ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: 25 ಸಾವಿರ ರೂ.ವರೆಗೆ ಪ್ರೋತ್ಸಾಹ ಧನ
ಹಾಸನ: 2020-21ನೇ ಸಾಲಿನಲ್ಲಿ National Council for Teacher Education , Department of State Educational Research and Training ನಿಂದ ಮಾನ್ಯತೆ ಪಡೆದಿರುವ ಸರ್ಕಾರಿ/ಅರೆ ಸರ್ಕಾರಿ/ ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ಬಿ.ಎಡ್ ಮತ್ತು ಡಿ.ಎಡ್ ಕೋರ್ಸ್‍ಗಳಲ್ಲಿ ದಾಖಲಾತಿ ಹೊಂದಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ ಬೌದ್ಧ ಮತ್ತು ಪಾರ್ಸಿ) ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ರೂ 25,000/-ಗಳ ವಿಶೇಷ ಪ್ರೋತ್ಸಾಹಧನ ಮಂಜೂರು ಮಾಡಲು ಅರ್ಜಿಗಳನ್ನು ಅಹ್ವಾನಿಸಲಾಗಿದ್ದು.
ಅಭ್ಯರ್ಥಿಗಳು ಅರ್ಜಿಯನ್ನು ನಿರ್ದೇಶನಾಲಯದ ಅಧಿಕೃತ ವೆಬ್‍ಸೈಟ್ https://dom.karnataka.gov.in ಅಥವಾ ಜಿಲ್ಲಾ ಕಚೇರಿಯಿಂದ ಪಡೆದು ಭರ್ತಿಮಾಡಿ ಅರ್ಜಿಯಲ್ಲಿ ಸೂಚಿಸಿರುವ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಡಿಸೆಂಬರ್ 15ರೊಳಗೆ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನ ಅಜಾóದ್ ಭವನ್, ಆಕಾಶವಾಣಿ ಹಿಂಭಾಗ, ಹಾಸನ. ಅರ್ಜಿ ಸಲ್ಲಿಸಬಹುದಾಗಿದೆ.
ಷರತ್ತುಗಳು:-ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು, ಅಭ್ಯರ್ಥಿಯು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ ಬೌದ್ಧ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದವರಾಗಿರಬೇಕು, ಅಭ್ಯರ್ಥಿಗಳ ಪೋಷಕರ ವಾರ್ಷಿಕ ಆದಾಯವು ಗರಿಷ್ಠ ರೂ 6 ಲಕ್ಷಕ್ಕೆ ಮೀರಿರಬಾರದು, ವಿದ್ಯಾರ್ಥಿಯು ರಾಜ್ಯ/ಕೇಂದ್ರ ಸರ್ಕಾರಿ ಉದ್ಯೋಗಿ ಅಥವಾ ಪೂರ್ಣಕಾಲಿಕ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರಬಾರದು.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ/ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೌಲಾನಾ ಆಜಾದ್ ಭವನ, ಶ್ರೀ ವಿದ್ಯಾಗಣಪತಿ ದೇವಸ್ಥಾನದ ಅಡ್ಡ ರಸ್ತೆ, ಆಕಾಶವಾಣಿ ಹಿಂಭಾಗ, ಸಾಲಗಾಮೆ ಮುಖ್ಯ ರಸ್ತೆ, ಹಾಸಸ. ದೂರವಾಣಿ ಸಂಖ್ಯೆ: 08172-267373, 08172-268373 ಸಂಪರ್ಕಿಸಬಹುದಾಗಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.