ವಿಕ್ರಾಂತ್ ರೋಣ ಟಿಕೆಟ್ ಬೇಕಾದವರು ಬೇಗನೇ ಖರೀದಿಸಿ!: ನಾಳೆ ಟಿಕೆಟ್ ಸಿಗೋದೇ ಡೌಟು!

vikranth rona
26/07/2022

ವಿಕ್ರಾಂತ್ ರೋಣ  ಬಿಡುಗಡೆಗೆ 2 ದಿನ ಬಾಕಿ ಇರುವಾಗಲೇ ಸಿನಿಮಾದ ಬಹುತೇಕ ಟಿಕೆಟ್ ಗಳು ಬುಕ್ಕಿಂಗ್ ಆಗಿದ್ದು,  ಮೊದಲ ಶೋ ನೋಡಲು ಕಾತರರಾಗಿರುವವರು ಬೇಗ ಬೇಗನೇ ಟಿಕೆಟ್ ಖರೀದಿಸದಿದ್ದರೆ, ಟಿಕೆಟ್ ಸಿಗೋದು ಡೌಟು ಎನ್ನಲಾಗ್ತಿದೆ.

ಎಲ್ಲೆಡೆ ಸಿನಿಪ್ರಿಯರು ಮೊದಲ ದಿನಕ್ಕೆ ಟಿಕೆಟ್​ ಖರೀದಿ ಮಾಡಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ಬಹುತೇಕ ಟಿಕೆಟ್​ ಸೋಲ್ಡ್​ ಔಟ್​ ಆಗಿದೆ ಎನ್ನಲಾಗುತ್ತಿದೆ.

ಈಗಾಗಲೇ ಅರ್ಧಕ್ಕಿಂತ ಹೆಚ್ಚು ಟಿಕೆಟ್​ಗಳು ಸೋಲ್ಡ್​ ಆಗಿದೆ.  ವಿಕ್ರಾಂತ್ ಸಿನಿಮಾ ಬಗ್ಗೆ ಜನರಲ್ಲಿ ಬಹಳ ನಿರೀಕ್ಷೆ ಇದೆ. ಇದು ಪ್ಯಾನ್​ ಇಂಡಿಯಾ ಸಿನಿಮಾವಾಗಿದ್ದು, ಕೆಜಿಎಫ್​ ನಂತರ ಮತ್ತೊಮ್ಮೆ ಸ್ಯಾಂಡಲ್​ವುಡ್​ನ ಸಿನಿಮಾ ಎಲ್ಲೆಡೆ ಟ್ರೆಂಡಿಂಗ್​ನಲ್ಲಿದೆ.

ರಂಗಿತರಂಗ ಖ್ಯಾತಿಯ ಡೈರೆಕ್ಟರ್ ಅನೂಪ್ ಭಂಡಾರಿಯವರ ವಿಕ್ರಾಂತ್ ರೋಣ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಕಡೆಗೆ ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮಾಡಲಿದ್ದಾರೆ ಎನ್ನುವ ನಿರೀಕ್ಷೆ ದಟ್ಟವಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version