ಡ್ರಗ್ಸ್ ಕೇಸ್: ಬಿಜೆಪಿ ಮುಖಂಡನ ವಿರುದ್ಧ ಸಮನ್ಸ್

23/02/2021

ಕೋಲ್ಕತ್ತಾ: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ಅವರಿಂದ ಕೊಕೆನ್‌ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ರಾಕೇಶ್ ಸಿಂಗ್ ಗೆ ಕೋಲ್ಕತ್ತಾ ಪೊಲೀಸರು ಸಮನ್ಸ್ ನೀಡಿದ್ದಾರೆ.

ಫೆ.23ರಂದು ರಾಕೇಶ್ ಸಿಂಗ್ ಅವರು ತನಿಖಾಧಿಕಾರಿಗಳ ಮುಂದೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಎಂದು ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನೂ ಪಮೇಲಾ ಗೋಸ್ವಾಮಿ ಅವರು ಡ್ರಗ್ಸ್ ಪ್ರಕರಣದಲ್ಲಿ ನನ್ನ ಕೈವಾಡ ಇಲ್ಲ. ರಾಕೇಶ್ ಸಿಂಗ್ ಇದೆಲ್ಲವನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ತಾನು ತನಿಖೆಗೆ ಸಿದ್ಧನಿದ್ದೇನೆ ಎಂದು ರಾಕೇಶ್ ಸಿಂಗ್ ಕೂಡ  ಹೇಳಿಕೆ ನೀಡಿದ್ದರು.

90 ಗ್ರಾಂ ಕೊಕೆನ್ ಹೊಂದಿದ್ದ ಕಾರಣ ಪಮೇಲಾ ಗೋಸ್ವಾಮಿ ಹಾಗೂ ಆಕೆಯ ಸ್ನೇಹಿತ ಪ್ರದೀಪ್ ಕುಮಾರ್ ದೇ ಅವರನ್ನು ಫೆ.17ರಂದು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ತಮ್ಮ ಸಹೋದ್ಯೋಗಿ ಹಾಗೂ ಕೈಲಾಶ್‌ ವರ್ಗೀಯಾ ಅವರ ಸಹಾಯಕ ರಾಕೇಶ್‌ ಸಿಂಗ್‌‌ ಅವರ ಷಡ್ಯಂತ್ರವಿದೆ ಎಂದು ಈ ವೇಳೆ ಪೆಮೇಲಾ ಗೋಸ್ವಾಮಿ ಹೇಳಿಕೆ ನೀಡಿದ್ದರು.

pemula goswamy
ಪಮೇಲಾ ಗೋಸ್ವಾಮಿ

ಇತ್ತೀಚಿನ ಸುದ್ದಿ

Exit mobile version