ನವೆಂಬರ್ 20: ವಿಜಯ ಮಹೇಶ್ ಜನ್ಮ ದಿನದ ಅಂಗವಾಗಿ ರಾಜ್ಯಮಟ್ಟದ ವಿಜಯ ಪ್ರಶಸ್ತಿ, ವಿಜಯ ಮಹೇಶ್ ಸಂಸ್ಮರಣೆ ಪುಸ್ತಕ ಲೋಕಾರ್ಪಣೆ
ಚಾಮರಾಜನಗರ: ಕನ್ನಡದ ಖ್ಯಾತ ಚಿಂತಕರು, ಇತಿಹಾಸ ಸಂಶೋಧಕರಾ ವಿಜಯ ಮಹೇಶ್ ಅವರ ಜನ್ಮ ದಿನದ ಪ್ರಯುಕ್ತ ರಾಜ್ಯಮಟ್ಟದ ವಿಜಯ ಪ್ರಶಸ್ತಿ ಪ್ರದಾನ ಹಾಗೂ ವಿಜಯ ಮಹೇಶ್ ಅವರ ಸಂಸ್ಮರಣೆ ಪುಸ್ತಕ ಲೋಕಾರ್ಪಣೆ ಸಮಾರಂಭವು ನವೆಂಬರ್ 20ರಂದು ಚಾಮರಾಜನಗರದ ಡಾ.ರಾಜ್ ಕುಮಾರ್ ರಂಗಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದರಾದ ವಿ.ಶ್ರೀನಿವಾಸ್ ಪ್ರಸಾದ್ ಅವರು ನೆರವೇರಿಸಲಿದ್ದಾರೆ. ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣನವರು ವಿಜಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಸಚಿವರು, ಕೊಳ್ಳೇಗಾಲದ ಶಾಸಕರಾದ ಎನ್.ಮಹೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಯ ಮಹೇಶ್ ರವರ ಸಂಸ್ಮರಣೆ ಪುಸ್ತಕವನ್ನು ಚಾಮರಾಜನಗರ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಬಿಡುಗಡೆ ಮಾಡಲಿದ್ದಾರೆ.
ಸಮಾರಂಭದಲ್ಲಿ ಶ್ರೀಮದ್ ವಾಟಾಳು ಸೂರ್ಯಸಿಂಹಾಸನ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿ, ನಳಂದ ಬುದ್ಧ ವಿಹಾರದ ಬೋಧಿರತ್ನ ಭಂತೇಜಿ, ಚಾಮರಾಜನಗರದ ಮಕ್ಕಾ ಮಸೀದಿಯ ಧರ್ಮಗುರು ಮೌಲಾನ ಮಹಮ್ಮದ್ ಇಸ್ಮಾಯಿಲ್, ಚಾಮರಾಜನಗರದ ಸಂತ ಪೌಲ್ ಚರ್ಚ್ ನ ರೆವರೆಂಡ್ ಫಾದರ್ ಆಂತೋಣಪ್ಪ ಸಿ. ಅವರು ದಿವ್ಯ ಸಾನಿಧ್ಯವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಶೈಲಕುಮಾರ್ ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್ ಚಲವಾದಿ, ಬಹುಭಾಷಾ ನಟಿ ಮಾಳವಿಕಾ ಅವಿನಾಶ್ ಭಾಗವಹಿಸಲಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಕೊಳ್ಳೇಗಾಲದ ಮಹದೇವ ಶಂಕನಪುರ, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಹೋರಾಟಗಾರ್ತಿ, ವಿಚಾರವಾದಿ ಆತ್ರಾಡಿ ಅಮೃತ ಶೆಟ್ಟಿ ಮುಖ್ಯ ಭಾಷಣ ಮಾಡಲಿದ್ದಾರೆ. ಕಾನ್ಷಿ ಫೌಂಡೇಷನ್ ನ ಅಧ್ಯಕ್ಷರಾದ ಜಯಮ್ಮ ಅವರು ಉಪಸ್ಥಿತರಿರಲಿದ್ದಾರೆ.
ಬಹುಭಾಷಾ ಚಿತ್ರ ನಟರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ನಟರಾದ ಅವಿನಾಶ್, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಸದಸ್ಯರಾದ ಡಾ.ಕೆ.ಪಿ.ಅಶ್ವಿನಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೋಲಿಗರ ಮಾದಮ್ಮ. ಖ್ಯಾತ ಚಿತ್ರ ಕಲಾವಿದರಾದ ಜೆ.ಮೂರ್ತಿ ಮುಡಿಗುಂಡ, ಖ್ಯಾತ ಚಲನ ಚಿತ್ರನಟರಾದ ಹರೀಶ್ ಕುಮಾರ್ ಅವರಿಗೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.
ವಿಜಯ ಪ್ರಶಸ್ತಿ ಪುರಸ್ಕೃತರು:
ಸಾಹಿತ್ಯ ವಿಜಯ: ಮೈಸೂರಿನ ಸಾಹಿತಿಗಳು ಕನ್ನಡ ಸಹ ಪ್ರಾಧ್ಯಾಪಕರಾದ ಡಾ.ಎಂ.ಎಸ್ ವೇದಾ
ಸಾಂಸ್ಕೃತಿಕ ವಿಜಯ: ಯಳಂದೂರು ತಾಲೂಕಿನ ಕೊಮಾರನಪುರದ ಖ್ಯಾತ ಗಾಯಕರಾದ ಮಹೇಂದ್ರ ಆರ್.,
ಸಾವಯವ ಕೃಷಿ ವಿಜಯ: ಮೈಸೂರಿನ ಸಹಜ ಕೃಷಿ ಬಳಗದ ಅಧ್ಯಕ್ಷರಾದ ಕಾಳಪ್ಪನವರು
ಪರಿಸರ ವಿಜಯ: ಶ್ರೀರಂಗಪಟ್ಟಣದ ಚಂದಗಾಲು ಪರಿಸರ ಪ್ರೇಮಿ, ಪರಿಸರ ರಮೇಶ್ ಅವರು.
ಮಾಧ್ಯಮ ವಿಜಯ: ವಿಶ್ವವಾಣಿ ಪತ್ರಿಕೆಯ ಸುದ್ದಿ ಸಂಪಾದಕರಾದ ಶಿವಕುಮಾರ್ ಬೆಳ್ಳಿತಟ್ಟೆ, ಸಂತೆಮರಹಳ್ಳಿ.
ಕಾನ್ಷೀ ಫೌಂಡೇಷನ್ ನ ಟ್ರಸ್ಟಿಗಳಾದ ರಚನಾ ಅರ್ಜುನ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಹೆಚ್.ಕೆ.ದೇವಪ್ರಸಾದ್ ಹಾಗೂ ಅರ್ಜುನ್ ಮಹೇಶ್ ಅವರು ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಪದ್ಮಪಾಣಿ ಲಲಿತಾ ಕಲಾ ಅಕಾಡೆಮಿಯಿಂದ ವಿಶೇಷ ಗೀತಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka