‘ವಿಕ್ರಾಂತ್ ರೋಣ’: ಡೆಡ್ ಮ್ಯಾನ್ ಆಂಥಮ್ ಸೃಷ್ಟಿಸಿತು ಹೊಸ ಕುತೂಹಲ! - Mahanayaka
3:13 PM Wednesday 5 - February 2025

‘ವಿಕ್ರಾಂತ್ ರೋಣ’: ಡೆಡ್ ಮ್ಯಾನ್ ಆಂಥಮ್ ಸೃಷ್ಟಿಸಿತು ಹೊಸ ಕುತೂಹಲ!

vikrant rona deadman anthem
02/09/2021

ಸಿನಿಡೆಸ್ಕ್:  ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬ ದಿನದಂದು ‘ವಿಕ್ರಾಂತ್ ರೋಣ’ ಸಿನಿಮಾದ ಗ್ಲಿಮ್ಸ್ ವಿಡಿಯೋ ಚಿತ್ರವನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಈ ವಿಡಿಯೋಗೆ ಭಾರೀ ಮೆಚ್ಚುಗೆ ಹಾಗೂ  ವೀವ್ಟ್ ಕೂಡ ಬಂದಿದೆ.

ಚಿತ್ರತಂಡ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಡೆಡ್ ಮ್ಯಾನ್ ಆಂಥಮ್ ಬಳಸಲಾಗಿದ್ದು, ಇದು ಈ ಚಿತ್ರದ ಬಗ್ಗೆ ಸಿನಿಮಾ ಪ್ರಿಯರಿಗೆ ಇದ್ದ ಕುತೂಹಲವನ್ನು ಇನ್ನಷ್ಟು ಕೆರಳಿಸಿದೆ. 50ರ ವಯಸ್ಸಿನಲ್ಲಿಯೂ ಕಿಚ್ಚ ಸುದೀಪ್ ಅವರು, ಯುವಕರ ಟ್ರೆಂಡ್ ಗೆ ತಕ್ಕಂತೆ ಬದಲಾಗುತ್ತಲೇ ಬಂದಿದ್ದಾರೆ. ಹಾಗಾಗಿ ಬರೇ ಪ್ರೇಮ ಕಥೆ, ಹೊಡೆದಾಟ ಬಡಿದಾಟಗಳ ಚಿತ್ರದಿಂದ ಸಸ್ಪೆನ್ಸ್ ಥ್ರಿಲ್ಲರ್ ಕಥೆಗಳತ್ತ ಕಿಚ್ಚ ಹೊರಳಿದ್ದಾರೆಯೇ ಎನ್ನುವ ಅನುಮಾನ ಈ ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ಮೂಡಬಹುದು.

ಮಲಯಾಳಂ, ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಸಸ್ಪೆನ್ಸ್ ಚಿತ್ರಗಳು ಬರುತ್ತಿವೆ. ಸದ್ಯ ಪ್ರೇಮ ಕಥೆಗಳೆಲ್ಲವೂ ಬದಿಗೆ ಸರಿದು, ಸಸ್ಪೆನ್ಸ್ ಚಿತ್ರಗಳು ಮುನ್ನೆಲೆಗೆ ಬರುತ್ತಿವೆ. ಮಲಯಾಳಂನ ಹಿರಿಯ ನಟ ಮಮ್ಮುಟ್ಟಿ, ಮೋಹನ್ ಲಾಲ್ ಕೂಡ ಸಸ್ಪೆನ್ಸ್ ಚಿತ್ರಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಇದೀಗ ಈ ಸಾಲಿನಲ್ಲಿ ಕಿಚ್ಚ ಸುದೀಪ್ ಕೂಡ ಮುಂದುವರಿಯುತ್ತಾರೆಯೇ ಎನ್ನುವುದನ್ನು ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಾದು ನೋಡಬೇಕಿದೆ.

ಇನ್ನಷ್ಟು ಸುದ್ದಿಗಳು…

ಖಾಸಗಿ ವಾಹಿನಿ, ವೆಬ್ ಪೋರ್ಟಲ್, ಸಾಮಾಜಿಕ ಮಾಧ್ಯಮಗಳಲ್ಲಿ ಕೋಮುಸೌಹಾರ್ದಕ್ಕೆ ಧಕ್ಕೆ ತರುವಂತಹ ಸುದ್ದಿಗಳನ್ನು ಹರಡಲಾಗುತ್ತಿದೆ | ಸುಪ್ರೀಂ ಕೋರ್ಟ್ ಕಳವಳ

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ತಲೆಮರೆಸಿಕೊಂಡಿದ್ದ ಪಿಎಸ್ ಐ ಅರ್ಜುನ್ ನನ್ನು ಬಂಧಿಸಿದ ಸಿಐಡಿ ಪೊಲೀಸರು

ಆತ್ಮಹತ್ಯೆ ಮಾಡಲು ನೀರಿಗೆ ಹಾರಿದ ಕುಡುಕನ ರಕ್ಷಣೆಗೆ ಹೋದ ಇಬ್ಬರು ಸಾವು | ಕುಡುಕ ಸೇಫ್!

ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನ

ಮಹಿಳೆ ಜೊತೆಗೆ ಅಕ್ರಮ ಸಂಬಂಧ: ಕಾನ್‌ ಸ್ಟೇಬಲ್‌ ನ  ಕೈ ಕಾಲು ಕಟ್ಟಿ ಹಿಗ್ಗಾಮುಗ್ಗಾ ಥಳಿತ

 

ಇತ್ತೀಚಿನ ಸುದ್ದಿ