ವಿಡಿಯೋ ಕಾಲ್ ನಲ್ಲೇ ಕೊಲೆಗೆ ಟ್ರೈನಿಂಗ್ ನೀಡಿದ ಪ್ರಿಯಕರ: ಅಮ್ಮನನ್ನೇ ಕೊಂದ ಬಾಲಕಿ - Mahanayaka
5:36 AM Friday 20 - September 2024

ವಿಡಿಯೋ ಕಾಲ್ ನಲ್ಲೇ ಕೊಲೆಗೆ ಟ್ರೈನಿಂಗ್ ನೀಡಿದ ಪ್ರಿಯಕರ: ಅಮ್ಮನನ್ನೇ ಕೊಂದ ಬಾಲಕಿ

video call kole
06/08/2021

ಫರಿದಾಬಾದ್: ತಮ್ಮ ಪ್ರೀತಿಗೆ ಒಪ್ಪಿಗೆ ಸೂಚಿಸದ ಅಮ್ಮನನ್ನು ಅಪ್ರಾಪ್ತ ವಯಸ್ಸಿನ ಪುತ್ರಿ ತನ್ನ ಪ್ರಿಯಕರನ ಜೊತೆಗೆ ಸೇರಿಕೊಂಡು ಹತ್ಯೆ ಮಾಡಿರುವ ಘಟನೆ ಹರ್ಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ನಡೆದಿದ್ದು, ಅಮ್ಮನನ್ನು ಹತ್ಯೆ ಮಾಡಲು ಬಾಲಕಿಗೆ ಪ್ರಿಯಕರನೇ ಟ್ರೈನಿಂಗ್ ನೀಡಿದ್ದ ಎಂದು ತಿಳಿದು ಬಂದಿದೆ.

ಜುಲೈ 10ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಇತ್ತೀಚೆಗೆ ಈ ಘಟನೆ ಬೆಳಕಿಗೆ ಬಂದಿದೆ. 16 ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಸಿನ ಬಾಲಕಿ 18 ವರ್ಷ ವಯಸ್ಸಿನ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಈ ಪ್ರೀತಿಗೆ ಬಾಲಕಿಯ ಅಮ್ಮ ಸಮ್ಮತಿ ಸೂಚಿಸಿರಲಿಲ್ಲ. ಇದರಿಂದಾಗಿ ಅಮ್ಮನ ಮೇಲೆ ಪುತ್ರಿಗೆ ತೀವ್ರ ಕೋಪ ಇತ್ತು.

ಇತ್ತ ತನ್ನ ಪ್ರಿಯಕರನ ಜೊತೆಗೆ ಸೇರಿಕೊಂಡು ಅಮ್ಮನನ್ನು ಮುಗಿಸಲು ಪುತ್ರಿ ಪ್ಲಾನ್ ಮಾಡಿದ್ದಾಳೆ. ಬಾಲಕಿಗೆ ಪ್ರಿಯಕರ ವಿಡಿಯೋ ಕಾಲ್ ಮಾಡಿ, ತಾಯಿಯನ್ನು ಹೇಗೆ ಕೊಲ್ಲಬೇಕು ಎಂದು ಟ್ರೈನಿಂಗ್ ನೀಡಿದ್ದಾನೆ. ಆತನ ಟ್ರೈನಿಂಗ್ ಪಡೆದುಕೊಂಡ ಬಾಲಕಿ ತಾಯಿಯನ್ನು ಹತ್ಯೆ ಮಾಡಿದ್ದಾಳೆ.


Provided by

ಬಾಲಕಿಯ ಬಾಯ್ ಫ್ರೆಂಡ್ ಜುಲೈ 10ರಂದು ಬಾಲಕಿಯ ಮನೆಯ ಬಳಿಗೆ ಬಂದು ನಿದ್ದೆ ಮಾತ್ರೆಯನ್ನು ಕೊಟ್ಟು ಹೋಗಿದ್ದ. ಬಳಿಕ ರಾತ್ರಿ ವಿಡಿಯೋ ಕಾಲ್ ಮಾಡಿ, ಮಾತ್ರೆಯನ್ನು ಹೇಗೆ ಕೊಡಬೇಕು ಎನ್ನುವುದನ್ನು ವಿವರಿಸಿದ್ದಾನೆ. ಆತನ ಪ್ಲಾನ್ ನಂತೆಯೇ ಬಾಲಕಿಯು ಲಿಂಬೆ ಪಾನಕದಲ್ಲಿ ನಿದ್ದೆ ಮಾತ್ರೆ ಬೆರೆಸಿ ತಾಯಿಗೆ ನೀಡಿದ್ದಾಳೆ. ಪುತ್ರಿ ತನ್ನನ್ನು ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತಾಳೆ ಎಂದು ನಿರೀಕ್ಷೆ ಕೂಡ ಮಾಡದ ತಾಯಿ ಪಾನಕ ಕುಡಿದಿದ್ದು, ಪರಿಣಾಮವಾಗಿ ಆಕೆ ಸಾವನ್ನಪ್ಪಿದ್ದಾಳೆ.

ಇನ್ನೂ ಘಟನೆಗೆ ಸಂಬಂಧಿಸಿಎಂತೆ ಬಾಲಕಿಯ ಸಹೋದರ ನೀಡಿದ ದೂರಿನಂತೆಯೇ ಪ್ರಿಯಕರನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಬಾಲಕಿಯನ್ನು  ಅಪ್ರಾಪ್ತಳಾಗಿರುವ ಕಾರಣ ಬಾಲಾಪರಾಧ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಫರಿದಾಬಾದ್ ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ವಿದ್ಯಾರ್ಥಿನಿ ಜೊತೆಗೆ ರಾಸಲೀಲೆ ನಡೆಸುತ್ತಿರುವಾಗಲೇ ಪತ್ನಿಯ ಕೈಗೆ ಸಿಕ್ಕಿ ಬಿದ್ದ ಪ್ರಾಧ್ಯಾಪಕ! | “ರೇಪ್ ಮಾಡ್ದ” ಎಂದಿದ್ದ ವಿದ್ಯಾರ್ಥಿನಿ ಯೂಟರ್ನ್!?

ಎಲ್ಲ ವಿದ್ಯಾರ್ಥಿಗಳು ಪಾಸ್, ಶಿಕ್ಷಣ ಸಚಿವರು ಫೇಲ್! | ರಿ ಎಕ್ಸಾಮ್ ಬರೀತಾರಾ ಸುರೇಶ್ ಕುಮಾರ್?

ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಅನಾಥನಾಗಿದ್ದ | ಬಿಜೆಪಿ ಸೇರ್ಪಡೆಗೆ ಎನ್.ಮಹೇಶ್ ಪ್ರತಿಕ್ರಿಯೆ

ರಾಜೀವ್ ಗಾಂಧಿ ಖೇಲ್‍ ರತ್ನ ಪ್ರಶಸ್ತಿಯ ಹೆಸರು ಬದಲಿಸಿದ ಪ್ರಧಾನಿ ಮೋದಿ

“ಕೋತಿ ತಾನು ಕೆಡುವುದಲ್ಲದೇ ವನವನ್ನೆಲ್ಲ ಕೆಡಿಸ್ತು” | ಎನ್.ಮಹೇಶ್ ಬಿಜೆಪಿ ಸೇರ್ಪಡೆಗೆ ಎಸ್ ಡಿಪಿಐ ಆಕ್ರೋಶ

ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ | ದ.ಕ.ಸೇರಿದಂತೆ 8 ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ

ರಾತ್ರಿ ಫೋನ್ ನಲ್ಲಿ ಪತಿ-ಪತ್ನಿ ನಡುವೆ ವಾಗ್ವಾದ | ವಿವಾಹವಾಗಿ 8 ತಿಂಗಳಲ್ಲಿ ನಡೆಯಿತು ದುರಂತ!

ಇತ್ತೀಚಿನ ಸುದ್ದಿ