ಮಂಜುಗಡ್ಡೆ ಸ್ಥಾವರದ ಮಿಶನರಿ ರಿಪೇರಿ ಮಾಡುತ್ತಿದ್ದ ವೇಳೆ ಶಾಕ್ ತಗುಲಿ ವ್ಯಕ್ತಿ ಸಾವು
ಮಲ್ಪೆ: ಬಂದರಿನ ಆಳ ಸಮುದ್ರ ಸಹಕಾರಿ ಸಂಘದ ಮಂಜುಗಡ್ಡೆ ಸ್ಥಾವರದ ಮಿಶನರಿಗಳನ್ನು ರಿಪೇರಿ ಮಾಡುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಆ.25ರಂದು ಮೃತಪಟ್ಟಿದ್ದಾರೆ.
ಮಲ್ಪೆ ಪಂಚಾಯತ್ ಆಫೀಸ್ ಬಳಿಯ ನಿವಾಸಿ 51 ವರ್ಷದ ಸುದೇಶ್ ಎನ್. ಕರ್ಕೇರಾ ಮೃತದುರ್ದೈವಿ. ಇವರು ಜುಲೈ 9ರಂದು ಮಂಜುಗಡ್ಡೆ ಸ್ಥಾವರದ ಮಿಶನರಿಗಳನ್ನು ರಿಪೇರಿ ಮಾಡುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿದ ಪರಿಣಾಮ ಸುದೇಶ್ ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಜೀವನ್ಮಾರಣ ಹೋರಾಟದಲ್ಲಿದ್ದ ಸುದೇಶ್ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka