ವಿದ್ಯುತ್ ಚಾಲಿತ ವಾಹನ ಬಳಸಿದರೆ, ಪೆಟ್ರೋಲ್ ಬೆಲೆ ಇಳಿಯುತ್ತದೆ | ಸಚಿವ ನಾರಾಯಣ ಗೌಡ
ಬೆಂಗಳೂರು: ವಿದ್ಯುತ್ ಚಾಲಿತ ವಾಹನ ಬಳಕೆ ಮಾಡಿದರೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಅಭಿಪ್ರಾಯ ಪಟ್ಟಿದ್ದು, ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳು ಹೆಚ್ಚಾಗಿ ಬಳಕೆಯಾಗಲಿ ಎಂದು ಹಾರೈಸಿದ್ದಾರೆ.
ವಿಶ್ವ ವಿದ್ಯುತ್ ಚಾಲಿತ ವಾಹನ ದಿನಾಚರಣೆ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ವಿದ್ಯುತ್ ಚಾಲಿತ ವಾಹನಗಳ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಶರೀರವನ್ನು, ನಮ್ಮ ಪರಿಸರವನ್ನು ಕಾಪಾಡಿಕೊಳ್ಳಬೇಕು ಈ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ವಾಹನಗಳು ಹೆಚ್ಚಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿದ್ಯುತ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡುತ್ತಿದೆ ಎಂದು ಅವರು ತಿಳಿಸಿದರು.
ಇನ್ನೂ ಇಂಧನ ಸಚಿವ ಸುನೀಲ್ ಕುಮಾರ್ ಮಾತನಾಡಿ, ವಿದ್ಯುತ್ ಚಾಲಿತ ವಾಹನಗಳು ಭವಿಷ್ಯಕ್ಕೆ ಅನಿವಾರ್ಯವಾಗಬೇಕು. ಕೇಂದ್ರ ಹಾಗೂ ರಾಜ್ಯ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಸದ್ಯ 136 ಕಡೆಗಳಲ್ಲಿ ವಿದ್ಯುತ್ ರೀಚಾರ್ಜಿಂಗ್ ಸೆಂಟರ್ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ 500ಕ್ಕೂ ಹೆಚ್ಚು ಚಾರ್ಜಿಂಗ್ ಸೆಂಟರ್ ಮಾಡುವ ಯೋಜನೆ ಇದೆ ಎಂದು ಅವರು ತಿಳಿಸಿದರು.
ಸಚಿವ ಮುನಿರತ್ನ ಮಾತನಾಡಿ, ಹೊಸದಾಗಿ ರೀಚಾರ್ಜ್ ಪಾಯಿಂಟ್ ಗಳನ್ನು ಪೆಟ್ರೋಲ್ ಬಂಕ್ ಗಳ ಬಳಿಯೇ ಮಾಡಬೇಕು ಎಂದು ಇಂಧನ ಸಚಿವರಿಗೆ ಮನವಿ ಮಾಡಿದರು. ಈ ಮೂಲಕ ಶೇ.40ರಷ್ಟು ಪೆಟ್ರೋಲ್ ಚಾಲಿತ ವಾಹನಗಳ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಅವರು ಹೇಳಿದರು.
ಇನ್ನಷ್ಟು ಸುದ್ದಿಗಳು…
“ಕಾರ್ ನನ್ನದು, ಯಾಕ್ರಿ ಟೋಯಿಂಗ್ ಮಾಡ್ತಿದ್ದೀರಿ” | ಟ್ರಾಫಿಕ್ ಪೊಲೀಸರನ್ನು ಗದರಿದ ಮಹಿಳೆ
ವಾನರ ಸೇನೆಯ ದಾಳಿ: ಎರಡನೇ ಮಹಡಿಯಿಂದ ಬಿದ್ದು ಬಿಜೆಪಿ ನಾಯಕನ ಪತ್ನಿ ಸಾವು
2 ವರ್ಷದ ಮಗು ಕೊವಿಡ್ ಗೆ ಬಲಿ: 3ನೇ ಅಲೆಯ ಮುನ್ಸೂಚನೆಯೇ?
ಹೊಟೇಲ್ ನಲ್ಲಿ 16 ವರ್ಷ ವಯಸ್ಸಿನ ಬಾಲಕಿಯ ಅತ್ಯಾಚಾರ | ಬಿಜೆಪಿ, ಜೆಡಿಯು ಮುಖಂಡರ ಸಹಿತ ಮೂವರ ಬಂಧನ
ಪಕ್ಷ ಯಾವುದೇ ಇರಲಿ, ಮುಂದಿನ ಬಾರಿ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು | ಜೆಡಿಎಸ್ ಶಾಸಕ ಗೌರಿಶಂಕರ್ ಕರೆ
ಜೆಸಿಬಿ ಅಡಿಗೆ ಸಿಲುಕಿ ಪೌರ ಕಾರ್ಮಿಕ ಸಹಿತ ಇಬ್ಬರು ಸಾವು!
ಲೈಂಗಿಕ ಆಯಾಸ ಪರಿಹಾರ ಸೇರಿದಂತೆ ಹಲವು ಸಮಸ್ಯೆಗಳಿಗೆ ಖರ್ಜೂರದಲ್ಲಿದೆ ಪರಿಹಾರ
ಅನುಶ್ರೀ ವಿರುದ್ಧ ಮತ್ತೆ ವಿಚಾರಣೆ ನಡೆಯುವ ಸಾಧ್ಯತೆ ಕಡಿಮೆ | ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್