ಮುರುಘಾ ಮಠದಲ್ಲಿ ಬಿ.ವೈ.ವಿಜಯೇಂದ್ರ ಏನಿಟ್ಟಿದ್ದಾರೆ ಅದನ್ನು ವಾಪಸ್ ಕೊಡಲಿ: ಯತ್ನಾಳ್ ಬಾಂಬ್
ವಿಜಯಪುರ: ಪೋಕ್ಸೋ ಕೇಸ್ ನಲ್ಲಿ ಪೊಲೀಸರ ವಶದಲ್ಲಿದ್ದಾರೆ. ಈ ನಡುವೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಗತಿ ಪರರು ಹಾಗೂ ಬಿ.ವೈ.ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ.
ಮಠದಲ್ಲಿ ಬಿ.ವೈ.ವಿಜಯೇಂದ್ರ ಏನು ಇಟ್ಟಿದ್ದಾರೋ ಅದನ್ನು ವಾಪಸ್ ಕೊಡಲಿ ಎಂದು ಯತ್ನಾಳ್ ಹೇಳಿಕೆ ನೀಡಿದ್ದು, ಮಠದಲ್ಲಿ ಬಿ.ವೈ.ವಿಜಯೇಂದ್ರ ಅವರು ಏನೋ ಇಟ್ಟಿದ್ದಾರೆ ಎಂಬ ಒಗಟಿನ ಮಾತುಗಳನ್ನಾಡಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದಿಂದ ದೊರಕಿದ ಪ್ರಶಸ್ತಿಯನ್ನು ವಾಪಸ್ ನೀಡುತ್ತಿರುವ ವಿದ್ಯಮಾನಗಳ ವಿಚಾರವಾಗಿ ಮಾತನಾಡಿದ ಯತ್ನಾಳ್, ಮಠದಲ್ಲಿ ಬಿ.ವೈ.ವಿಜಯೇಂದ್ರ ಏನಿಟ್ಟಿದ್ದಾರೆ ಅದನ್ನ ವಾಪಸ್ ಕೊಡಲಿ ಎಂದಿದ್ದಾರೆ.
ಚಿತ್ರದುರ್ಗದ ಮುರುಘಾ ಶರಣರನ್ನು ಹಾಳುಮಾಡಿದ್ದೇ ಪ್ರಗತಿಪರರು. ಬುದ್ಧಿಜೀವಿಗಳೆಂದು ಹೇಳಿಕೊಂಡವರೇ ದೇಶ ಹಾಳು ಮಾಡಿದರು. ಇದೀಗ ಪ್ರಗತಿಪರರು,
ಸ್ವಾಮೀಜಿ ನಡುವೆ ಜಗಳ ಶುರುವಾಗಿದೆ ಎಂದರು.
ಯಾರೂ ಮುರುಘಾ ಶರಣರ ಪರ ನಿಲ್ಲಲ್ಲ. ಸಿದ್ದರಾಮಯ್ಯನವರೇ ಕಠಿಣ ಕ್ರಮಕೈಗೊಳ್ಳಬೇಕೆಂದು ಹೇಳಿದ್ದಾರೆ. ಶ್ರೀಗಳು ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರು. ಮುರುಘಾ ಮಠದಲ್ಲಿ ಟಿಪ್ಪು ಸುಲ್ತಾನ್ ನ ಮೂರ್ತಿ ಇಟ್ಟಿದ್ದರು. ಗೋಮಾತೆ ಬಗ್ಗೆಯೂ ಅವಹೇಳನಾಕಾರಿಯಾಗಿ ಮಾತನಾಡಿದ್ದರು ಎಂದು ಆರೋಪಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka