ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್ ಶುಲ್ಕ ಮನ್ನಾ | ತಮಿಳುನಾಡು ಸಿಎಂ ಸ್ಟಾಲಿನ್ ಘೋಷಣೆ
ಚೆನ್ನೈ: ತಮಿಳುನಾಡು ಮೀಸಲಾತಿಯಡಿ ಸೀಟು ಪಡೆದ ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್ ಶುಲ್ಕ ಮನ್ನಾ ಮಾಡಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತೀರ್ಮಾನಿಸಿದ್ದು, ಈ ಮೂಲಕ ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ಅವರು ನೀಡಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಆದೇಶ ನೀಡಿ ಮಾತನಾಡಿದ ಅವರು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸುಮಾರು 10 ಸಾವಿರ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣ ಕಲಿಯಲಿದ್ದು, ಅವರ ಟ್ಯೂಷನ್ ಶುಲ್ಕ ಸೇರಿದಂತೆ ಹಲವು ಶುಲ್ಕಗಳನ್ನು ಸರ್ಕಾರ ಭರಿಸಲು ತೀರ್ಮಾನಿಸಿದೆ ಎಂದು ಘೋಷಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ನಲ್ಲಿ ಶೇಕಡ 7.5 ರಷ್ಟು ಮೀಸಲಾತಿಯನ್ನು ಈಗಾಗಲೇ ನೀಡಿರುವ ಸ್ಟ್ಯಾಲಿನ್ ಸರ್ಕಾರ, ಕೃಷಿ, ಪಶುವೈದ್ಯಕೀಯ, ಮೀನುಗಾರಿಕೆ, ಕಾನೂನು ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಪ್ರವೇಶ ಪಡೆಯಲಿರುವ 350 ವಿದ್ಯಾರ್ಥಿಗಳ ಟ್ಯೂಷನ್ ಶುಲ್ಕ, ಹಾಸ್ಟೆಲ್ ಶುಲ್ಕ, ಕೌನ್ಸೆಲಿಂಗ್ ಶುಲ್ಕವನ್ನು ಸರ್ಕಾರ ಪಾವತಿಸಲಿದೆ ಎಂದು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on
ಇನ್ನಷ್ಟು ಸುದ್ದಿಗಳು…
ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ಅಗ್ನಿ ಅವಘಡ: ತಾಯಿ, ಮಗಳು ಸಜೀವ ದಹನ
ವಿಷ ಸೇವಿಸಿದ್ದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಬಾಲಕಿ ಚಿಕಿತ್ಸೆ ಫಲಿಸದೇ ಸಾವು
ಕಡಲತೀರದಲ್ಲಿ ಆಕ್ರಮಣಕಾರಿ ‘ಟೈಗರ್ ಶಾರ್ಕ್’ನ ಕಳೇಬರ ಪತ್ತೆ
ನೆಲಗಡಲೆ, ಬಾದಾಮಿ, ಒಣದ್ರಾಕ್ಷಿ ಹೃದಯಕ್ಕೆ ಚೈತನ್ಯ ತುಂಬುವ ತಿನಿಸುಗಳು
ಕೋಲಾರ ಘಟನೆ: ಬಿಜೆಪಿ, ಹಿಂದೂತ್ವ ಸಂಘಟನೆಗಳಿಗೆ ನಾಚಿಕೆಗೇಡು! | ಬಿಜೆಪಿ ಮನುವಾದಿ ಎಂದ ಕಾಂಗ್ರೆಸ್
ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ರಾಜಕೀಯಕ್ಕೆ ಎಂಟ್ರಿ? | ಆಸ್ಕರ್ ಫೆರ್ನಾಂಡಿಸ್ ಸ್ಥಾನ ತುಂಬುತ್ತಾರಾ?
ಗೋಶಾಲೆಗಳನ್ನೇ ಮಾಂಸ ಮಾರಾಟ ಕೇಂದ್ರಗಳನ್ನಾಗಿಸುವ ಹುನ್ನಾರ ನಡೆಯುತ್ತಿದೆ | ಕೋಡಿಹಳ್ಳಿ ಚಂದ್ರಶೇಖರ್ ಗಂಭೀರ ಆರೋಪ