ಕೊವಿಡ್ ನಿಂದ ಮೃತಪಟ್ಟ ಅಣ್ಣ: ವಿಧವೆ ಅತ್ತಿಗೆಯನ್ನು ವಿವಾಹವಾದ ಸಹೋದರ
ಮುಂಬೈ: ಕೊವಿಡ್ ನಿಂದ ಅಣ್ಣ ಸಾವಿಗೀಡಾಗಿದ್ದು, ಈ ಹಿನ್ನೆಲೆಯಲ್ಲಿ ಆತನ ಸಹೋದರ ವಿಧವೆಯಾದ ತನ್ನ ಅತ್ತಿಗೆಯನ್ನು ವಿವಾಹವಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಅಹಮದ್‍ನಗರದ ಅಕೋಲೆ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ನೀಲೇಶ್ ಶೇಟೆ(31) ಎಂಬವರು ಕೊವಿಡ್ ಸೋಂಕಿನಿಂದ ಸಾವನ್ನಪ್ಪಿದ್ದರು. ಇದರಿಂದಾಗಿ ಅವರ ಪತ್ನಿ ಮಕ್ಕಳು ಬೀದಿಗೆ ಬರುವಂತಾಗಿತ್ತು.
ನೀಲೇಶ್ ಶೇಟೆ ಪತ್ನಿ ಪೂನಂಗೆ 19 ತಿಂಗಳ ಮಗಳಿದ್ದು, ಇವರಿಬ್ಬರಿಗೂ ಯಾರೂ ಆಧಾರವಿರಲಿಲ್ಲ. ಹೀಗಾಗಿ ನೀಲೇಶ್ ಶೇಟೆಯ ಸಹೋದರ 26 ವರ್ಷ ವಯಸ್ಸಿನ ಸಮಾಧಾನ್ ತನ್ನ ಅತ್ತಿಗೆಯನ್ನು ವಿವಾಹವಾಗಿ ಆಕೆಗೆ ಆಧಾರವಾಗಲು ಒಪ್ಪಿಕೊಂಡಿದ್ದಾನೆ.
ಇನ್ನೂ ಅಕೋಲಾದ ಖಂಡೋಬಾ ದೇವಸ್ಥಾನದಲ್ಲಿ ಎರಡೂ ಕುಟುಂಬಸ್ಥರ ಒಪ್ಪಿಗೆಯಿಂದ ಇವರಿಬ್ಬರ ವಿವಾಹವನ್ನು ಸರಳವಾಗಿ ನಡೆಸಲಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೊವಿಡ್ ನಿಂದ ಮೃತಪಟ್ಟ ಅಣ್ಣ: ವಿಧವೆ ಅತ್ತಿಗೆಯನ್ನು ವಿವಾಹವಾದ ಸಹೋದರ
ಹಾಸನಕ್ಕೂ ವ್ಯಾಪಿಸಿದ ಹಿಜಾಬ್-ಕೇಸರಿ ವಿವಾದ!
ಕೌಟುಂಬಿಕ ಹಿಂಸಾಚಾರ ಆರೋಪ: ಅಧಿಕಾರ ವಹಿಸಿಕೊಂಡ ಮೂರೇ ದಿನದಲ್ಲಿ ಪೆರು ಪ್ರಧಾನಿ ವಜಾ
ಬಿಜೆಪಿ ಸೋಲಿಸಿ, ಸಿಎಂ ಯೋಗಿಯನ್ನು ಉತ್ತರಾಖಂಡಕ್ಕೆ ವಾಪಸ್ ಕಳುಹಿಸಿ: ಅಖಿಲೇಶ್ ಯಾದವ್