86 ವರ್ಷದ ವೃದ್ಧನಿಗೆ ಬೆತ್ತಲೆ ವಿಡಿಯೋ ಕಾಲ್ ಮಾಡಿ, 2.99 ಲಕ್ಷ ದೋಚಿದ ಮಹಿಳೆ! - Mahanayaka
9:40 AM Wednesday 5 - February 2025

86 ವರ್ಷದ ವೃದ್ಧನಿಗೆ ಬೆತ್ತಲೆ ವಿಡಿಯೋ ಕಾಲ್ ಮಾಡಿ, 2.99 ಲಕ್ಷ ದೋಚಿದ ಮಹಿಳೆ!

andheri
03/08/2022

86 ವರ್ಷದ ವೃದ್ಧರೊಬ್ಬರಿಗೆ ವಿಡಿಯೋ ಕಾಲ್ ಮಾಡಿ, ಬೆತ್ತಲಾದ ಮಹಿಳೆಯೊಬ್ಬಳು ಬಳಿಕ ವೃದ್ಧನನ್ನು ಬ್ಲ್ಯಾಕ್ ಮೇಲ್ ಮಾಡಿ, ಹಣದೋಚಿರುವ ಘಟನೆ ಮುಂಬೈಯ ಅಂಧೇರಿಯಲ್ಲಿ ನಡೆದಿದೆ.

ಅಪರಿಚಿತ ಮಹಿಳೆಯೊಬ್ಬಳು ವಯೋವೃದ್ಧರನ್ನು ಗುರಿಯಾಗಿಸಿ ದುಷ್ಕೃತ್ಯ ನಡೆಸುತ್ತಿದ್ದು,  86 ವರ್ಷದ ವೃದ್ಧನಿಗೆ ವಿಡಿಯೋ ಕಾ‍ಲ್ ಮಾಡಿದ ಮಹಿಳೆ ಬೆತ್ತಲೆಯಾಗಿ ವೃದ್ಧನನ್ನು ಕೂಡ ಅಶ್ಲೀಲವಾಗಿ ವರ್ತಿಸುವಂತೆ ಪ್ರೇರೇಪಿಸಿದ್ದಾಳೆ. ಮಹಿಳೆಯ ಸಂಚು ತಿಳಿಯದ ವೃದ್ಧ ಕೂಡ ಅಶ್ಲೀಲವಾಗಿ ವರ್ತಿಸಿದ್ದಾನೆನ್ನಲಾಗಿದೆ. ವಿಡಿಯೋ ಕಾಲ್ ನ್ನು ರೆಕಾರ್ಡ್ ಮಾಡಿಕೊಂಡಿದ್ದ ಮಹಿಳೆ ತನಗೆ ಹಣ ನೀಡದಿದ್ದರೆ, ನಿನ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾಳೆ.

ಮಹಿಳೆಯ ಬೆದರಿಕೆಯಿಂದ ಬೆದರಿದ ವೃದ್ಧ  2.99 ಲಕ್ಷ ರೂಪಾಯಿಗಳನ್ನು ಆಕೆಗೆ ನೀಡಿದ್ದಾನೆ. ಆದರೆ, ಆಕೆ ಮತ್ತಷ್ಟು ಹಣ ನೀಡುವಂತೆ ಮತ್ತೆ ಬೆದರಿಕೆ ಹಾಕಿದ್ದು,  ಇದರಿಂದ ರೋಸಿ ಹೋದ ವೃದ್ಧ  ಅಂಬೋಲಿ ಪೊಲೀಸರಿಗೆ ದೂರು ನೀಡಿದ್ದಾನೆ.

ಈ ಘಟನೆಯ ಬಳಿಕ ಅದೇ ಏರಿಯಾದಲ್ಲಿ ಮತ್ತೋರ್ವ ವೃದ್ಧನಿಗೆ ಮಹಿಳೆ ಇದೇ ರೀತಿಯಲ್ಲಿ ವಂಚಿಸಿದ್ದು,  ಆತನಿಂದ 64 ಸಾವಿರ ರೂಪಾಯಿ ಲೂಟಿ ಮಾಡಿದ್ದಳು.

ಈ ಎರಡೂ ಪ್ರಕರಣದಲ್ಲೂ ಒಬ್ಬಳೇ ಆರೋಪಿ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.  ಈ ಬಗ್ಗೆ ಐಪಿಸಿ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ