ನೆರೆ ನೀರಲ್ಲಿ ಹೋಗಿದ್ದಕ್ಕೆ ಗುಂಪಿನಿಂದ ಮಹಿಳೆಗೆ ಕಿರುಕುಳ
ಉತ್ತರ ಪ್ರದೇಶದ ಲಕ್ನೋದಲ್ಲಿ ನೆರೆ ನೀರು ತುಂಬಿದ್ದ ರಸ್ತೆಯಲ್ಲಿ ಮೋಟಾರ್ ಸೈಕಲ್ ನಲ್ಲಿ ಸಂಚರಿಸಿದ್ದ ಮಹಿಳೆಯನ್ನು ಗುಂಪು ಪೀಡಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಇದರ ಬೆನ್ನಿಗೆ ಪೊಲೀಸ್ ನಿರ್ಲಕ್ಷವನ್ನು ಆರೋಪಿಸಿ ಡೆಪ್ಯೂಟಿ ಕಮಿಷನರ್ ಅಡಿಷನಲ್ ಡೆಪ್ಯೂಟಿ ಕಮಿಷನರ್ ಮತ್ತು ಅಸಿಸ್ಟೆಂಟ್ ಡೆಪ್ಯೂಟಿ ಕಮಿಷನರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಜೊತೆಗೆ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರನ್ನು ಮತ್ತು ಹೊಣೆಗಾರರನ್ನು ಕೂಡ ಸಸ್ಪೆಂಡ್ ಮಾಡಲಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗುವುದರೊಂದಿಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಲಕ್ನೋದ ತಾಜ್ ಹೋಟೆಲ್ ನ ಸೇತುವೆಯ ಕೆಳಗೆ ಬುಧವಾರ ಈ ಘಟನೆ ಸಂಭವಿಸಿದೆ. ಬೈಕ್ ನಲ್ಲಿ ಹೋಗುತ್ತಿರುವಾಗ ಕೆಲವರು ಬೈಕ್ ಅನ್ನು ಹಿಂದಿನಿಂದ ಎಳೆಯಲು ಶ್ರಮಿಸುವುದು ಮತ್ತು ಭಾರಿ ನೀರಿನ ಕಾರಣದಿಂದ ಇಬ್ಬರು ನೀರಿಗೆ ಬೀಳುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth