ವಿದ್ಯಾರ್ಥಿನಿ ನೀನಾಳ ಆತ್ಮಹತ್ಯೆಯ ಹಿಂದಿದೆ ಹಲವು ಅನುಮಾನಗಳು | ಸೂಕ್ತ ತನಿಖೆಗೆ ಆಗ್ರಹ - Mahanayaka
11:07 AM Wednesday 10 - September 2025

ವಿದ್ಯಾರ್ಥಿನಿ ನೀನಾಳ ಆತ್ಮಹತ್ಯೆಯ ಹಿಂದಿದೆ ಹಲವು ಅನುಮಾನಗಳು | ಸೂಕ್ತ ತನಿಖೆಗೆ ಆಗ್ರಹ

neena
08/10/2021

ಮಂಗಳೂರು: ನಗರದ ಕೊಲೊಸೊ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಜನೆ ಮಾಡುತ್ತಿದ್ದ ಕಾಸರಗೋಡು ಮೂಲದ ವಿದ್ಯಾರ್ಥಿನಿ ನೀನಾ ಹಾಸ್ಟೇಲ್‌ ನ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯ ಬಗ್ಗೆ ಕಾಲೇಜಿನ ವಿದ್ಯಾರ್ಥಿ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿದೆ. ವಿದ್ಯಾರ್ಥಿನಿಯು ಆತ್ಮಹತ್ಯೆಗೈಯಲು ಹಾಸ್ಟೆಲ್‌ ನಲ್ಲಿ ನೀಡುವ ಮಾನಸಿಕ ಕಿರುಕುಳವೇ ಕಾರಣ ಎಂದು ಮೇಲ್ನೋಟಕ್ಕೆ ಕಾಣುತ್ತಿದ್ದು ಪೊಲೀಸ್ ಇಲಾಖೆ ವಿದ್ಯಾರ್ಥಿ ನೀನಾಳ ಸಾವಿನ ನೈಜ ಕಾರಣವನ್ನು ಪತ್ತೆಹಚ್ಚಿ ಬಯಲಿಗೆಳೆಯಲು ಸಮಗ್ರ ತನಿಖೆ ನಡೆಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ( SFI) ದ.ಕ ಜಿಲ್ಲಾ ಸಮಿತಿ ಆಗ್ರಹಿಸಿದೆ.


Provided by

ಕಾಲೇಜಿಗೆ ಕೇರಳದಿಂದ ವಿದ್ಯಾರ್ಥಿಗಳನ್ನು ಪೂರೈಸುತ್ತಿರುವ ಏಜೆಂಟ್ ವಿದ್ಯಾರ್ಥಿನಿಯರಿಗೆ ನಿರ್ಬಂಧಗಳ ನೆಪ ಮತ್ತು ಶುಲ್ಕದ ನೆಪದಲ್ಲಿ ಕಿರುಕುಳ ಕೊಡುತ್ತಿದ್ದು ವಿದ್ಯಾರ್ಥಿಗಳು ಅವರು ಎದುರಿಸುತ್ತಿರುವ ಮಾನಸಿಕ ಒತ್ತಡವನ್ನು ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ ಐ ಮುಖಂಡರ ಬಳಿ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿನಿಯರ ಹಾಸ್ಟೆಲ್‌ ನಲ್ಲಿ ವಾರ್ಡನ್ ಹೊರತಾಗಿ ಓರ್ವ ಪುರುಷ ಏಜೆಂಟ್ ಬಂದು ತನ್ನದೇ ಆದ ನಿಯಮಗಳನ್ನು ಹೇರುವುದಲ್ಲದೆ ರಾತ್ರಿ ಹೊತ್ತು ಶುಲ್ಕದ ನೆಪವೊಡ್ಡಿ ವಿದ್ಯಾರ್ಥಿನಿಯರ ಕೊಠಡಿಗೆ ತೆರಳುವ ವಿಷಯ ತಿಳಿದುಬಂದಿದೆ. ವಿದ್ಯಾರ್ಥಿನಿಗೆ ಡೈರಿ ಬರೆಯುವ ಹವ್ಯಾಸವಿದ್ದು ವಿದ್ಯಾರ್ಥಿನಿಯ ಸಾವಿನ ಬಳಿಕ ಪೊಲೀಸರ ಬದಲು ಪ್ರಾಂಶುಪಾಲರು ವಿದ್ಯಾರ್ಥಿನಿಯ ಡೈರಿ ತೆಗೆದುಕೊಂಡು ಹೋಗಿದ್ದು ಇದು ಅನುಮಾನಕ್ಕೀಡಾಗಿದೆ.

ಹಾಸ್ಟೆಲ್‌ ನ ನಿಯಮ ಪಟ್ಟಿಯಲ್ಲಿ “ನಮಗೆ ಬೇಕಾದ ಹಾಗೆ ನಿಯಮ ಬದಲಾಯಿಸುತ್ತೇವೆ” ಎಂಬರ್ಥದಲ್ಲಿ ನಿಯಮ ರಚಿಸಿ ವಿದ್ಯಾರ್ಥಿನಿಯರಲ್ಲಿ ಸಹಿ ಮಾಡಲು ಒತ್ತಡ ಹೇರಿದ್ದು, ಸಹಿ ಮಾಡದೆ ಇದ್ದರೆ ಆಡಳಿತ ಮಂಡಳಿಯ ಕ್ಯಾಬಿನ್ ಗೆ ಒಬ್ಬರೇ ಹೋಗಿ ಮಾತನಾಡಬೇಕು ಎಂದು ತಿಳಿಸಿರುತ್ತಾರೆ.

ವಿದ್ಯಾರ್ಥಿನಿಯರಿಗೆ ಅನಾರೋಗ್ಯದ ಸಮಯದಲ್ಲಿ ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಇಲ್ಲ ಹಾಗೂ ಪಿರೇಡ್ಸ್ ಸಮಯದಲ್ಲಿ ನ್ಯಾಪ್ಕೀನ್ ಖರೀದಿಸಲೂ ಸಹ ಹೊರಗೆ ಬಿಡುತ್ತಿಲ್ಲ ಮತ್ತು ಅವರುಗಳು ಕೂಡ ವ್ಯವಸ್ಥೆ ಮಾಡುತ್ತಿಲ್ಲ. ಪ್ರತಿಯೊಂದು ಹಾಸ್ಟೆಲ್‌ ನಲ್ಲೂ ಅವಶ್ಯಕ ಮಾತ್ರೆಗಳು ಮತ್ತು ಹೆಣ್ಣುಮಕ್ಕಳಿಗೆ ನ್ಯಾಪ್ಕೀನ್ ಇರಬೇಕು ಎಂಬ ನಿಯಮ ಇದ್ದರೂ ಅದನ್ನು ಪಾಲಿಸುತ್ತಿಲ್ಲ.

ಈ ಎಲ್ಲಾ ಸಮಸ್ಯೆಗಳ ನಡುವೆ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ಲ್ ವಾರ್ಡಾನ್ ಸಮಸ್ಯೆಯೂ ಎದುರಾಗಿದೆ. ಈಗಾಗಲೇ 3 ವಾರ್ಡನ್ ಬದಲಾಗಿದ್ದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ವಾರ್ಡನ್‌ ಹಾಸ್ಟೆಲ್‌ ನಲ್ಲಿ ಇರುತ್ತಾರೆ. ವಿದ್ಯಾರ್ಥಿನಿಯರಿಗೆ ಭದ್ರತೆಗೆ ಸೆಕ್ಯುರಿಟಿ ವ್ಯವಸ್ಥೆ ಕೂಡ ಇಲ್ಲ. ವಿದ್ಯಾರ್ಥಿನಿಯರ ಹೆತ್ತವರು ಆರ್ಥಿಕ ಸಮಸ್ಯೆಯಿಂದಾಗಿ ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಅಥವಾ ಸರಕಾರಿ ಹಾಸ್ಟೆಲ್‌ನಲ್ಲಿ ಇರಿಸುತ್ತೇವೆ ಅಂದರೆ ಟಿ.ಸಿ. ಕೊಡುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ.

ಇನ್ನೂ ಅನೇಕ ಸಮಸ್ಯೆಗಳನ್ನು ಮತ್ತು ಮಾನಸಿಕ ಒತ್ತಡವನ್ನು ವಿದ್ಯಾರ್ಥಿನಿಯರು ಅನುಭವಿಸುತ್ತಿದ್ದು ವಿದ್ಯಾರ್ಥಿನಿ ನೀನಾಳ ಸಾವಿಗೆ ಇದುವೇ ಮುಖ್ಯ ಕಾರಣವಾಗಿದ್ದು ಪೊಲೀಸ್ ಇಲಾಖೆ  ಕೂಲಂಕುಷ ತನಿಖೆ ಮಾಡಬೇಕು. ಆತ್ಮಹತ್ಯೆ ಮಾಡಲು ಹಿಂದಿರುವ ಕಾರಣವನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನುಕ್ರಮಕ್ಕೆ ಒಳಪಡಿಸಬೇಕೆಂದು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (SFI) ದ.ಕ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಮಾಧುರಿ ಬೋಳಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಮದುವೆಯಾದ ಬಳಿಕ ನರಕ ತೋರಿಸಿದ ಪತಿ | ಹಿಂಸೆ ತಾಳಲಾರದೇ ಆತ್ಮಹತ್ಯೆಗೆ ಶರಣಾದ ಮಹಿಳೆ

ಆತ್ಮಹತ್ಯೆ ಮಾಡುವುದಾಗಿ ಶಿವಮೊಗ್ಗದಿಂದ ನಾಪತ್ತೆಯಾಗಿದ್ದ ನೌಕರ ಧರ್ಮಸ್ಥಳದಲ್ಲಿ ಪತ್ತೆ!

ತನ್ನನ್ನು ಸಾಕಿದ ವ್ಯಕ್ತಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟ ಗೊರಿಲ್ಲ: ನೆಟ್ಟಿಗರ ಹೃದಯ ಕರಗಿಸಿದ ಫೋಟೋ

ಬಿಜೆಪಿ ನಾಯಕರು ಕಾರಿನಲ್ಲಿ ಬರುವ ವೇಳೆ ಎಚ್ಚರವಾಗಿರಿ | ಸಾರ್ವಜನಿಕರಿಗೆ ಡಿ.ಕೆ.ಶಿವಕುಮಾರ್ ಸಲಹೆ

ಯೋಗ ಶಿಕ್ಷಕನಿಂದ ಯುವತಿಯ ಅತ್ಯಾಚಾರ: ಯೋಗದ ಹೆಸರಿನಲ್ಲಿ ಶಿಕ್ಷಕನ ಕಾಮಲೀಲೆ ಬಯಲು

ಆಸ್ಪತ್ರೆ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಹೊಸ ತಿರುವು: ಮೊಬೈಲ್ ನಲ್ಲಿ ಪತ್ತೆಯಾದ ಫೋಟೋಗಳಿಂದ ರಹಸ್ಯ ಬಯಲು

ಮನೆ ಕುಸಿದು 7 ಮಂದಿ ಸಾವು ಪ್ರಕರಣ: ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಹಿಂಸೆಗೆ ಪ್ರಚೋದಿಸುವ ದುರುದ್ದೇಶದಿಂದಲೇ ರೈತರ ಹತ್ಯೆ ನಡೆದಿದೆ | ರವಿಕಿರಣ್ ಪೂನಚ

 

ಇತ್ತೀಚಿನ ಸುದ್ದಿ