ವಿಚಿತ್ರ ಫೋಟೋ ಹಂಚಿಕೊಂಡು ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಮೋಹಕ ತಾರೆ ರಮ್ಯಾ! - Mahanayaka

ವಿಚಿತ್ರ ಫೋಟೋ ಹಂಚಿಕೊಂಡು ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಮೋಹಕ ತಾರೆ ರಮ್ಯಾ!

ramya
10/10/2021

ಸ್ಯಾಂಡಲ್ ವುಡ್ ನ ಮೋಹಕ ತಾರೆ, ನಟಿ ರಮ್ಯಾ ಅವರು ಸದ್ಯ ರಾಜಕಾರಣದಿಂದ ದೂರವಿದ್ದಾರೆ. ಇದೀಗ ಸಿನಿಮಾ ಕ್ಷೇತ್ರಕ್ಕೆ ಮತ್ತೆ ಎಂಟ್ರಿಕೊಡಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ. ಈ ನಡುವೆ ಅವರು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.

ರಮ್ಯಾ ಅವರು ಇದೀಗ ಇನ್ ಸ್ಟಾಗ್ರಾಮ್ ನಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಈ ಮೂಲಕ ತಮ್ಮ ಅಭಿಮಾನಿಗಳ ತಲೆಗೆ ಹುಳಬಿಟ್ಟಿದ್ದಾರೆ. ರಮ್ಯಾ ಅವರು ಪೋಸ್ಟ್ ಮಾಡಿರುವ ಚಿತ್ರದಲ್ಲಿ ಕೇವಲ ಗೆರೆಗಳು ಮಾತ್ರವೇ ಇವೆ. ಈ ಗೆರೆಗಳು ಏನೆಂದು ತಿಳಿಯದೇ ಕ್ಷಣ ಕಾಲ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ.

ಚಿತ್ರದ ಕೆಳಗೆ ಈ ಫೋಟೋ ಏನು ಎನ್ನುವುದನ್ನು ರಮ್ಯಾ ಅವರೇ ವಿವರಿಸಿದ್ದಾರೆ. “ಇದು ಏನೆಂದು ನೀವು ಆಶ್ಚರ್ಯ ಪಡುತ್ತಿದೀರಾ? ಇದು ಸೂರ್ಯ ನಮಸ್ಕಾರದ ದ್ರಷ್ಟಾಂತ, ಬೆಳಗ್ಗೆ ಸೂರ್ಯ ನಮಸ್ಕಾರ ಮಾಡುವಾಗ ಇದು ಜೀವನಕ್ಕೆ ಎಷ್ಟು ಹತ್ತಿರ ಎನಿಸಿತ್ತು, ಆಸನದಂತೆ ಜೀವನವು ಏರು ಇಳಿತದಿಂದ ಹಾಗು ಸ್ಥಿರತೆಯಿಂದ ಕೂಡಿದೆ.

ನಾನು ಯೊಗಾಭ್ಯಾಸ ಪ್ರಾರಂಭಿಸಿ ಕೆಲವು ದಿನಗಳು ಕಳೆದಿವೆ, ಯೊಗದಿಂದ ನೀವೇನಾದರು ಜೀವನ ಪಾಠಗಳನ್ನು ಕಲಿತ್ತಿದಲ್ಲಿ ದಯಮಾಡಿ ಹಂಚಿಕೊಳ್ಳಿ ಎಂದು ಅವರು ಅಭಿಮಾನಿಗಳಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ನಲ್ಲಿ ಕರೆದೊಯ್ದು ಯುವಕನ ಮೇಲೆ ಅತ್ಯಾಚಾರ!

ಪೊಲೀಸರು ನನ್ನ ಬೆನ್ನು ಮುರಿಯುವಂತೆ ಹೊಡೆದಿದ್ದರು | ಹಳೆಯ ನೆನಪು ಹಂಚಿಕೊಂಡ ಗೃಹ ಸಚಿವರು

ಮನೆಯ ಒಳಗೆ ನುಗ್ಗಿ ಮಗುವನ್ನು ಹೊತ್ತೊಯ್ಯಲು ಯತ್ನಿಸಿದ ಚಿರತೆ | ಆತಂಕದಲ್ಲಿ ಗ್ರಾಮಸ್ಥರು

ಮಂಗಳೂರಿನ ಲಾಡ್ಜ್ ನಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ | ಬಾಲಕಿಯ ಮುಗ್ಧತೆ ದುರುಪಯೋಗಪಡಿಸಿ ಕೊಂಡು ಕೃತ್ಯ!

“ಧೈರ್ಯವಿದ್ದರೆ ಗುಡ್ಡೆ ಮೈದಾನಕ್ಕೆ ಬಾ” ಎಂದು ಕರೆದು ಸಹೋದರರಿಬ್ಬರ ಮೇಲೆ 20ಕ್ಕೂ ಅಧಿಕ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ!

ಪೊಲೀಸರ ದುಷ್ಕೃತ್ಯದಿಂದ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಅತ್ಯಾಚಾರ ಸಂತ್ರಸ್ತೆ

ಇತ್ತೀಚಿನ ಸುದ್ದಿ