶ್ಯಾವಾಟಿಕೆ: 8 ಯುವತಿಯರ ರಕ್ಷಣೆ | ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲ್ಪಟ್ಟ ಯುವತಿಯರು - Mahanayaka
10:18 AM Thursday 12 - December 2024

ಹೈಟೇಕ್ ವೇಶ್ಯಾವಾಟಿಕೆ: 8 ಯುವತಿಯರ ರಕ್ಷಣೆ | ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲ್ಪಟ್ಟ ಯುವತಿಯರು

20/01/2021

ಮುಂಬೈ: ಹೈಟೇಕ್ ವೇಶ್ಯಾವಾಟಿಕೆ ಜಾಲವನ್ನು ಬೇಧಿಸಿದ ಪೊಲೀಸರು ಎಂಟು ಮಂದಿ ಯುವತಿಯರನ್ನು ರಕ್ಷಣೆ ಮಾಡಿರುವ ಘಟನೆ ಮಹಾರಾಷ್ಟ್ರ ರಾಜಧಾನಿ ಹಾಗೂ ವಾಣಿಜ್ಯ ನಗರಿಯಲ್ಲಿ ನಡೆದಿದೆ.

ಹೊಟೇಲ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಸ್ಪಷ್ಟ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು,  8 ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಈ ಯುವತಿಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿರುವುದು ಈ ವೇಳೆ ಬೆಳಕಿಗೆ ಬಂದಿದೆ.

ಜುಹು ಬೀಚ್​ನಲ್ಲಿನ ಪ್ರತಿಷ್ಠಿತ ಹೋಟೆಲ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು. ಘಟನೆಯಲ್ಲಿ ಮೂವರು ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಯ ವೇಳೆ ರಕ್ಷಣೆ ಮಾಡಲ್ಪಟ್ಟ ಯುವತಿಯರನ್ನು  ಪುನಶ್ಚೇತನ ಗೃಹಕ್ಕೆ ಕಳುಹಿಸಲಾಗಿದೆ..

ಇತ್ತೀಚಿನ ಸುದ್ದಿ