ವಿಚಾರಣೆಗೆ ಹಾಜರಾದ ಹಂಸಲೇಖ: ಠಾಣೆ ಎದುರು ಪರ ವಿರೋಧ ಪ್ರತಿಭಟನೆ - Mahanayaka
10:28 PM Thursday 14 - November 2024

ವಿಚಾರಣೆಗೆ ಹಾಜರಾದ ಹಂಸಲೇಖ: ಠಾಣೆ ಎದುರು ಪರ ವಿರೋಧ ಪ್ರತಿಭಟನೆ

hamsalekha
25/11/2021

ಬೆಂಗಳೂರು: ದಲಿತರ ಮನೆಗೆ ಬಲಿತರು ಹೋಗುವ ವಿಚಾರ ದೊಡ್ಡದಲ್ಲ ಎಂಬ ಅರ್ಥದಲ್ಲಿ  ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ನೀಡಿದ ಹೇಳಿಕೆ ಸಂಬಂಧ ಸಂಘಟನೆಯೊಂದು ದಾಖಲಿಸಿರುವ ದೂರಿಗೆ ಸಂಬಂಧಿಸಿದಂತೆ ಇಂದು  ಬಸವನಗುಡಿ ಠಾಣೆಗೆ ಭೇಟಿ ನೀಡಿದ ಹಂಸಲೇಖ ಅವರು ಕೆಲವೇ ನಿಮಿಷಗಳ ವಿಚಾರಣೆಯ ಬಳಿಕ ತೆರಳಿದರು.

ಬಸವನಗುಡಿ ಠಾಣಾಧಿಕಾರಿ ರಮೇಶ್ ನೇತೃತದಲ್ಲಿ ಸುಮಾರು 25-30 ಪ್ರಶ್ನೆಗಳನ್ನು ಕೇಳಲಾಗಿದ್ದು, ಈ ಪ್ರಶ್ನೆಗಳಿಗೆ ಹಂಸಲೇಖ ಅವರು ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ.  ಇನ್ನೂ ನಾವು ಕಾನೂನಿಗೆ ಗೌರವ ಕೊಡುತ್ತೇವೆ, ವಿಚಾರಣೆಗೆ ಕರೆದರೆ ಮತ್ತೆ ಬರುತ್ತೇವೆ ಎಂದು ಹಂಸಲೇಖ ಹೇಳಿದ್ದಾರೆ ಎಂದು ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥ್ ಅವರು ಈ ಸಂಬಂಧ ವಿವರ ನೀಡಿದ್ದಾರೆ ಎಂದು ವರದಿಯಾಗಿದೆ.

ಹಂಸಲೇಖ ಬೆಂಬಲಿಗರಿಂದ ಠಾಣೆ ಮುಂದೆ ಧರಣಿ:

ಹಂಸಲೇಖ ಅವರ ವಿರುದ್ಧ ನೀಡಿರುವ ಸುಳ್ಳು ದೂರನ್ನು ವಿರೋಧಿಸಿ ನಟ ಚೇತನ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ನಾಯಕರು ಹಾಘೂ ಭಾರೀ ಸಂಖ್ಯೆಯಲ್ಲಿದ್ದ ಹಂಸಲೇಖ ಬೆಂಬಲಿಗರು  ಠಾಣೆಯ ಹೊರಗೆ ಧರಣಿ ನಡೆಸಿ, ಘೋಷಣೆ ಕೂಗಿದರು.




ಬಜರಂಗದಳ ಪ್ರತಿಭಟನೆ:

ಇಂದು ಹಂಸಲೇಖ ಅವರು ವಿಚಾರಣೆಗೆ ಹಾಜರಾಗುತ್ತಿರುವ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಕೆಲವು ಬಜರಂಗದಳದ ಕಾರ್ಯಕರ್ತರು, ಹಂಸಲೇಖ ಅವರು ಕೇವಲ ಕ್ಷಮೆ ಕೇಳಿದ್ದು ಸಾಕಾಗುವುದಿಲ್ಲ. ಬೇಷರತ್ತು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಾಕಿಂಗ್ ನ್ಯೂಸ್: ಕೈಯ ಮಣಿಕಟ್ಟು ಕೊಯ್ದುಕೊಂಡು ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣು

ರೈಲಿನಡಿಗೆ ತಲೆಯಿಟ್ಟು ಪಿಯು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು!

ಜಾತಿ ಪ್ರಜ್ಞೆಯ ಬೇರುಗಳೂ ಮಾರುಕಟ್ಟೆಯ ಒತ್ತಡಗಳೂ | ವ್ಯವಸ್ಥೆಯನ್ನು ವಿಭಜಿಸುವ ಆಹಾರ ಶೋಷಿತರನ್ನು ಒಗ್ಗೂಡಿಸಲೂ ಸಾಧ್ಯ

ಬಡ ಜನತೆಗೆ ಸಿಹಿ ಸುದ್ದಿ ನೀಡಿದ ಪ್ರಧಾನಿ: ಉಚಿತ ಅಕ್ಕಿ ಯೋಜನೆ ಮುಂದುವರಿಕೆ

ಪುನೀತ್ ರಾಜ್ ಕುಮಾರ್ ಜೀವನಾಧರಿತ ಸಿನಿಮಾ: ನಾಯಕ ಯಾರು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಕ್ಷಮೆ ಕೇಳಿ ದೊಡ್ಡತನ ಮೆರೆದ ಆಮೀರ್ ಖಾನ್ | ಅಷ್ಟಕ್ಕೂ ನಡೆದದ್ದೇನು ಗೊತ್ತಾ?

ಇತ್ತೀಚಿನ ಸುದ್ದಿ