ಕೊರೊನಾದಿಂದಾಗಿ ನಷ್ಟ | ವಿಜಯಪುರದಲ್ಲಿ ನೇಣಿಗೆ ಶರಣಾದ ಮಂಗಳೂರು ಉದ್ಯಮಿ - Mahanayaka
7:08 AM Wednesday 5 - February 2025

ಕೊರೊನಾದಿಂದಾಗಿ ನಷ್ಟ | ವಿಜಯಪುರದಲ್ಲಿ ನೇಣಿಗೆ ಶರಣಾದ ಮಂಗಳೂರು ಉದ್ಯಮಿ

ganesh
01/04/2021

ವಿಜಯಪುರ: ಕೊರೊನಾದ ಹೊಡೆತಕ್ಕೆ ಸಿಲುಕಿ ಹೊಟೇಲ್ ಉದ್ಯಮದಲ್ಲಿ ತೀವ್ರವಾಗಿ ನಷ್ಟ ಅನುಭವಿಸಿದ ಮಂಗಳೂರು ಮೂಲದ ಉದ್ಯಮಿಯೋರ್ವರು ವಿಜಯಪುರದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ವಿಜಯಪುರದ ಇಂಡಿಯಲ್ಲಿ “ಅಮರ್” ಎಂಬ ಹೊಟೇಲ್ ನಡೆಸುತ್ತಿದ್ದ ಮಂಗಳೂರು ಮೂಲದ ಉದ್ಯಮಿ ಗಣೇಶ್ ಆತ್ಮಹತ್ಯೆಗೆ ಶರಣಾಗಿರುವವರಾಗಿದ್ದಾರೆ.  ಕೋಟಿ ರೂಪಾಯಿಗಳನ್ನು ಸುರಿದು ಉದ್ಯಮ ಆರಂಭಿಸಿದ್ದು, ಈ ನಡುವೆ ಕೊರೊನಾದಿಂದಾಗಿ ಹೊಟೇಲ್ ಉದ್ಯಮ ಸಂಪೂರ್ಣವಾಗಿ ನಷ್ಟಕ್ಕೆ ಸಿಲುಕಿತ್ತು ಎಂದು ಹೇಳಲಾಗಿದೆ.

ಹೊಟೇಲ್ ನಡೆಸಲು 30 ಲಕ್ಷ ರೂಪಾಯಿ ಸಾಲ ಕೂಡ ಮಾಡಿದ್ದ ಗಣೇಶ್ ಈ ಬಡ್ಡಿಯನ್ನು ಕಟ್ಟಲು ಕೂಡ ಪರದಾಡುವ ಸ್ಥಿತಿಗೆ ಬಂದು ತಲುಪಿದ್ದರು ಎಂದು ಹೇಳಲಾಗಿದೆ. ಇದೇ ಚಿಂತೆಯಿಂದಾಗಿ ಗಣೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇನ್ನೂ ಇಂಡಿ ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ