ಅನೈತಿಕ ಪೊಲೀಸ್ ಗಿರಿ:  ವಿದ್ಯಾರ್ಥಿಗೆ ಹಲ್ಲೆ ನಡೆಸಿ, ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಪುಂಡರು

moral policing
16/11/2021

ದಕ್ಷಿಣ ಕನ್ನಡ: ಅನ್ಯ ಧರ್ಮದ ವಿದ್ಯಾರ್ಥಿ, ವಿದ್ಯಾರ್ಥಿನಿ ಜೊತೆಗೆ ಬೈಕ್ ನಲ್ಲಿ ಪ್ರಯಾಣಿಸಿದರು ಎಂದು ಆರೋಪಿಸಿ, ಅವರನ್ನಿ  ಬೈಕ್ ನಲ್ಲಿ ಹಿಂಬಾಲಿಸಿ ವಿದ್ಯಾರ್ಥಿಗೆ ಹಲ್ಲೆ ನಡೆಸಿ, ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ನ ಕಲ್ಯಾಣಿ ಸಿಟಿ ಪಾರ್ಲ್ ಅಪಾರ್ಟ್ ಮೆಂಟ್ ಬಳಿಯಲ್ಲಿ ನಡೆದಿದೆ.

ದಕ್ಷಣ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಅನೈತಿಕ ಪೊಲೀಸ್ ಗಿರಿ ಸದ್ದು ಮಾಡುತ್ತಿದ್ದು, ಸರ್ಕಾರವೇ ಪರೋಕ್ಷವಾಗಿ ಅನೈತಿಕ ನೈತಿಕ ಪೊಲೀಸ್ ಗಿರಿಗೆ ಬೆಂಬಲ ನೀಡುತ್ತಿರುವುದರಿಂದಾಗಿ ಪೊಲೀಸರು ಕೂಡ ಅಸಹಾಯಕರಾಗುವಂತಾಗಿದೆ. ಆದರೂ, ಘಟನೆ ನಡೆದ ತಕ್ಷಣವೇ ಪೊಲೀಸರು ಆರೋಪಿಗಳನ್ನು ಬಂಧಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್, ಪ್ರತೀಶ್, ಭರತ್, ಸುಖೇಶ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಯುವಕ ಯುವತಿಯ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿ, ಯುವತಿಯರ ಜೊತೆಗೆ ಅಸಭ್ಯವಾಗಿ ವರ್ತಿಸುವ ಪ್ರವೃತಿ ಕೂಡ ಹೆಚ್ಚಾಗುತ್ತಿದೆ. ಇದರ ಬಗ್ಗೆ ಸರ್ಕಾರ ಕೂಡ ಉದಾಸೀನ ತೋರುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ನೈತಿಕ ಪೊಲೀಸ್ ಗಿರಿಯ ಪರವಾಗಿದ್ದಾರೆ ಎನ್ನುವ ಭಾವನೆ ಕಿಡಿಗೇಡಿಗಳಲ್ಲಿದ್ದು, ಇದು ಅಪರಾಧ ಕೃತ್ಯಕ್ಕೆ ಇನ್ನಷ್ಟು ಬಲವನ್ನು ನೀಡಿದೆ ಎನ್ನುವ ಮಾತುಗಳು ಇದೀಗ ವ್ಯಾಪಕವಾಗಿ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಡಿಬೆಟ್ ಗೆ ಬನ್ನಿ, ನನ್ನ ಹಿಂದುತ್ವ ಏನು ಅಂತ ಬೋಧನೆ ಮಾಡುತ್ತೇನೆ | ದೀಪು ಶೆಟ್ಟಿಗಾರ್ ಸವಾಲು

ಬಸ್ ನಿಲ್ದಾಣದಲ್ಲಿಯೇ ಬಿಟ್ಟು ಬಂದಿದ್ದಕ್ಕೆ ಕೆಎಸ್ಸಾರ್ಟಿಸಿಗೆ ಬಿಸಿ ಮುಟ್ಟಿಸಿದ ಹಿರಿಯ ನಾಗರಿಕ!

ಇಂದು ಪುನೀತ್ ನಮನ: ಸ್ಟಾರ್ ನಟರು ಭಾಗಿಯಾಗುವ ಸಾಧ್ಯತೆ | ಪಾಸ್ ಇದ್ದವರಿಗೆ ಮಾತ್ರ ಎಂಟ್ರಿ!

ಕಂಗನಾ ಹೇಳಿದ್ದನ್ನು ಮುಸ್ಲಿಮ್ ವ್ಯಕ್ತಿ ಹೇಳಿದ್ದರೆ, ಮೊಣಕಾಲಿಗೆ ಗುಂಡಿಟ್ಟು ಜೈಲಿಗಟ್ಟಲಾಗುತ್ತಿತ್ತು | ಓವೈಸಿ

ಶರಣ್ ಪಂಪ್ ವೆಲ್ ಗೆ ಮುಸ್ಲಿಮ್ ಸಂಸ್ಥೆಗಳ ಗುತ್ತಿಗೆಯ ಹಣ ಆಗುತ್ತದೆ, ಮುಸ್ಲಿಮರು ಆಗುವುದಿಲ್ಲ | ತರಾಟೆಗೆತ್ತಿಕೊಂಡ ಬಿರುವೆರ್ ಕುಡ್ಲ

ಕೆರೆಗೆ ತಾವರೆಗಿಡ ಹಾಕಲು ಹೋದ ವಿದ್ಯಾರ್ಥಿನಿಯ ದಾರುಣ ಸಾವು!

ಸಿನಿಮಾ ಮಂದಿರದ ಹೊರಗಡೆ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಸಿದ ಶಿವರಾಜ್ ಕುಮಾರ್

ಇತ್ತೀಚಿನ ಸುದ್ದಿ

Exit mobile version