ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿದ ರೈತನ ದಾರುಣ ಸಾವು! - Mahanayaka
3:12 PM Wednesday 5 - February 2025

ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿದ ರೈತನ ದಾರುಣ ಸಾವು!

formar
19/04/2021

ಚಾಮರಾಜನಗರ: ಜಮೀನಿನಲ್ಲಿ ಹಾದುಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಧಿಸಿದ ರೈತರೋರ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಾಳನಹುಂಡಿ ರಸ್ತೆಯ ಕಟ್ಟೇಪುರ ಬಳಿಯ ಜಮೀನೊಂದರಲ್ಲಿ ನಡೆದಿದೆ.

55 ವರ್ಷ ವಯಸ್ಸಿನ ವೇಲುಸ್ವಾಮಿ ಅವರು ಮೃತಪಟ್ಟ ರೈತರಾಗಿದ್ದು, ಭಾನುವಾರ ರಾತ್ರಿ 9:30ರ ವೇಳೆಗೆ ಇವರು ಜಮೀನಿನಲ್ಲಿ ನೀರು ಎತ್ತುವ ಮೋಟರ್ ಸ್ವಿಚ್ ಆನ್ ಮಾಡಲು ಹೋಗಿದ್ದರು. ಈ ಸಂದರ್ಭದಲ್ಲಿ ಪಕ್ಕದಲ್ಲಿಯೇ 11 ಕೆವಿ ವಿದ್ಯುತ್ ತಂತಿ ತುಂಡಾಗಿ ನೇತಾಡುತ್ತಿತ್ತು. ಇದನ್ನು ಗಮನಿಸದೇ ಮುಂದೆ ಹೋದ ವೇಳೆ ಅವರ ತಲೆಗೆ ತಂತಿ ತಗಲಿದೆ.

ತಲೆಗೆ ವಿದ್ಯುತ್ ಸ್ಪರ್ಶಿಸಿದ್ದರಿಂದಾಗಿ ರುಂಡ, ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ರುಂಡ ತಂತಿಯಲ್ಲಿಯೇ ಅಂಟಿಕೊಂಡ ಸ್ಥಿತಿಯಲ್ಲಿದ್ದರೆ, ದೇಹ ನೆಲಕ್ಕೆ ಬಿದ್ದಿರುವ ಸ್ಥಿತಿ ಪತ್ತೆಯಾಗಿದೆ.

ಇತ್ತೀಚಿನ ಸುದ್ದಿ