ನಡು ರಸ್ತೆಯಲ್ಲಿ ವಿದ್ಯಾರ್ಥಿನಿಯ ಶಿರಚ್ಛೇದಿಸಿದ ಪಾಗಲ್ ಪ್ರೇಮಿ: ಮದುವೆಗೆ ಒಪ್ಪದಿದ್ದರೆ ಕೊಲ್ಲುವುದೇ? - Mahanayaka
8:04 AM Thursday 12 - December 2024

ನಡು ರಸ್ತೆಯಲ್ಲಿ ವಿದ್ಯಾರ್ಥಿನಿಯ ಶಿರಚ್ಛೇದಿಸಿದ ಪಾಗಲ್ ಪ್ರೇಮಿ: ಮದುವೆಗೆ ಒಪ್ಪದಿದ್ದರೆ ಕೊಲ್ಲುವುದೇ?

naira
26/06/2022

ಈಜಿಫ್ಟ್:  ಪ್ರೀತಿಸಿದವರನ್ನು ಮದುವೆಯಾಗಲು ಸಾಧ್ಯವಾಗದಿದ್ದರೆ, ಕೊಲ್ಲುವುದೇ? ಅಪರಾಧಿ ತಪ್ಪಿಸಿಕೊಳ್ಳಲು ಕಾನೂನು ವ್ಯವಸ್ಥೆಯಲ್ಲಿ ಹಲವು ಲೋಪದೋಷಗಳಿರುವ ದೇಶ ನಮ್ಮದು.  ಅವನು ಕೆಲವು ದಿನಗಳಲ್ಲಿ  ಜೈಲಿನಿಂದ ಹೊರಬರುತ್ತಾನೆ.  ಹೆಣ್ಣುಮಕ್ಕಳ ಹತ್ಯೆಯು ಇನ್ನೂ ನಡೆಯುತ್ತಾ ಇರುತ್ತದೆ ಆದರೆ, ನಷ್ಟ ನಮ್ಮಂತಹ ಹೆತ್ತವರಿಗೆ ಮಾತ್ರ ಎಂದು ತಂದೆಯೊಬ್ಬರು ಕಣ್ಣೀರು ಹಾಕಿದ್ದಾರೆ.

ಈಜಿಪ್ಟ್‌ ನಲ್ಲಿ ಹಾಡಹಗಲೇ  ಪಾಗಲ್ ಪ್ರೇಮಿಯೊಬ್ಬ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ನೈರಾ ಎಂಬಾಕೆಯ  ಶಿರಚ್ಛೇದನ ಮಾಡಿದ್ದು, ಈ ಘಟನೆಯ ನಂತರ ಯುವತಿಯ ತಂದೆ  ಈ ಹತ್ಯೆಯ ಬಗ್ಗೆ ತೀವ್ರವಾಗಿ ನೊಂದು ಕಣ್ಣೀರು ಹಾಕಿದ್ದಾರೆ.

ನನ್ನ ಮಗಳನ್ನು ದುಷ್ಕರ್ಮಿಗಳು ಶಿರಚ್ಛೇದ ಮಾಡಿದ್ದಾರೆ ಎಂದು ನನಗೆ ಕೆಲವರು ಹೇಳಿದರು. ಆದರೆ ನಾನು ಅದನ್ನು ನಂಬಲಿಲ್ಲ. ಯಾಕೆಂದರೆ ಅವಳು ಜೀವನದ ಉನ್ನತ ಶಿಖರವನ್ನು ತಲುಪ ಬೇಕು ಎಂದು ನಾನು ಯಾವಾಗಲೂ ಕನಸು ಕಾಣುತ್ತಿದೆ. ನನ್ನ ಮಗಳು ಶವಗಾರದಲ್ಲಿ ನೆತ್ತರಲ್ಲಿ ಮುಳುಗಿ ಮಲಗಿರುವ ದೃಶ್ಯ ನನ್ನಿಂದ ನೋಡಲು ಆಗಲ್ಲ ಎಂದು ಅವರು ಕಣ್ಣೀರು ಹಾಕಿದರು.

ಪ್ರೀತಿಸಿದವರನ್ನು ಮದುವೆಯಾಗಲು ಸಾಧ್ಯವಾಗದಿದ್ದರೆ ಅವರನ್ನು ಕೊಲ್ಲವದೆ..?  ಅವನಿಗೆ   ಮರಣದಂಡನೆಯೇ ಆಗಬೇಕು ಎಂದು ಈಜಿಪ್ಟ್‌ ನ ಮನ್ಸೌರಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನೈರಾ ಅಶ್ರಫ್ ಳ ತಂದೆ ಅಶ್ರಫ್ ಅಬ್ದುಲ್ ಖಾದಿರ್ ಕಣ್ಣೀರು ಹಾಕುತ್ತಾ ಮಾತನಾಡಿದರು.

ನೈರಾ ಅಶ್ರಫ್  ಮನೆಗೆ ತೆರಳಲು ವಿಶ್ವವಿದ್ಯಾನಿಲಯದ ಮುಂಭಾಗದ ಬಸ್ ನಿಲ್ದಾಣದಲ್ಲಿ ಬಸ್‌ ಗಾಗಿ ಕಾಯುತ್ತಿದ್ದಳು. ಈ ವೇಳೆ, ನೈರಾಳನ್ನು ಸಹಪಾಠಿ ಮೊಹಮ್ಮದ್ ಅಡೆಲ್ ಎಂಬಾತ ರಸ್ತೆಯಲ್ಲೇ  ಥಳಿಸಿ ಎಳೆದುಕೊಂಡು ಹೋಗಿ ಜನರ ಮುಂದೆ ಕತ್ತು ಕೊಯ್ದು ಬರ್ಬರವಾಗಿ ಮಾಡಿದ್ದಾನೆ.  ಈ ಹತ್ಯೆ ಕಂಡು ಅರಬ್ ರಾಷ್ಟ್ರವೇ ಬೆಚ್ಚಿಬಿದ್ದಿದೆ.

ಮೃತ ನೈರಾ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೇಮಸ್ ಆಗಿದ್ದಳು.  ಸಾಮಾಜಿಕ ಜಾಲತಾಣದಲ್ಲಿ ನೈರಾನನ್ನು ಇಷ್ಟಪಟ್ಟಿದ್ದ ಮೊಹಮ್ಮದ್ ಅಡೆಲ್ ತನ್ನನ್ನು ಮದುವೆಯಾಗುವ ಪ್ರಸ್ತಾಪ ಇಟ್ಟಿದ್ದ. ಇದನ್ನು ನೈರಾ ತಿರಸ್ಕರಿಸಿದ್ದಾಳೆ. ಇದಲ್ಲದೇ ನೈರಾ ಆತನನ್ನು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಬ್ಲಾಕ್ ಮಾಡಿದ್ದಳು.

ಸಾಮಾಜಿಕ ಜಾಲತಾಣಗಳಲ್ಲಿ ಮೊಹಮ್ಮದ್ ಅಡೆಲ್ ಕಿರುಕುಳ ನೀಡುತ್ತಿರುವುದರ ಬಗ್ಗೆ ನೈರಾ ಕುಟುಂಬ  ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಕೆರಳಿದ ಮೊಹಮ್ಮದ್ ಅಡೆಲ್ ಈ ಕೃತ್ಯ ನಡೆಸಿದ್ದಾನೆ.

ನೈರಾ ಮದುವೆಗೆ ಒಪ್ಪದಿದ್ದುದರಿಂದ ಹತ್ಯೆ ಮಾಡಿರುವುದಾಗಿ ಮೊಹಮ್ಮದ್ ಅಡೆಲ್ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಸುಮಾರು 20 ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಡಿಕ್ಕಿ ಹೊಡೆದ ಹಕ್ಕಿ!

ನಾಲೆಗೆ ಉರುಳಿದ ಕ್ರೂಸರ್ ವಾಹನ: 8 ಮಂದಿ ಸ್ಥಳದಲ್ಲೇ ಸಾವು

ಪತ್ನಿಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಓಡಿ ಬಂದ ಪತಿ: ಬೆಚ್ಚಿಬಿದ್ದ ವೈದ್ಯರು!

ಮಗುಚಿ ಬಿದ್ದ ಬೈಕ್ ಗೆ ಹತ್ತಿಕೊಂಡ ಬೆಂಕಿ: ಇಬ್ಬರು ಸವಾರರಿಗೆ ತೀವ್ರ ಗಾಯ

ತರಕಾರಿ ಮಾರಾಟದ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕ ಅರೆಸ್ಟ್

ಇತ್ತೀಚಿನ ಸುದ್ದಿ