ಆ ಗ್ರಾಮ ಅಸ್ತಿತ್ವದಲ್ಲೇ ಇಲ್ಲ: ನಕಲಿ ದಾಖಲೆ ಸೃಷ್ಟಿಸಿ 43 ಲಕ್ಷ ವಂಚಿಸಿದ ಸರ್ಕಾರಿ ಉದ್ಯೋಗಿಗಳು!
ಅಸ್ತಿತ್ವದಲ್ಲೇ ಇಲ್ಲದ ಗ್ರಾಮವನ್ನು ಇದೆ ಎಂಬಂತೆ ದಾಖಲೆಗಳಲ್ಲಿ ಸೃಷ್ಟಿಸಿ ಸರಕಾರಿ ಉದ್ಯೋಗಿಗಳು 43 ಲಕ್ಷ ರೂಪಾಯಿಯನ್ನು ವಂಚಿಸಿದ ಪ್ರಕರಣ ಪಂಜಾಬಿನ ಫಿರೋಜ್ಪುರದಲ್ಲಿ ನಡೆದಿದೆ. ನ್ಯೂ ಘಾಟಿ ರಾಜೋ ಕಿ ಎಂಬ ಹೊಸ ಗ್ರಾಮವನ್ನು ಕಾಗದದಲ್ಲಿ ಸೃಷ್ಟಿಸಿದ ಅಧಿಕಾರಿಗಳು ಸರ್ಕಾರದಿಂದ ಭಾರಿ ಮೊತ್ತವನ್ನ ಪಡಕೊಂಡು ವಂಚಿಸಿದ್ದಾರೆ. ಮಾತ್ರ ಅಲ್ಲ ಸರಕಾರದ ಹಣವನ್ನು ಹೇಗೆಲ್ಲ ಮೋಸ ಮಾಡಿ ಕಬಳಿಸಬಹುದು ಎಂಬ ಹೊಸ ವಿಧಾನವನ್ನು ತೋರಿಸಿಕೊಟ್ಟಿದ್ದಾರೆ.
ಫಿರೋಜ್ಪುರದ ಭಾರತ ಪಾಕಿಸ್ತಾನ ಗಡಿಯ ಜೀರೋ ಲೈನ್ ನೊಂದಿಗೆ ಸೇರಿಕೊಂಡು ಘಾಟಿ ರಾಜೋ ಕೆ ಎಂಬ ಗ್ರಾಮದ ಹತ್ತಿರ ನ್ಯೂ ಘಾಟಿ ರಾಜೋ ಕಿ ಅಸ್ತಿತ್ವದಲ್ಲಿದೆ ಎಂದು ಈ ಅಧಿಕಾರಿಗಳು ಸರಕಾರವನ್ನು ನಂಬಿಸಿದ್ದಾರೆ. ಆದರೆ ಗೂಗಲ್ ಮ್ಯಾಪ್ ನಲ್ಲಿ ಇಂತದ್ದೊಂದು ಗ್ರಾಮವೇ ಕಾಣಿಸುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಈ ಪ್ರಕರಣ ಬಯಲಿಗೆ ಬಂದಿದೆ. 2018- 19 ರಲ್ಲಿ ಈ ಭಾರಿ ವಂಚನೆಯ ಘಟನೆ ನಡೆದಿದೆ. ಅಧಿಕಾರಿಗಳು ಕೃತಕವಾಗಿ ಒಂದು ಗ್ರಾಮವನ್ನು ಸೃಷ್ಟಿಸಿದ್ದಲ್ಲದೆ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಸರಕಾರದಿಂದ 43 ಲಕ್ಷ ರೂಪಾಯಿ ಅನುಮೋದನೆಯನ್ನು ಪಡೆದುಕೊಂಡಿದ್ದಾರೆ. ಇದೀಗ ಇಂತಹ ಖದೀಮಾ ಅಧಿಕಾರಿಗಳ ವಿರುದ್ಧ ಸರ್ಕಾರ ತನಿಖೆಗೆ ಆದೇಶಿಸಿದೆ ಮತ್ತು ಈ ಅಧಿಕಾರಿಗಳನ್ನು ಪತ್ತೆ ಹಚ್ಚುವ ಶ್ರಮ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj