11:52 AM Wednesday 12 - March 2025

ಕುವೈತ್ ನಲ್ಲಿ ವಿಜಯ್ ನಟನೆಯ ಬೀಸ್ಟ್ ಚಿತ್ರಕ್ಕೆ ನಿಷೇಧ: ಕಾರಣ ಏನು ಗೊತ್ತಾ?

beast official trailer
07/04/2022

ಚೆನ್ನೈ: ದಳಪತಿ ವಿಜಯ್ ನಟನೆಯ ಬಹು ನಿರೀಕ್ಷಿತ ಚಿತ್ರ ಬೀಸ್ಟ್ ಚಿತ್ರ ಏಪ್ರಿಲ್ 13ರಂದು ಬಿಡುಗಡೆಯಾಗಲಿದೆ. ಬಿಡುಗಡೆಗೂ ಮೊದಲೇ ಬೀಸ್ಟ್ ಚಿತ್ರ ಸಾಕಷ್ಟು ಕುತೂಹಲಗಳನ್ನು ಸೃಷ್ಟಿಸಿದೆ. ಅರೆಬಿಕ್ ಶೈಲಿಯ ಚಿತ್ರದ ಹಾಡಂತೂ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಿನಿಮಾ ಪ್ರಿಯರನ್ನು, ಸಂಗೀತ ಪ್ರಿಯರನ್ನು, ನೃತ್ಯ ಪ್ರಿಯರನ್ನು ಹುಚ್ಚೆಬ್ಬಿಸಿದೆ.

ಸಾಕಷ್ಟು ನಿರೀಕ್ಷೆ ಹೊತ್ತಿರುವ ಬೀಸ್ಟ್ ಚಿತ್ರಕ್ಕೆ ಕುವೈತ್ ರಾಷ್ಟ್ರ ನಿಷೇಧ ಹೇರಿದ್ದು, ಚಿತ್ರವನ್ನು ಕುವೈಟ್ ನಲ್ಲಿ ಬಿಡುಗಡೆ ಮಾಡಲು ಅವಕಾಶ ನಿರಾಕರಿಸಲಾಗಿದೆ.  ಈ ಮಾಹಿತಿಯನ್ನು ಸಿನಿಮಾ ವಿಶ್ಲೇಷಕ ರಮೇಶ್ ಬಾಲಾ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಚಿತ್ರದಲ್ಲಿರುವ ಹಿಂಸೆಯ ದೃಶ್ಯಗಳ ಹಿನ್ನೆಲೆಯಲ್ಲಿ ಚಿತ್ರವನ್ನು ನಿಷೇಧ ಮಾಡಿರಬಹುದು ಎಂದು ರಮೇಶ್ ಬಾಲಾ ಅನುಮಾನ ವ್ಯಕ್ತಪಡಿಸಿದ್ದಾರೆ. ಕುವೈಟ್ ನ ಸೆನ್ಸಾರ್ ಮಂಡಳಿ ಸಿನಿಮಾ ಪ್ರದರ್ಶನದ ವಿಚಾರದಲ್ಲಿ ಇತ್ತೀಚೆಗೆ ಕಠಿಣ ನಿಲುವು ತಾಳುತ್ತಿದೆ ಎಂದು ರಮೇಶ್ ಹೇಳಿದ್ದಾರೆ.

ಭಯೋತ್ಪಾದಕ ದಾಳಿಯ ಕಥೆಯನ್ನೊಳಗೊಂಡ ಸಿನಿಮಾ ಬೀಸ್ಟ್ ಆಗಿದ್ದು, ಚಿತ್ರದಲ್ಲಿ ಭಯಾನಕ ಸನ್ನಿವೇಶಗಳಿವೆ ಎನ್ನಲಾಗಿದೆ. ಚೆನ್ನೈನ ಶಾಪಿಂಗ್ ಮಾಲ್ ವೊಂದಕ್ಕೆ ಭಯೋತ್ಪಾದಕ ದಾಳಿ ನಡೆದು, ಜನರನ್ನು ಒತ್ತೆಯಾಳುಗಳನ್ನಾಗಿರಿಸಲಾಗುತ್ತದೆ. ಕಥೆಯ ನಾಯಕ ಹೇಗೆ ಜನರನ್ನು ರಕ್ಷಿಸುತ್ತಾನೆ ಎನ್ನುವುದು ಚಿತ್ರದ ಕಥೆಯಾಗಿದೆ ಎಂದು ಹೇಳಲಾಗುತ್ತಿದೆ.

ಬೀಸ್ಟ್ ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗುತ್ತಿದೆ. ಏಪ್ರಿಲ್ 13ರಂದು ಬೀಸ್ಟ್ ತೆರೆ ಕಾಣುತ್ತಿದೆ. ಕನ್ನಡದ ಕೆಜಿಎಫ್ ಚಾಪ್ಟರ್ 2ಗೆ ಎದುರು ನಿಂತು ಬೀಸ್ಟ್ ತೊಡೆತಟ್ಟಿದೆ. ಹೀಗಾಗಿ ಬಾಕ್ಸ್ ಆಫೀಸ್ ನಲ್ಲಿಯೂ ಬಿಗ್ ಫೈಟ್ ನಡೆಯಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

‘ನಮ್ಮ ಭೂಮಿ ನಮ್ಮ ಆರೋಗ್ಯ’; ಇಂದು ವಿಶ್ವ ಆರೋಗ್ಯ ದಿನ

ದ್ವಿತೀಯ ಪಿಯು ಪರೀಕ್ಷೆಯಲ್ಲೂ ಹಿಜಾಬ್ ಗೆ ಅವಕಾಶವಿಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ರಹೀಂ ಉಚ್ಚಿಲ್ ಗೆ ಸದ್ದಿಲ್ಲದೇ ಶಾಕ್ ನೀಡಿದ ರಾಜ್ಯ ಸರ್ಕಾರ

ಉತ್ತರ ಪತ್ರಿಕೆಯಲ್ಲಿ “ಪುಷ್ಪಾ… ಪುಸ್ಪರಾಜ್” ಎಂದು ಬರೆದಿಟ್ಟ ವಿದ್ಯಾರ್ಥಿನಿ: ಶಿಕ್ಷಕರು ಕಂಗಾಲು

ಮೀನು ಹಿಡಿಯಲು ತೆರಳಿದ್ದ ಯುವಕ ಬಲೆಯಲ್ಲಿ ಸಿಲುಕಿ ಸಾವು

 

ಇತ್ತೀಚಿನ ಸುದ್ದಿ

Exit mobile version