ವಿದೇಶಿ ಮಹಿಳೆಯಿಂದ ಕ್ಯಾಬ್ ಚಾಲಕನಿಗೆ ಚಾಕುವಿನಿಂದ ಇರಿತ
ಚಂಡೀಗಢ: ಕ್ಯಾಬ್ ಚಾಲಕನಿಗೆ ವಿದೇಶಿ ಮಹಿಳೆಯೊಬ್ಬಳು ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿರುವ ಘಟನೆ ಗುರುಗ್ರಾಮ್‍ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮಹಿಳೆ ಬುರ್ಕಾ ಧರಿಸಿ ಬೆಳಗ್ಗೆ 11 ಗಂಟೆ ಸುಮಾರಿಗೆ ಗುರುಗ್ರಾಮದ ಸೈಬರ್ ಸಿಟಿ ಪ್ರದೇಶದಿಂದ ಕ್ಯಾಬ್ ಹತ್ತಿದ್ದಾಳೆ. ನಂತರ ಚಾಲಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾಳೆ. ಆದರೆ ಮಹಿಳೆಯನ್ನು ಪಿಸಿಆರ್ ಪೊಲೀಸರು ಹಿಂಬಾಲಿಸಿ ಬಂಧಿಸಿದ್ದಾರೆ.
ಆಕೆಯನ್ನು ವಿಚಾರಣೆ ನಡೆಸಿದ ವೇಳೆ ಮಹಿಳೆಗೆ 30 ವರ್ಷದವಳಾಗಿದ್ದು, ಈಜಿಪ್ಟ್ ಮೂಲದವಳಾಗಿದ್ದಾಳೆ ಎಂಬ ಸತ್ಯ ಬಹಿರಂಗಗೊಂಡಿದೆ ಮತ್ತು ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಅನುವಾದಕರನ್ನು ಕರೆಸಲಾಗಿತ್ತು. ಮಹಿಳೆ ಹೇಳಿಕೆ ದಾಖಲಿಸಿಕೊಂಡ ಬಳಿಕ ಘಟನೆಯ ಹಿಂದಿನ ಕಾರಣ ತಿಳಿದುಬಂದಿದೆ.
ಚಾಕು ಇರಿತದಿಂದ ಗಾಯಗೊಂಡಿದ್ದ ಕ್ಯಾಬ್ ಚಾಲಕನನ್ನು ಸ್ಥಳೀಯ ಗುರುಗ್ರಾಮ್‍ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನೀನು ಲೂಟಿಕೋರ ನನ್ಮಗ, ದೇಶದ್ರೋಹಿ: ಈಶ್ವರಪ್ಪ ವಿರುದ್ಧ ಗುಡುಗಿದ ಡಿ.ಕೆ.ಶಿವಕುಮಾರ್
ನಂದಿನಿ ನದಿಗೆ ಹಾರಿ ಇಂಜಿನಿಯರ್ ಆತ್ಮಹತ್ಯೆ
ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು
ರಾಷ್ಟ್ರಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆ: ಸಚಿವ ಈಶ್ವರಪ್ಪ ಕೈ ಬಿಡುವಂತೆ ಆಗ್ರಹಿಸಿ ನಿಲುವಳಿ ಸೂಚನೆ; ಸಿದ್ದರಾಮಯ್ಯ