ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದ ಶಾಲೆಯಲ್ಲಿಯೇ ಅತ್ಯಾಚಾರ! - Mahanayaka

ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದ ಶಾಲೆಯಲ್ಲಿಯೇ ಅತ್ಯಾಚಾರ!

rajasthan
16/10/2021

ರಾಜಸ್ತಾನ:  7ನೇ ತರಗತಿಯ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಶಾಲೆಯ ಶಿಕ್ಷಕನೇ ಅತ್ಯಾಚಾರ ನಡೆಸಿದ ಘಟನೆ ಜೈಪುರದ ಜಂಜುನಿ ಜಿಲ್ಲೆಯಲ್ಲಿ ನಡೆದಿದ್ದು, ಅತ್ಯಾಚಾರ ನಡೆಸಿದ ಬಳಿಕ ಈ ವಿಚಾರವನ್ನು ಯಾರಿಗೂ ತಿಳಿಸಬೇಡ ಎಂದು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದಾನೆ.

ಅಕ್ಟೋಬರ್ 5ರಂದು ಶಿಕ್ಷಕ ಈ ಕೃತ್ಯ ನಡೆಸಿದ್ದಾನೆ. ತರಗತಿ ಮುಗಿದ ಬಳಿಕ ಸ್ವಲ್ಪ ಹೊತ್ತು ಶಾಲೆಯಲ್ಲಿಯೇ ನಿಲ್ಲು ಎಂದು ಶಿಕ್ಷಕ ಹೇಳಿದ್ದು, ಶಿಕ್ಷಕನ ಮಾತಿಗೆ ಎದುರು ಮಾತನಾಡಲಾಗದೇ ವಿದ್ಯಾರ್ಥಿನಿ ನಿಂತಿದ್ದಾಳೆ. ಈ ವೇಳೆ ಶಿಕ್ಷಕ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ವರದಿಯಾಗಿದೆ.

ಈ ಕೃತ್ಯಕ್ಕೂ ಕೆಲವು ದಿನಗಳ ಹಿಂದೆ ಇದೇ ಶಿಕ್ಷಕ ಸಂತ್ರಸ್ತ ಬಾಲಕಿಯ ಬಳಿಯಲ್ಲಿ ಆಕೆಯ ನಗ್ನ ಚಿತ್ರಗಳನ್ನು ಕೊಡುವಂತೆ ಕೇಳಿದ್ದು, ಈ ವೇಳೆ ಬಾಲಕಿಯು ಈ ರೀತಿಯಾಗಿ ಮಾತನಾಡದಂತೆ ಶಿಕ್ಷಕನಿಗೆ ಹೇಳಿದ್ದಳು ಎನ್ನಲಾಗಿದೆ. ಆ ಬಳಿಕ ವಿದ್ಯಾರ್ಥಿನಿಯನ್ನು ಶಾಲೆ ಮುಗಿದ ಮೇಲೆ ಸ್ವಲ್ಪ ಸಮಯ ನಿಲ್ಲು ಎಂದು ಹೇಳಿ, ಆಕೆಯ ಕೈಯಲ್ಲಿದ್ದ ಮೊಬೈಲ್ ನ್ನು ತೆಗೆದುಕೊಂಡು ತಾನು ಕಳುಹಿಸಿದ್ದ ಅಸಭ್ಯ ಮೆಸೆಜ್ ಗಳನ್ನು ಡಿಲೀಟ್ ಮಾಡಿ, ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ.

ಘಟನೆ ನಡೆದು 9 ದಿನವಾದರೂ ಇದನ್ನು ಯಾರಿಗೂ ಹೇಳಲಾಗದೇ ಖಿನ್ನತೆಯಿಂದಿದ್ದಳು ಅಕ್ಟೋಬರ್ 14ರಂದು ತನ್ನ ಪುಸ್ತಕದಲ್ಲಿದ್ದ  ಚೈಲ್ಡ್ ಲೈನ್ ಹೆಲ್ಪ್ ಲೈನ್ ಗೆ ಕರೆ ಮಾಡಿದ ಆಕೆ, ಘಟನೆಯನ್ನು ವಿವರಿಸಿದ್ದಾಳೆ. ಮಕ್ಕಳ ಕ್ಷೇಮ ಸಮಿತಿ ಅಧಿಕಾರಿಗಳು ಕೂಡಲೇ ವಿದ್ಯಾರ್ಥಿನಿ ಇದ್ದ ಸ್ಥಳಕ್ಕೆ ಬಂದಿದ್ದು, ವಿದ್ಯಾರ್ಥಿನಿಯನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಶಿಕ್ಷಕ ಆಳ್ವಾರ್‌ ಜಿಲ್ಲೆಯಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದು, ಕೂಡಲೇ ಅಲ್ಲಿಗೆ ತೆರಳಿ ಶಿಕ್ಷಕನನ್ನು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ | ಏಮ್ಸ್ ಅಧಿಕಾರಿ ಮಾಹಿತಿ

ನಾನು ಕಬಡ್ಡಿ ಆಡಿದನ್ನು ವಿಡಿಯೋ ಮಾಡಿದವ ‘ರಾವಣ’ | ಪ್ರಗ್ಯಾ ಸಿಂಗ್ ಠಾಕೂರ್

ಕದ್ರಿ ಐತಿಹಾಸಿಕ ಬೌದ್ಧ ಸ್ಥಳ ವೀಕ್ಷಣೆ: 54 ಬೌದ್ಧ ಬಿಕ್ಕುಗಳ ಕರಾವಳಿ ಪ್ರವಾಸ

ಲಾಡ್ಜ್ ನಲ್ಲಿ ದಸರ ಪಾರ್ಟಿಯ ವೇಳೆ ಸ್ನೇಹಿತರ ನಡುವೆ ಗಲಾಟೆ: ಓರ್ವನ ಬರ್ಬರ ಹತ್ಯೆ

ಅಮಾನವೀಯ ಘಟನೆ: ಎಂಡೋ ಸಲ್ಫಾನ್ ಪೀಡಿತ ಯುವಕನ ಮೇಲೆ ಅತ್ಯಾಚಾರ

ದಕ್ಷಿಣ ಕನ್ನಡ, ಉಡುಪಿ ಸಹಿತ 16 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ!

ಟಿಪ್ಪು ಸುಲ್ತಾನ್ ಇಲ್ಲದ ಮೈಸೂರು ದಸರಾ: ಬಿಜೆಪಿ ಸರಕಾರದ ಕೋಮುವಾದಿ ನಡೆ ಇತಿಹಾಸಕ್ಕೆ ಬಗೆದ ದ್ರೋಹ | ಪಾಪ್ಯುಲರ್ ಫ್ರಂಟ್

ಇತ್ತೀಚಿನ ಸುದ್ದಿ