8 ದಿನದಿಂದ ಬಾರದ ನೀರು ಹಳ್ಳದ ನೀರು ಕುಡಿಯುತ್ತಿರುವ ಗ್ರಾಮಸ್ಥರು!
ಕುಡಿಯುವ ನೀರಿನ ಸಮಸ್ಯೆ ಜಲಜೀವನ್ ಮಿಷನ್ ಕಾಮಗಾರಿ ವೇಳೆ ಗ್ರಾಮಕ್ಕೆ ಸರಬರಾಜಾಗುವ ನೀರಿನ ಪೈಪ್ ಲೈನ್ ವಿದ್ಯುತ್ ಕೇಬಲ್ ತುಂಡಾಗಿರುವುದರಿಂದ ಹಳ್ಳದ ಕಲುಷಿತ ನೀರನ್ನು ಬಸಿದು ಮನೆಗಳಿಗೆ ತಂದು ಕುಡಿಯುವಂಥ ಪರಿಸ್ಥಿತಿ ಆನೆ ಹೊಲ ಗ್ರಾಮದಲ್ಲಿ ನಿವಾಸಿಗಳಿಗೆ ಸಮಸ್ಯೆ ಉಂಟಾಗಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಆನೆ ಹೋಲಗ್ರಾಮದಲ್ಲಿ 200 ಮನೆಗಳಿದ್ದು 400 ಹೆಚ್ಚು ಜನಸಂಖ್ಯೆ ಹೊಂದಿರುವ ಕುಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕಲುಷಿತ ನೀರನ್ನು ಬಳಸುವಂತಹ ಪರಿಸ್ಥಿತಿ ಉದ್ಭವಿಸಿದೆ.
ಅವೈಜ್ಞಾನಿಕ ಕಾಮಗಾರಿ : ಜಲಜೀವನ್ ಮಿಷನ್ ಯೋಜನೆಯಡಿ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಕೊಕ್ಕು ಬೋರೆ ತುಳಸಿಕೆರೆ ಪಾಲಾರ್ ಪಡಸಲನಾಥ ಗ್ರಾಮಗಳಲ್ಲಿ ಕಾಮಗಾರಿ ನಡೆಯುತ್ತಿದೆ ಈಗಾಗಲೇ ಶೇಕಡ 80% ರಷ್ಟು ಪೈಪ್ಲೈನ್ ಅಳವಡಿಕೆ ಪೂರ್ಣಗೊಂಡಿದೆ. ಆದರೆ ಆನೆ ಹೊಲ ಗ್ರಾಮದಲ್ಲಿ ಪೈಪ್ಲೈನ್ ಅಳವಡಿಸಲು ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆಯುವಾಗ ಅವೈಜ್ಞಾನಿಕವಾಗಿ ಗ್ರಾಮಕ್ಕೆ ಸರಬರಾಜ ಆಗುವ ನೀರಿನ ಪೈಪ್ಲೈನ್ ಮತ್ತು ವಿದ್ಯುತ್ ಕೇಬಲ್ ಕಳೆದ ಎಂಟು ದಿನಗಳ ಹಿಂದೆ ಪೈಪ್ ಲೈನ್ ಓಡೆದಿದೆ ದುರಸ್ತಿ ಪಡಿಸದೆ ಇರುವುದರಿಂದ ಗ್ರಾಮದಲ್ಲಿ ನೀರಿಗಾಗಿ ಕಿಲೋಮೀಟರ್ಗಟ್ಟಲೆ ತೆರಳುವಂಥ ಪರಿಸ್ಥಿತಿ ಉಂಟಾಗಿದೆ.
ಕಲಿಸಿದ ನೀರು ಬಸಿದು ಬಳಕೆ: ಹಳ್ಳದ ನೀರೇ ನಿವಾಸಿಗಳಿಗೆ ಆನೆ ಹೋಲ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಗ್ರಾಮದ ಸಮೀಪದಲ್ಲಿ ಹರಿಯುತ್ತಿರುವ ಕರಡಿ ಶೀಳು ಹಳ್ಳದಿಂದ ಮಹಿಳೆಯರು ಕಲಿಷಿತ ನೀರು, ಬಳಕೆ ಮಾಡಲು ಗ್ರಾಮದ ಪರ್ಯಾಯ ವ್ಯವಸ್ಥೆ ಇಲ್ಲದೆ ಮಹಿಳೆಯರು ಹಳ್ಳದ ನೀರನ್ನು ಬಿಂದಿಗೆಗೆ ಬಟ್ಟೆಯಲ್ಲಿ ಸೋಸಿ ಕುಡಿಯಲು ತರುವಂತ ಸೂಚನೆಯ ಸ್ಥಿತಿ ಉಂಟಾಗಿದೆ
ಹಾಳಾದ ಪೈಪ್ ಲೈನ್ :
ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಪಿ ಡಿ ಓ ಕಿರಣ್ ಕುಮಾರ್, ಕಳೆದ ಎಂಟು ದಿನಗಳ ಹಿಂದೆ ಜಲಜೀವನ್ ಮಿಷನ್ ಪೈಪ್ ಲೈನ್ ಕಾಮಗಾರಿ ವೇಳೆ ಜೆಸಿಬಿ ಯಂತ್ರದಲ್ಲಿ ಗ್ರಾಮಕ್ಕೆ ಸರಬರಾಜು ಆಗುತ್ತಿದ್ದ ಪೈಪ್ ಲೈನ್ ಮತ್ತು ಕೇಬಲ್ ತುಂಡಾಗಿರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ ಗ್ರಾಮದ ಸಮೀಪ ಇರುವ ಹಳ್ಳದ ಕಲುಷಿತ ನೀರನ್ನು ಬಟ್ಟೆಯಲ್ಲಿ ಬಸಿದು ತರುವಂತ ಸಮಸ್ಯೆ ಉಂಟಾಗಿದೆ ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ನೀರಿನ ಸಮಸ್ಯೆ ಸರಿದೂಗಿಸುವಂತೆ ಹಿರಿಯ ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ಆನೆ ಹೋಲ ಗ್ರಾಮ ನಿವಾಸಿ ಮಹೇಶ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಲಜೀವನ್ ಮಿಷನ್ ಮನೆಮನೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ವಿವಿಧ ಗ್ರಾಮಗಳಲ್ಲಿ ಕಾಮಗಾರಿ 80ರಷ್ಟು ಮುಗಿದಿದೆ ಪೈಪ್ಲೈನ್ ಅಳವಡಿಸುವಾಗ ಈ ಹಿಂದೆ ಗ್ರಾಮಕ್ಕೆ ನೀರು ಸರಬರಾಜಾಗುತ್ತಿದ್ದ ಪೈಪ್ ಲೈನ್ ಹಾಳಾಗಿದೆ ತುರ್ತಾಗಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw