“ಬೀಸ್ಟ್” ಇಳೆಯದಳಪತಿ ವಿಜಯ್ ಅವರ 65ನೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ - Mahanayaka

“ಬೀಸ್ಟ್” ಇಳೆಯದಳಪತಿ ವಿಜಯ್ ಅವರ 65ನೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ

beast vijay
22/06/2021

ಸಿನಿಡೆಸ್ಕ್:  ಇಳೆಯದಳಪತಿ ವಿಜಯ್ ಅವರ 65ನೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಫಸ್ಟ್ ಲುಕ್ ನೋಡಿದ ಬಳಿಕ ವಿಜಯ್ ಅವರ ಹೊಸ ಚಿತ್ರದ ಬಗ್ಗೆ ಜನರಲ್ಲಿ ಇನ್ನಷ್ಟು ಕುತೂಹಲ ಮೂಡಿದೆ.

ವಿಜಯ್ ಅವರ 65ನೇ ಚಿತ್ರ ಬೀಸ್ಟ್ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಕೈಯಲ್ಲಿ ಗನ್ ಹಿಡಿದುಕೊಂಡು ನಿಂತಿರುವ ವಿಜಯ್ ಚಿತ್ರಕ್ಕೆ ಅಭಿಮಾನಿಗಳು ಮರುಳಾಗಿದ್ದಾರೆ. ನಟ ವಿಜಯ್ ಅವರ ಚಿತ್ರಗಳೆಂದರೆ ಹೀಗೆ ಇರುತ್ತದೆ. ಅದು ಭಾಷೆ, ಪ್ರದೇಶಗಳನ್ನೂ ಮೀರಿ ಜನರಿಗೆ ಇಷ್ಟವಾಗಿಬಿಡುತ್ತದೆ. ನೆಲ ಜನರ ಸಮಸ್ಯೆಗಳನ್ನು ಹೊತ್ತ ಕಥೆಗಳ ಸಿನಿಮಾವನ್ನು ವಿಜಯ್ ಮಾಡುತ್ತಿರುವುದರಿಂದಾಗಿ ನಿರಂತರವಾಗಿ ಅವರು ಯಶಸ್ವಿಯಾಗುತ್ತಿದ್ದಾರೆ.

ಜೂನ್ 22 ಅಂದರೆ, ನಾಳೆ ವಿಜಯ್ ಅವರ ಜನ್ಮದಿನಾಚರಣೆ. ಹೀಗಾಗಿ ಅವರ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.  ವಿಜಯ್ ಅವರ ಚಿತ್ರ ಎಂದರೆ ಅಭಿಮಾನಿಗಳ ನಿರೀಕ್ಷೆ ಕೂಡ ಹಾಗೆಯೇ ಇರುತ್ತದೆ. ಫಸ್ಟ್ ಲುಕ್ ಜನರಿಗೆ ಇಷ್ಟವಾಗಿದೆ. ಹೀಗಾಗಿಯೇ ಸಿನಿಮಾ ಬಿಡುಗಡೆ ದಿನಕ್ಕಾಗಿ ಜನರು ಕಾಯುತ್ತಿದ್ದಾರೆ.

ಇತ್ತೀಚಿನ ಸುದ್ದಿ