ವಾಮಾಚಾರ ಮಾಡುತ್ತಾನೆ ಎಂದು ಆರೋಪಿಸಿ ವೃದ್ಧನನ್ನು ಕೆಂಡದ ಮೇಲೆ ಡಾನ್ಸ್ ಮಾಡಿಸಿದ ಗ್ರಾಮಸ್ಥರು! - Mahanayaka

ವಾಮಾಚಾರ ಮಾಡುತ್ತಾನೆ ಎಂದು ಆರೋಪಿಸಿ ವೃದ್ಧನನ್ನು ಕೆಂಡದ ಮೇಲೆ ಡಾನ್ಸ್ ಮಾಡಿಸಿದ ಗ್ರಾಮಸ್ಥರು!

maharstra
07/03/2024

75 ವರ್ಷದ ವ್ಯಕ್ತಿಯೊಬ್ಬರು ವಾಮಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಉರಿಯುತ್ತಿರುವ ಕೆಂಡದ ಮೇಲೆ ಬಲವಂತವಾಗಿ ಡ್ಯಾನ್ಸ್ ಮಾಡಿಸಿರುವ ವಿಲಕ್ಷಣ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿ ಮಾಟಮಂತ್ರ ಮಾಡುತ್ತಿದ್ದಾರೆಂದು ಆರೋಪಿಸಿ ಆತ ವಾಸಿಸುತ್ತಿದ್ದ ಮನೆಗೆ 15–20 ಜನರು ನುಗ್ಗಿ ಆತನನ್ನುಗ್ರಾಮದ ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ದಳಕ್ಕೆ ಕರೆದೊಯ್ದು ಅಲ್ಲಿ ಆತನಿಗೆ ಕಲ್ಲಿದ್ದಲಿನಿಂದ ಸುಡುವ ಶಿಕ್ಷೆ ವಿಧಿಸಿದ್ದರು.

ಈ ಕಾರ್ಯಕ್ರಮದಲ್ಲಿ ಆತನ ಕೈಗಳನ್ನುಹಿಂದಕ್ಕೆ ಕಟ್ಟಿ ಥಳಿಸಿ ಬಲವಂತವಾಗಿ ಬಿಸಿ ಕೆಂಡದ ಮೇಲೆ ಡ್ಯಾನ್ಸ್ ಮಾಡಿಸಿದ್ದಾರೆ. ಪರಿಣಾಮವಾಗಿ ಆತನ ಬೆನ್ನು ಮತ್ತು ಕಾಲುಗಳಿಗೆ ಸುಟ್ಟಗಾಯಗಳಾಗಿವೆ.

ಇನ್ನು ವೃದ್ದನನ್ನು ಅಮಾನುಷವಾಗಿ ಡ್ಯಾನ್ಸ್ ಮಾಡಿಸಿರುವ ದೃಶ್ಯಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಂತ್ರಸ್ತನ ಕುಟುಂಬದ ದೂರಿನನ್ವಯ ಆರೋಪಿಗಳ ವಿರುದ್ದ ಎಫ್ ಐ ಆರ್ ದಾಖಲಿಸಿ , ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ