ಕೊರಿಯನ್ ವಿಡಿಯೋ ನೋಡುವ ಚಟದಿಂದ ಹೊರಬರಲಾಗದೇ ಆತ್ಮಹತ್ಯೆಗೆ ಶರಣಾದ ಬಾಲಕಿ!
ತಿರುವನಂತಪುರಂ : ಮೊಬೈಲ್ ನಲ್ಲಿ ಕೊರಿಯನ್ ವಿಡಿಯೋ ನೋಡುವ ಚಟಕ್ಕೆ ಸಿಲುಕಿದ್ದ 16 ವರ್ಷದ ಜೀವಾ ಎಂಬ ವಿದ್ಯಾರ್ಥಿಯೊಬ್ಬಳು ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಜೀವಾಗೆ ಯಾವಾಗಲೂ ಮುಚ್ಚಿದ ಕೋಣೆಯಲ್ಲಿ ಓದುವ ಅಭ್ಯಾಸ. ಘಟನೆ ನಡೆದ ದಿನ ಎಂದಿನಂತೆ ತಂಗಿ ಊಟಕ್ಕೆಂದು ಕರೆಯಲು ಹೋದಾಗ, ಜೀವಾ ಬಾಗಿಲು ತೆಗೆದಿಲ್ಲ. ಕೊನೆಗೆ ಅಕ್ಕಪಕ್ಕದವರು ಬಂದು ಕಿಟಕಿ ಗಾಜುಗಳನ್ನು ಒಡೆದು ನೋಡಿದಾಗ ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಕೆಳಗಿಳಿಸಿದರು. ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಈಕೆ ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾಳೆ. ಆದ್ರೆ, ಈಕೆ 11ನೇ ತರಗತಿಗೆ ಪ್ರವೇಶಿಸಿದ ನಂತರ ಮೊಬೈಲ್ ಚಟಕ್ಕೆ ಬಿದ್ದು ಕಡಿಮೆ ಅಂಕ ಗಳಿಸುತ್ತಿದ್ದರ ಪರಿಣಾಮ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಈ ವೇಳೆ ಶವದ ಬಳಿ ಮೂರು ಪುಟಗಳ ಸೂಸೈಡ್ ನೋಟ್ ಸಿಕ್ಕಿದ್ದು, ಅದರಲ್ಲಿ ನಾನು ಹೆಚ್ಚಾಗಿ ಕೊರಿಯನ್ ವಿಡಿಯೋಗಳನ್ನು ನೋಡುತ್ತಿದ್ದೇನೆ. ಅದರಿಂದ ನನಗೆ ಹೊರ ಬರಲಾಗುತ್ತಿಲ್ಲ ಎಂದು ಬರೆದಿದ್ದಾಳೆ.
ಮೊಬೈಲ್ ಚಟ ಮತ್ತು ನಂತರದ ಖಿನ್ನತೆಯ ಜೊತೆಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರುವುದೇ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ದೇಶದ್ರೋಹಿ ಕೃತ್ಯ: ಪಂಚಾಯತ್ ರಸ್ತೆಗೆ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಹೆಸರು!
ರೈಲಿನಲ್ಲಿ ನಿದ್ದೆ ಮಾಡುವವರಿಗೆ ಸಿಹಿ ಸುದ್ದಿ!
ಪತಿಯನ್ನು ಕಟ್ಟಿ ಹಾಕಿ ಪತ್ನಿಯ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ!: ಅಮಾನವೀಯ ಘಟನೆ
ಅತ್ಯಾಚಾರಕ್ಕೊಳಗಾದ ಬಾಲಕಿಯ ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ ಶಾಸಕ!: ಕಾಂಗ್ರೆಸ್ ಕಿಡಿ