11:30 AM Wednesday 12 - March 2025

ಪಂಪ್ ಸ್ವಿಚ್ ಆನ್ ಮಾಡಲು ಹೋದ ವೇಳೆ ದುರ್ಘಟನೆ; ತಾಯಿ-ಮಗ ಸ್ಥಳದಲ್ಲಿಯೇ ಸಾವು

belthangady
30/05/2021

ಬೆಳ್ತಂಗಡಿ:  ಪಂಪ್ ಸ್ವಿಚ್ ಆನ್ ಮಾಡಲು ಹೋಗಿದ್ದ ತಾಯಿ ಹಾಗೂ ಮಗು ಇಬ್ಬರೂ ಆಕಸ್ಮಿವಾಗಿ ವಿದ್ಯುತ್ ತಗುಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ  ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಬೋಳೋಡಿ ಕಜೆ ಎಂಬಲ್ಲಿ ನಡೆದಿದೆ.

ಪಟ್ರಮೆ ಗ್ರಾಮದ ಕೋಡಂದೂರು ಮನೆಯ ಹರೀಶ್ ಗೌಡ ಎಂಬವರ ಪತ್ನಿ 30 ವರ್ಷ ವಯಸ್ಸಿನ ಗೀತಾ ಹಾಗೂ ಅವರ ಪುತ್ರ 4 ವರ್ಷ ವಯಸ್ಸಿನ ಭವಿಷ್ ಮೃತಪಟ್ಟವರಾಗಿದ್ದಾರೆ. ಗೀತಾ ಅವರು ತಮ್ಮ ಮಗನನ್ನು ಎತ್ತಿಕೊಂಡು ಪಂಪ್ ಸ್ವಿಚ್ ಹಾಕಲು ಮುಂದಾದ ವೇಳೆ ವಿದ್ಯುತ್ ಆಘಾತವಾಗಿದೆ ಎಂದು ತಿಳಿದು ಬಂದಿದೆ.

ಹರೀಶ್ ಗೌಡ ಅವರು ಹೊಸದಾಗಿ ಈ ಸ್ಥಳವನ್ನು ಇತ್ತೀಚೆಗಷ್ಟೇ ಕೊಂಡುಕೊಂಡಿದ್ದರು.  ಇಂದು ಬೆಳಗ್ಗೆ ಹರೀಶ್ ಅವರ ತಾಯಿ, ಗೀತಾ ಜೊತೆಗೆ ಈ ಜಮೀನಿಗೆ ಬಂದಿದ್ದರು. ಆದರೆ, ಇದೇ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.  ಘಟನೆಯ ವೇಳೆ ಹರೀಶ್ ಅವರು ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು. ವಿದ್ಯುತ್ ಆಘಾತ ಪರಿಣಾಮ ತಾಯಿ ಹಾಗೂ ಮಗ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇತ್ತೀಚಿನ ಸುದ್ದಿ

Exit mobile version