ತರಗತಿ ಆರಂಭವಾದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ 10 ದಿನ ದಸರ ರಜೆ! - Mahanayaka
4:55 PM Wednesday 11 - December 2024

ತರಗತಿ ಆರಂಭವಾದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ 10 ದಿನ ದಸರ ರಜೆ!

school
07/09/2021

ಬೆಂಗಳೂರು: ರಾಜ್ಯದಲ್ಲಿ ಕೊರೊನಾದಿಂದಾಗಿ  ಈ ಬಾರಿ ಶಾಲಾ ಕಾಲೇಜು ವಿಳಂಬವಾಗಿ ಆರಂಭವಾಗಿದೆ. ಕಳೆದ ತಿಂಗಳು 23ರಂದು  9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾಗಿದೆ. 6ರಿಂದ 8ನೇ ತರಗತಿ ವರೆಗೆ ಇದೇ ತಿಂಗಳು ಸೋಮವಾರದಿಂದಷ್ಟೇ ಆರಂಭವಾಗಿದೆ. ಈ ನಡುವೆ ಶಿಕ್ಷಣ ಇಲಾಖೆ ದಸರ ರಜೆ ಹಾಗೂ ಬೇಸಿಗೆ ರಜೆಯನ್ನು ಕೂಡ ಘೋಷಿಸಿದೆ.

ಅಕ್ಟೋಬರ್ 10ರಿಂದ 20ರವರೆಗೆ ಅಂದರೆ,  10 ದಿನಗಳ ಕಾಲ ದಸರ ರಜೆಯನ್ನು ಘೋಷಿಸಲಾಗಿದ್ದು, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ, ಅನುದಾನರಹಿತ ಶಾಲೆಗಳಿಗೆ ರಜೆ ನೀಡಲಾಗಿದೆ. 2021 -22 ನೇ ಶೈಕ್ಷಣಿಕ ವರ್ಷದ ಬೇಸಿಗೆ ರಜೆಯನ್ನು 2022 ರ ಮೇ 1 ರಿಂದ 28 ರವರೆಗೆ ನೀಡಲಾಗಿದೆ ಎಂದು ವರದಿಯಾಗಿದೆ.

ಈ ಶೈಕ್ಷಣಿಕ ಸಾಲಿನಲ್ಲಿ ಜು. 2021 ರಿಂದ ಏ.2022 ರವರೆಗೆ 304 ದಿನಗಳು ಲಭ್ಯವಿದ್ದು, 66 ರಜೆ ದಿನಗಳಿವೆ. ಉಳಿದ 238 ದಿನಗಳಲ್ಲಿ 4 ಸ್ಥಳೀಯ ರಜೆ, ದಸರಾ ರಜೆ ಹೊರತಾಗಿ 223 ಶಾಲಾ ಕರ್ತವ್ಯದ ದಿನಗಳು ಕಲಿಕೆ, ಬೋಧನಾ ಪ್ರಕ್ರಿಯೆಗೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿವೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

ಮಳೆಗಾಗಿ 6 ವರ್ಷ ವಯಸ್ಸಿನ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಗ್ರಾಮದ ಹಿರಿಯರು!

“ಬ್ರಾಹ್ಮಣರನ್ನು ನಮ್ಮ ಗ್ರಾಮಗಳಿಗೆ ಬರಲು ಬಿಡಬಾರದು” ಎಂದಿದ್ದ ಛತ್ತೀಸ್ ಗಢ ಸಿಎಂ ತಂದೆ ನಂದ ಕುಮಾರ್ ಬಘೇಲ್ ಜೈಲು ಪಾಲು!

ಕೃಷಿ ಇಲಾಖೆಯಲ್ಲಿ 210 ಕೋಟಿ ರೂ. ಭ್ರಷ್ಟಾಚಾರ: ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಗೆ ದೂರು

ಪಂಜ್ ಶಿರ್ ಗಳನ್ನು ತಾಲಿಬಾನ್ ವಶಕ್ಕೆ ಪಡೆದಿರುವುದು ಸುಳ್ಳು | ಸ್ಪಷ್ಟಪಡಿಸಿದ NRF

ರೈಡಿಂಗ್ ಹೊರಟಿದ್ದ ಬೈಕ್ ಕಂಟೈನರ್ ಗೆ ಡಿಕ್ಕಿ | ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ಸ್ನಾನಕ್ಕೆ ಹೋಗಿ 2 ಗಂಟೆಯಾದರೂ ವಿದ್ಯಾರ್ಥಿನಿ ಮರಳಿ ಬರಲಿಲ್ಲ | ಬಾತ್ ರೂಮ್ ಬಾಗಿಲು ಮುರಿದು ನೋಡಿದಾಗ ಕಾದಿತ್ತು ಶಾಕ್

ಪೆರಿಯಾರ್ ಜನ್ಮದಿನವನ್ನು ಸಾಮಾಜಿಕ ನ್ಯಾಯದಿನವನ್ನಾಗಿ ಆಚರಿಸಲು ನಿರ್ಧಾರ | ಎಂ.ಕೆ.ಸ್ಟ್ಯಾಲಿನ್ 

 

ಇತ್ತೀಚಿನ ಸುದ್ದಿ