ಆನ್ ಲೈನ್ ನಲ್ಲಿ ಪೋಸ್ಟ್ ಹಾಕಿ ಯುವತಿಯರನ್ನು ಕಳುಹಿಸುತ್ತಿದ್ದರು | ಆ ನಂತರ ಈ ದಂಪತಿ ಆಡಿದ್ದೇ ಆಟ!
04/02/2021
ಬೆಂಗಳೂರು: ಹನಿಟ್ರ್ಯಾಪ್ ಮಾಡುತ್ತಿದ್ದ ದಂಪತಿಯನ್ನು ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದು, ಆನ್ ಲೈನ್ ನಲ್ಲಿ ಈ ದಂಪತಿ ಪೋಸ್ಟ್ ಹಾಕುತ್ತಿದ್ದು ಆ ಬಳಿಕ ಹಣ ಪಡೆದು ಯುವತಿಯರನ್ನು ಸರಬರಾಜು ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಆನ್ ಲೈನ್ ನಲ್ಲಿಯೇ ಭರ್ಜರಿ ವೇಶ್ಯಾವಾಟಿಕೆ ದಂಧೆಯನ್ನು ಆರಂಭಿಸಿದ್ದ ಈ ದಂಪತಿ, ಯುವತಿಯರನ್ನು ಕಳುಹಿಸಿ ಬಳಿಕ ಆ ಸ್ಥಳಕ್ಕೆ ತೆರಳಿ ಯುವತಿಯರನ್ನು ಕರೆಸಿಕೊಂಡವರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಈ ಸಂಬಂಧ ವ್ಯಕ್ತಿಯೋರ್ವ ದೂರು ನೀಡಿದ್ದು, ಈ ದೂರಿನನ್ವಯ ಪೊಲೀಸರು ಆರೋಪಿ ದಂಪತಿಗಳನ್ನು ಬಂಧಿಸಿದ್ದಾರೆ. ದೂರುದಾರನಿಂದ 94,000 ಹಣವನ್ನು ದಂಪತಿಗಳಾದ ಕಿರಣ್ ರಾಜ್ ಮತ್ತು ಭಾಸ್ವತಿ ದತ್ತಾ ಗೂಗಲ್ ಪೇ ಮಾಡಿಸಿಕೊಂಡಿದ್ದಾರೆ. ಅಲ್ಲದೇ 150 ಗ್ರಾಂ ಚಿನ್ನಾಭರಣಗಳನ್ನೂ ದೋಚಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿ ದಂಪತಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.